City Big News Desk.
ಮಳೆಗಾಲ ಬಂತೆಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಲ್ಲಿ ಕಾಡುವಂತಹ ಸಾಮಾನ್ಯ ಕಾಯಿಲೆ ಎಂದರೆ ಅದು ಶೀತ, ನೆಗಡಿ, ಕೆಮ್ಮು ಜ್ವರ ಇಂತಹ ಕಾಯಿಲೆಗಳನ್ನು ನಾವು ಮನೆಯಲ್ಲಿ ಸಿಗುವಂತಹ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಇವುಗಳನ್ನು ನಾವು ನಿವಾರಿಸಿಕೊಳ್ಳಬಹುದು.
ಹೌದು, ಬದಲಾಗುತ್ತಿರುವ ಹವಾಮಾನದಿಂದಾಗಿ ಬಹಳಷ್ಟು ಜನರಿಗೆ ಅನಾರೋಗ್ಯ ಉಂಟಾಗುವುದು ಸಹಜ. ಶೀತ ನೆಗಡಿಯಿಂದಾಗಿ ಬಹಳ ದಣಿದು ಬಿಡುತ್ತೇವೆ. ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಿ ಮಾತ್ರೆ ಸ್ವೀಕರಿಸುವುದು ಒಳ್ಳೆಯದೆ. ಆದರೆ ಶೀತ ನೆಗಡಿಯಿಂದ ಮುಕ್ತಿ ಪಡೆಯಲು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮನೆಯಲ್ಲಿಯೇ ತಯಾರಿಸಬಹುದಾದ ಮದ್ದುಗಳು ಇಲ್ಲಿವೆ ನೋಡಿ.
ಶೀತವಾದಾಗ ಗಂಟಲು ಮೂಗು ಕಟ್ಟಿದಂತಾಗುತ್ತದೆ ಆ ಸಮಯದಲ್ಲಿ ಶುಂಠಿ ಮತ್ತು ಜೇನು ಬಹಳ ಉತ್ತಮವಾದದ್ದು. ಶುಂಠಿಯನ್ನು ಸಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಸಮಪ್ರಮಾಣದ ಜೇನು ಬೆರೆಸಿ ಸೇವಿಸಿ. ಇದನ್ನು ಹಾಲಿನ ಜೊತೆ ಮಿಶ್ರಮಾಡಿ ಬೇಕಾದರೂ ಸೇವಿಸ ಬಹುದು. ಇದರಿಂದ ಮೂಗು ಕಟ್ಟುವಿಕೆ ದೂರಾಗುತ್ತದೆ ಮತ್ತು ಗಂಟಲು ಒಣಗುವುದು ತಪ್ಪುತ್ತದೆ.
ಅರಿಶಿಣವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವಿಸುವುದರಿಂದ ಶೀತ ನೆಗಡಿಯಿಂದ ಮುಕ್ತಿ ಸಿಗುತ್ತದೆ. ಬೆಲ್ಲ ಕೂಡಾ ಶೀತ ನೆಗಡಿಗೆ ಉತ್ತಮ ರಾಮಬಾಣ.ಬಿಸಿ ನೀರಿಗೆ ಕರಿಮೆಣಸು ಜೀರಿಗೆ ಬೆಲ್ಲ ಸೇರಿಸಿ ಕುದಿಸಿ. ಅದನ್ನು ಕುಡಿಯುವುದರಿಂದ ನೆಗಡಿ ದೂರವಾಗುತ್ತದೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.