ಪ್ರಾಣವನ್ನೇ ಪಣಕ್ಕಿಟ್ಟು ಕೊರೊನ ಸೋಂಕಿತರ ರಕ್ಷಣೆ ಮಾಡಲು ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಕ್ವಾರಂಟೈನ್ ನಲ್ಲಿರುವ ಜಮಾತ್ ಕಾರ್ಯಕರ್ತರು ಉಗುಳುತ್ತಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ.ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಘಿ ಜಮಾತ್ ಮಸೀದಿಯಿಂದ ವಶಕ್ಕೆ ಪಡೆಯಲಾದ ತಬ್ಲೀಘಿ ಜಮಾತ್ ಕಾರ್ಯಕರ್ತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಮೇಲ್ವಿಚಾರಣೆ ಮತ್ತು ಚಿಕಿತ್ಸೆಗಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಆದರೆ ಈ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧವೇ ಜಮಾತ್ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸುತ್ತಿದ್ದು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಉಗುಳುತ್ತಿದ್ದಾರೆ.ಇನ್ನು ವಿಡಿಯೋ ಒಂದರಲ್ಲಿ ಜಮಾತ್ ಕಾರ್ಯಕರ್ತರು ವೈದ್ಯರ ಮೇಲೆ ಕಲ್ಲು ತೂರಾಟ ನಡೆಸುವುದು ಕಂಡು ಬಂದಿದೆ.

ಮತ್ತೊಂದೆಡೆ ನಿಜಾಮುದ್ದೀನ್ ಮರ್ಕಜ್ ಗೆ ಸಂಬಂಧಿಸಿದಂತೆ ಗಂಭೀರ ವರದಿಯೊಂದು ಬಹಿರಂಗಗೊಂಡಿದೆ. ನಿಜಾಮುದ್ದೀನ್ ಠಾಣೆಯ SHO ಮುಕೇಶ ವಾಲಿಯಾ ಅವರ ದೂರಿನ ಆದಾರದ ಮೇಲೆ ತಬ್ಲೀಗಿ ಜಮಾತ್ ಹಾಗೂ ಮರ್ಕಜ್ ಗೆ ಸಂಬಂಧಿಸಿದಂತೆ ಒಟ್ಟು ಆರು ಜನರ ವಿರುದ್ಧ FIR ದಾಖಲಿಸಲಾಗಿದೆ. ಇದರಲ್ಲಿ ತಬ್ಲೀಗಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕೂಡ ಶಾಮೀಲಾಗಿದ್ದಾರೆ.

ಮೌಲಾನಾ ಸಾದ್ ಜೊತೆಗೆ ಡಾ.ಜಿಶಾನ್, ಮುಂತಿ ಶಹಜಾದ್, ಮೊಹಮ್ಮದ್ ಆಶರ್ರಫ್, ಮುರ್ಸಲೀನ್ ಸೈಫಿ, ಯೂನಿಸ್ ಹಾಗೂ ಮೊಹಮದ್ ಸಲಾಂ ವಿರುದ್ಧ ಕೂಡ FIR ದಾಖಲಿಸಲಾಗಿದೆ. ದೆಹಲಿ ಪೊಲೀಸರು ಜಾರಿಗೊಳಿಸಲಾಗಿರುವ ವಿಡಿಯೋದಲ್ಲಿ ಈ ಆರು ಜನರನ್ನು ನೀವು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ನಿಜಾಮುದ್ದೀನ್ SHO ಮುಕೇಶ್ ವಾಲಿಯಾ ಇವರೆಲ್ಲರಿಗೆ ಮರ್ಕಜ್ ಅನ್ನು ಖಾಲಿಗೊಳಿಸಲು ಮನವಿ ಮಾಡುತ್ತಿರುವುದು ಕಂಡುಬಂದಿದೆ.

ಅಷ್ಟೇ ಅಲ್ಲ ಮಾರ್ಚ್ 28ರ ರಾತ್ರಿ ಮೌಲಾನಾ ಸಾದ್ ಕಣ್ಮರೆಯಾಗಿದ್ದು, ಅವರಿಗಾಗಿ ಶೋಧಕಾರ್ಯದಲ್ಲಿ ತೊಡಗಿರುವ ಪೊಲೀಸರು ವಿವಿಧ ಪ್ರದೇಶಗಳಲ್ಲಿ ರೆಡ್ ನಡೆಸುತ್ತಿದ್ದಾರೆ. ಮೌಲಾನಾ ಸಾದ್ ಅವರಿಗೆ ಸಂಬಂಧಿಸದ ಹಲವು ಸ್ಥಾನಗಳಲ್ಲಿ ಈಗಾಗಲೇ ರೆಡ್ ನಡೆಸಲಾಗಿದೆ ಎನ್ನಲಾಗಿದೆ. ಮೌಲಾನಾ 14 ದಿನಗಳ ಸೆಲ್ಫ್ ಕ್ವಾರಂಟೀನ್ ಗೆ ಒಳಗಾಗಿರಬಹುದು ಎಂದು ಕೆಲವರು ಮಾಹಿತಿ ನೀಡಿದ್ದಾರೆ. ಜೊತೆಗೆ ಇದುವರೆಗೂ ಕೂಡ ಮರ್ಕಜ್ ಅನ್ನು ಸ್ಯಾನಿಟೈಸ್ ಗೊಲಿಸಲಾಗಿಲ್ಲ ಎನ್ನಲಾಗುತ್ತಿದೆ.

ವಿಡಿಯೋ ನೋಡಿ

ಕೊರೋನಾ ಪರೀಕ್ಷೆಗೆ ಬಂದ ಡಾಕ್ಟರ್ ರನ್ನು ಕಲ್ಲು ಹೊಡೆದು ಓಡಿಸುತ್ತಿರುವ ವಿಕೃತ ಮನಸ್ಥಿತಿಯವರು… ಇಂತವರಿಗೆಲ್ಲ ಏನು ಮಾಡಬೇಕು… ?

Suddi Mane यांनी वर पोस्ट केले बुधवार, १ एप्रिल, २०२०

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here