ತಮ್ಮ ಪಕ್ಷದಲ್ಲಿ ಏನಾದರೂ ಸಮಸ್ಯೆ ಅಥವಾ ಕಷ್ಟ ಬಂದಿದೆಯೆಂದರೇ ಅಲ್ಲಿ ಕೂಡಲೇ ಪ್ರತ್ಯಕ್ಷವಾಗುವವರು ಕಾಂಗ್ರೆಸ್ ನ ಪ್ರಮುಖ ನಾಯಕರಲ್ಲೊಬ್ಬರಾದ ಡಿ.ಕೆ.ಶಿವಕುಮಾರ್ ಅವರು. ಆದರೆ ಅದೇಕೋ ಈಗ ಅವರು ಸಂಕಷ್ಟದಲ್ಲಿರುವಾಗ ಅವರ ಪಕ್ಷವೇ ಕೈ ಕೊಟ್ಟಿತೇ? ಎನ್ನುವ ಅನುಮಾನಗಳನ್ನು ಹುಟ್ಟು ಹಾಕಿವೆ ಸದ್ಯದ ಪರಿಸ್ಥಿತಿಗಳು. ಡಿ.ಕೆ.ಶಿವಕುಮಾರ್ ಕೇವಲ ರಾಜ್ಯದ ಕಾಂಗ್ರೆಸ್ ಮಾತ್ರವಲ್ಲದೇ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಕೂಡಾ ತಮ್ಮ ಛಾಪನ್ನು ಮೂಡಿಸಿ, ಹಲವು ಸಂದರ್ಭಗಳಲ್ಲಿ ಆಪದ್ಭಾಂಧವನಾಗಿ ತಮ್ಮ ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಿರುವ ಉದಾಹರಣೆಗಳುಂಟು.

ಆದರೆ ಈಗ ಪರಿಸ್ಥಿತಿ ತದ್ವಿರುದ್ಧವಾಗಿದೆ. ಪಕ್ಷಕ್ಕಾಗಿ ಸದಾ ನಿಲ್ಲುತ್ತಿದ್ದ ಡಿಕೆಶಿ ಈಗ ಜಾರಿ ನಿರ್ದೇಶನಾಲಯ(ಇಡಿ)ದ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ಏನೆಂದರೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ, ಪಕ್ಷದ ಯಾವೊಬ್ಬ ನಾಯಕರೂ ಅವರ ನೆರವಿಗೆ ಧಾವಿಸಿಲ್ಲ ಎಂಬ ಮಾತಿಗಳು ಈಗ ಕೇಳಿ ಬಂದಿವೆ. ಈ ಹಿಂದೆ ಅಂದರೆ 2017ರ ಆಗಸ್ಟ್ ನಲ್ಲಿ ಡಿಕೆಶಿ ಅವರ ಮೇಲೆ ಐಟಿ ಧಾಳಿ ನಡೆದಂತಹ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು ಸಂಸತ್ ನಲ್ಲೇ ಡಿ.ಕೆ.ಶಿವಕುಮಾರ್ ಅವರ ಪರವಾಗಿ ನಿಂತು ಮಾತನಾಡಿದ್ದರು. ಆದರೆ ಈಗ ಅವರು ಇದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಆಗಲೂ ಸಹಾ ರಾಜ್ಯ ನಾಯಕರು ಡಿಕೆಶಿ ಪರವಾಗಿ ಅಷ್ಟೊಂದು ಬೆಂಬಲ ನೀಡಿರಲಿಲ್ಲ ಎಂಬುದು ವಾಸ್ತವ. ಆ ಸಿಟ್ಟನ್ನು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ಸ್ವತಃ ಡಿ.ಕೆ ಶಿವಕುಮಾರ್ ಅವರೇ ಹೊರಹಾಕಿದ್ದುಂಟು. ಈ ಬಾರಿ ಕೂಡಾ ಅದೇ ನಡೆದಿದ್ದು ರಾಜ್ಯದ ನಾಯಕರಂತೆ ಅತ್ತ ಹೈಕಮಾಂಡ್ ಮಟ್ಟದ ನಾಯಕರು ಕೂಡಾ ಮೌನಕ್ಕೆ ಜಾರಿ ಕೊಂಡಿರುವಂತೆ ಕಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಸಂಕಷ್ಟ ಎದುರಾದಾಗಲೆಲ್ಲಾ ನೆರವಿಗೆ ನಿಂತ ಟ್ರಬಲ್ ಶೂಟರ್ ವಿಷಯದಲ್ಲಿ ಎಲ್ಲ ನಾಯಕರು ವಹಿಸಿರುವ ಮೌನ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here