ಕೊರೊನಾ ನಡೆಸಿರುವ ಅಟ್ಟಹಾಸವು ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಮರಣ ಮೃದಂಗವನ್ನು ಬಾರಿಸಿದೆ. ಭಾರತದಲ್ಲಿ ಇದರ ತೀವ್ರತೆಯು ಕಡಿಮೆ ಎಂದು ಅನಿಸಿದರೂ ಕೂಡಾ ಈಗಾಗಲೇ ನಾವು ಏಳು ಸಾವಿರದ ಗಡಿಯನ್ನು ತಲುಪುತ್ತಿದ್ದೇವೆ. ಲಾಕ್ ಡೌನ್ ನಂತರವೂ, ವೈದ್ಯಕೀಯ ಸಿಬ್ಬಂದಿಯ ಅವಿರತ ಶ್ರಮದ ಹೊರತಾಗಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಂಕಿತರ ಚಿಕಿತ್ಸೆಗಾಗಿ ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲಿರುಳು ಎನ್ನದೇ, ತಮ್ಮ ಮನೆಗಳಿಂದ, ಕುಟುಂಬ ವರ್ಗದವರಿಂದ ದೂರ ಉಳಿದು, ಪ್ರಾಣವನ್ನು ಪಣಕ್ಕಿಟ್ಟು ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದಾರೆ.

ಹೀಗೆ ಸೇವೆಯನ್ನು ಒದಗಿಸುತ್ತಿದ್ದ ವೈದ್ಯರಾದ 62 ವರ್ಷದ ಇಂದೋರ್ ನ ವೈದ್ಯರಾದಂತಹ ಡಾ.ಶತೃಘ್ನ ಪಂಜವಾನಿ ಎಂಬುವವರಿಗೆ ನಾಲ್ಕು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಎಂಬುದು ತಿಳಿದು ಬಂದಿತ್ತು.
ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಕೂಡಾ ಇವರಿಗೆ ಸೋಂಕು ತಗುಲಿರುವುದು ನಿಜಕ್ಕೂ ದುರಾದೃಷ್ಟ ಎನ್ನಬಹುದಾಗಿದೆ. ಜನರಲ್ ಫಿಸಿಷಿಯನ್ ಆಗಿದ್ದ ಸಂತ್ರಸ್ತರು ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಮ್‌ಹೆಚ್‌ಒ) ಡಾ.ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.

 

ಇವರಿಗೆ ಮೂವರು ಮಕ್ಕಳಿದ್ದಾರೆ. ಮೂರು ಜನ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಇದ್ದಾರೆ. ಅಲ್ಲಿ ಕೂಡಾ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬರುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ. ತಂದೆಗೆ ಅವರು ಅಂತಿಮ ವಿದಾಯ ಹೇಳಲು ವಿಡಿಯೋ ಕಾಲ್ ಮಾಡಿ, ವಿದಾಯವನ್ನು ಹೇಳಿದ್ದಾರೆ. ಕೊರೊನಾ ಎಂಬ ಮಹಾಮಾರಿಯಿಂದ ಹೆತ್ತವರ ಅಂತಿಮ ಸಂಸ್ಕಾರವನ್ನು ಕೂಡಾ ಮಾಡಲಾರದ ಪರಿಸ್ಥಿತಿ ಎದುರಾಗಿದ್ದು ನಿಜಕ್ಕೂ ಬಹಳ ದುಃಖವನ್ನು ಉಂಟು ಮಾಡುವ ವಿಷಯವಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here