ಟಗರು ಸಿನಿಮಾ ತೆರೆಗೆ ಬಂದ ನಂತರ ನಟ ಧನಂಜಯ ಅವರ ಪಾತ್ರಗಳ ಆಯ್ಕೆ ಬದಲಾಗಿದೆ.ಸಖತ್ ಚ್ಯೂಸಿ ಆಗಿರುವ ಧನಂಜಯ್ ಅವರಿಗೆ ಡಗರು ಚಿತ್ರದ ಡಾಲಿ ಪಾತ್ರ ತಂದುಕೊಟ್ಟ ಯಶಸ್ಸು ಮತ್ತು ಹೆಸರು ಅದ್ಭುತ ಎನ್ನಬಹು.ಟಗರು ಬ್ಲಾಕ್‌ಬಸ್ಟರ್ ಆಗಿದ್ದು ಹಸಿರಾಗಿರುವಾಗಲೇ ಡಾಲಿ ಧನಂಜಯ್ ಸದ್ಯಕ್ಕೆ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅವುಗಳ ಪೈಕಿ ರಾಮ್ ಗೋಪಾಲ್ ವರ್ಮ ಮತ್ತು ಕನ್ನಡದ ಭಾಸ್ಕರ್ ರಾಶಿ ಜೊತೆಯಾಗಿ ನಿರ್ಮಿಸುತ್ತಿರುವ ಬಹುಭಾಷಾ ಸಿನಿಮಾ ಭೈರವ ಗೀತ.ಮತ್ತೊಂದು ಕೆ ಪಿ ಶ್ರೀಕಾಂತ್ ನಿರ್ಮಾಣದ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್. ಭೈರವ ಗೀತ ಚಿತ್ರದ ಚಿತ್ರೀಕರಣೀಗ ಭರದಿಂದ ನಡೆಯುತ್ತಿದೆ.

ರಾಮ್ ಗೋಪಾಲ್ ವರ್ಮ ಅವರ ಕಂಪನಿ ಪ್ರಾಡಕ್ಟ್ ಮತ್ತು ಭಾಸ್ಕರ್ ರಾಶಿ ಅವರ ರಾಶಿ ಕಂಭೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಭೈರವ ಗೀತ ಚಿತ್ರಕ್ಕೆ ಸಿದ್ದಾರ್ಥ ನಿರ್ದೇಶನ ಮಾಡಿದ್ದಾರೆ.ಇದೊಂದು ನೈಜ ಘಟನೆ ಆಧರಿಸಿದ ಲವ್ ಸ್ಟೊರಿ ಎಂಬ ಟ್ಯಾಗ್ ಲೈನ್ ಇರುವ ಭೈರವ ಗೀತ ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆ ಆಗಿದೆ.

ಟೀಸರ್ ನಲ್ಲಿ ಅಬ್ಬರದ ಮಾಸ್ ದೃಶ್ಯಗಳು ಡಾಲಿ ಧನಂಜಯ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಮಾಸ್ ಪ್ರಿಯರಿಗೂ ಸಹ ರಸದೌತಣ ನೀಡುತ್ತಿವೆ.ಸಂಪೂರ್ಣ ಮಾಸ್ ಪ್ರಿಯರಿಗೆ ಮಾತ್ರವಲ್ಲದೆ ಲವ್ ಸೀನ್ಸ್ ಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಅದರಲ್ಲೂ ಧನಂಜಯ ಅವರು ನಾಯಕಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡುವ ದೃಶ್ಯಗಳು ಟೀಸರ್ ನಲ್ಲಿ ಸೌಂಡ್ ಮಾಡುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here