ನಮ್ಮ ಪ್ರತಿನಿತ್ಯ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಳಿಗ್ಗೆ ಎದ್ದು ಕೂಡಲೇ ವಿವಿಧ ಬಗೆಯ ಹಣ್ಣುಗಳನ್ನು ಸೇವಿಸುತ್ತೇವೆ.
ಹೌದು ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೇವಲ ನಾವು ಹಣ್ಣುಗಳನ್ನು ಸೇವಿಸುತ್ತೇವೆ. ಆದರೆ ಹಣ್ಣುಗಳಲ್ಲಿರುವಂತಹ ಬೀಜಗಳು ಸಹ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಮಗೆ ಗೊತ್ತಿರುವ ಹಾಗೆ ಪಪ್ಪಾಯ ಅಥವಾ ಪರಂಗಿ ಹಣ್ಣನ್ನು ನಾವೆಲ್ಲರೂ ಸೇವಿಸಿರುತ್ತೇವೆ.
ನಾವು ಕೇವಲ ಪಪ್ಪಾಯ ಹಣ್ಣನ್ನು ಮಾತ್ರ ಸೇವಿಸುತ್ತೇವೆ ಅದರಲ್ಲಿರುವ ಬೀಜಗಳನ್ನು ಬಿಸಾಕಿಬಿಡುತ್ತೇವೆ. ಪರಂಗಿ ಬೀಜಗಳನ್ನು ನಾವು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಹೌದು, ಪರಂಗಿ ಹಣ್ಣಿನ ಜೊತೆಗೆ ಅವುಗಳ ಬೀಜಗಳು ಸಹ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. ಪರಂಗಿ ಹಣ್ಣು ತುಂಬಾ ಆರೋಗ್ಯಕರ ಹಣ್ಣು. ಇದನ್ನು ಆಗಾಗ ಸೇವಿಸುತ್ತಿರಬೇಕು. ಪಪ್ಪಾಯಿ ಹಣ್ಣುಗಳಲ್ಲಿ ಮಾತ್ರವಲ್ಲದೆ ಬೀಜಗಳಲ್ಲಿಯೂ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ.
ಕ್ಯಾನ್ಸರ್ ತಡೆಯುತ್ತದೆ: ಪರಂಗಿ ಬೀಜಗಳಲ್ಲಿರುವ ಶಕ್ತಿಶಾಲಿ ಪಾಲಿಫಿನಾಲ್ಗಳು ನಮ್ಮ ದೇಹದಲ್ಲಿನ ವಿವಿಧ ರೀತಿಯ ಕ್ಯಾನ್ಸರ್ಗಳನ್ನು ತಡೆಯುತ್ತದೆ. ಅವುಗಳಲ್ಲಿರುವ ಐಸೊಥಿಯೋಸೈನೇಟ್ ಕ್ಯಾನ್ಸರ್ ಕೋಶಗಳ ರಚನೆ ಮತ್ತು ಬೆಳವಣಿಗೆಯನ್ನು ತಡೆಯುತ್ತದೆ.
ರಾಡಿಕಲ್ಗಳನ್ನು ತಪ್ಪಿಸುತ್ತದೆ: ಪಪ್ಪಾಯಿ ಬೀಜಗಳಲ್ಲಿ ಪ್ರೋಟೀನ್ಗಳು, ಕೊಬ್ಬುಗಳು ಮತ್ತು ಫೈಬರ್ ಸಮೃದ್ಧವಾಗಿವೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಸತು ಮತ್ತು ಇತರ ಖನಿಜಗಳನ್ನು ಹೊಂದಿರುತ್ತದೆ. ಆಲ್ಕಲಾಯ್ಡ್ಗಳು, ಫ್ಲೇವನಾಯ್ಡ್ಗಳು ಮತ್ತು ಪಾಲಿಫಿನಾಲ್ಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಅತ್ಯಂತ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು.
ಕೊಲೆಸ್ಟ್ರಾಲ್ ಕಡಿಮೆ: ಈ ಹಣ್ಣಿನ ಬೀಜಗಳಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಅವು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ. ಇದು ಉತ್ತಮ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.