ಅಪಘಾತ ಒಂದ್ರಲ್ಲಿ ತನ್ನ ಒಂದು ಕಾಲು ಕಳ್ಕೊಂಡ ನಾಯಿಯೊಂದು, ತಾನಿರೋ ಹಳ್ಳಿಯಲ್ಲಿ ಈಗ ಹೀರೋ ಆಗಿದೆ. ಮಾನವೀಯತೆಯನ್ನು ಮರೆತು ಕೆಲವರು ಮಾಡಿದ್ದ ನಾಚಿಕೆಗೇಡಿನ‌ ಕೆಲಸವನ್ನು, ಈ ನಾಯಿ ಗುರುತಿಸಿ, ಈಗ ಹೀರೋ ಆಗಿದ್ರೆ, ಹೀನ ಕೃತ್ಯ ಮಾಡಿರೋ ಜನರು ಮಾತ್ರ ತಲೆ ತಗ್ಗಿಸೋ ಹಾಗೆ ಆಗಿದೆ. ಥೈಲ್ಯಾಂಡ್ ನ ನಾಖೋನ್‌ ರಾಟ್‌ಛಾಸಿಮಾ ಪ್ರಾಂತ್ಯದಲ್ಲಿನ ಈ ಘಟನೆ ನಡೆದಿದ್ದು, ಅಪ್ರಾಪ್ರ ಬಾಲಕಿಯೊಬ್ಬಳು, ಒಂದು ನವಜಾತ ಶಿಶುವನ್ನು ಮಣ್ಣಿನಲ್ಲಿ ಹೂತಿಟ್ಟು ಹೋಗಿದ್ದಾಳೆ. ಆದರೆ ಆ ಮಗುವಿನ ಪ್ರಾಣವನ್ನು ಈ ಶ್ವಾನ ಉಳಿಸಿ ಈಗ ಎಲ್ಲರಿಂದ ಶ್ಲಾಘನೆಗೆ ಪಾತ್ರವಾಗಿದೆ. ಮಗುವನ್ನು ಕೊಲ್ಲ ಬಯಸಿದ ಮನುಷ್ಯರಿಗಿಂತ,ಅದನ್ನು ಉಳಿಸಿ ಈ ಶ್ವಾನ ಮಾನವೀಯತೆ ಪ್ರಾಣಿಗಳಲ್ಲಿ ಕೂಡಾ ಇದೆ ಎಂದು ತೋರಿಸಿದೆ.

15 ವರ್ಷದ ಹೆಣ್ಣುಮಗಳು ತಾಯಿಯಾಗಿದ್ದಳು. ಅವಳು ತನ್ನ ಪಾಲಕರಿಂದ ಆ ವಿಷಯವನ್ನು ಮುಚ್ಚಿಡಲು ತನ್ನ ಆಗ ಮಗುವನ್ನು ಮಣ್ಣಿನ ಅಡಿ ಹೂತಿಟ್ಟು ಹೋಗಿದ್ದಾಳೆ. ಆಗ ಪಿಂಗ್ ಪಾಂಗ್ ಹೆಸರಿನ ಈ ಮೂರು ಕಾಲುಗಳ ಶ್ವಾನ ಹೂತಿಟ್ಟಿದ್ದ ಮಗುವಿನ ವಾಸನೆಯನ್ನು ಗ್ರಹಿಸಿ, ಅಲ್ಲಿಗೆ ಹೋಗಿ
ಮಗುವನ್ನು ಹೂತಿಟ್ಟಿದ್ದ ಸ್ಥಳದಲ್ಲಿ ಮಣ್ಣನ್ನು ಕಾಲಿನಿಂದ ಅಗೆಯಲು ಪ್ರಾರಂಭಿಸಿದಾಗ, ನಾಯಿಯ ಮಾಲಿಕ ಉಸಾ ನಿಸೈಕಾ ಇದನ್ನು ಗಮನಿಸಿ ಅಲ್ಲಿ ನೋಡಿದಾಗ, ನಾಯಿ ಮಣ್ಣು ಅಗೆದ ಆ ಜಾಗದಲ್ಲಿ ಎಳೆ ಮಗುವಿನ ಕಾಲುಗಳು ಕಾಣಿಸಿದ್ದು, ಕೂಡಲೇ ಅವರು ಮಣ್ಣನ್ನು ತೆಗೆದು ಮಗುವನ್ನು ಹೊರ ತೆಗೆದಿದ್ದಾರೆ. ಗ್ರಾಮದಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಿಂಗ್ ಪಾಂಗ್ ಮೊದಲು ಚೆನ್ನಾಗಿತ್ತು. ಆಸರೆ ಕಾರ್ ಅಪಘಾತವೊಂದರಲ್ಲಿ ಪಿಂಗ್‌ ಪಾಂಗ್‌ ತನ್ನ ಒಂದು ಕಾಲು ಕಳೆದುಕೊಂಡಿತ್ತು. ಅದು ಹುಟ್ಟಿದಾಗಿನಿಂದ ನಾನೇ ಸಾಕಿ ಬೆಳೆಸಿದ್ದೆ ಎಂದು ನಿಸೈಕಾ ಬಹಳ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪಿಂಗ್ ಪಾಂಗ್ ಮಾಡಿರುವ ಕೆಲಸಕ್ಕೆ ಅಪಾರ ಮೆಚ್ಚುಗೆ ಸಿಕ್ಕಿದೆ. ಮಗು ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಆ ಮಗುವಿಗೆ ಜನ್ಮ ನೀಡಿ ಭಯದಿಂದ ಹೂತಿಟ್ಟು ಹೋದ ಆ ಬಾಲಕಿಗೆ ಮನೋವೈದ್ಯರ ಬಳಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here