ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಅವರ ಆಡಳಿತವು ಕೋವಿಡ್ -19 ಅಥವಾ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ತನಗೆ ಪ್ರತ್ಯೇಕವಾಗಿ ನೀಡಬೇಕೆಂದು, ಜರ್ಮನ್ ವೈದ್ಯಕೀಯ ಕಂಪನಿಗೆ “ದೊಡ್ಡ ಮೊತ್ತದ ಹಣವನ್ನು” ನೀಡಲು ಮುಂದಾಗಿದೆ ಎಂದು ಜರ್ಮನ್ ಮಾಧ್ಯಮ ವರದಿ ಮಾಡಿದೆ.
ಜರ್ಮನ್ ಸರ್ಕಾರವು ಯುಎಸ್ ಈ ಕ್ರಮವನ್ನು ಒಂದು ಆಕ್ರಮಣಕಾರಿ ಸ್ವಾಧೀನದ ಬಿಡ್ ಎಂದು ಕರೆದಿದ್ದರೆ, ಅಮೆರಿಕ ವಿಶ್ವವನ್ನೇ ಕಂಗೆಡಿಸಿರುವ ಕೊರೊನಾ ವೈರಸ್ ನ ಲಸಿಕೆ ತನಗೆ ಮಾತ್ರ ಸೀಮಿತ ಎನ್ನುವ ವರ್ತನೆ ತೋರುತ್ತಿರುವುದು ವಿಶ್ವ ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಯುಎಸ್ ಅಧ್ಯಕ್ಷರು ತಮ್ಮ ದೇಶಕ್ಕಾಗಿ ಲಸಿಕೆಯನ್ನು ಸೀಮಿತ ಮಾಡುವ ಈ ಕೆಲಸಕ್ಕೆ ಟಬಿಂಜನ್ ಮೂಲದ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಕ್ಯೂರ್‌ವಾಕ್‌ಗೆ “ದೊಡ್ಡ ಮೊತ್ತದ ಹಣವನ್ನು” ನೀಡಿದ್ದಾರೆ ಎಂದು ಅಲ್ಲಿನ ಮಾದ್ಯಮವೊಂದು ಬರೆದಿದೆ. ಒಂದು ಅನಾಮಧೇಯ ಮೂಲದ ಪ್ರಕಾರ
ಯುಎಸ್ ಗಾಗಿ ಕೊರೋನ ವೈರಸ್ ವಿರುದ್ಧ ಲಸಿಕೆ ಪಡೆಯಲು ಟ್ರಂಪ್ ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದು, ಆದರೆ ಈ ಲಸಿಗೆ ಯುಎಸ್ ಗೆ ಮಾತ್ರ ಎನ್ನುವಂತೆ ಅವರು ವರ್ತನೆಯನ್ನು ತೋರುತ್ತಿದ್ದಾರೆ. ಆದರೆ ಜರ್ಮನಿ ತಾನು ಕೂಡಾ ಲಸಿಕೆಯ ತಯಾರಿಕೆಗೆ ಬಂಡವಾಳ ತೊಡಗಿಸಿದೆ.

ಜರ್ಮನಿಯ ಆರೋಗ್ಯ ಸಚಿವ ಹೆನ್ಸ್ ಸ್ಪಾಹ್ನ್ ಅವರು ಈ ಬಗ್ಗೆ ಮಾತನಾಡಿ ಲಸಿಕೆ ಕೇವಲ ಅಮೆರಿಕಾ ಗೆ ಮಾತ್ರವಲ್ಲ ಅಥವಾ ಯಾವುದೇ ಒಂದು ದೇಶಕ್ಕಾಗಿ ಅಲ್ಲ, ಈ ಲಸಿಕೆಯು ಕೊರೊನಾ ಭೀತಿಯಿಂದ ನಲುಗಿರುವ ಎಲ್ಲಾ ದೇಶಗಳಿಗೂ ಎಂದು ಹೇಳಿದ್ದಾರೆ.
ಅಲ್ಲದೆ ಜರ್ಮನಿಯ ಹಣಕಾಸು ಸಚಿವ ಪೀಟರ್ ಆಲ್ಟ್ ಮೇಯರ್ ಅವರು ಮಾದ್ಯಮಗಳ ಮುಂದೆ ಜರ್ಮನಿ ಮಾರಾಟಕ್ಕಿಲ್ಲ ಎಂದು ಪರೋಕ್ಷವಾಗಿ ಅಮೆರಿಕಾಕ್ಕೆ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here