ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಿರುವ ವಿಷಯ ಈಗಾಗಲೇ ಮಾದ್ಯಮಗಳ ಮೂಲಕ ಎಲ್ಲರಿಗೂ ತಿಳಿದಿದೆ. ಅದು ಮಾತ್ರವಲ್ಲದೇ ಅವರ ಆಗಮನದ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸಿದ್ಧತೆ, ಏರ್ಪಾಟುಗಳು ಇತರೆ ವಿಚಾರಗಳು ಕೂಡಾ ಮಾದ್ಯಮಗಳಲ್ಲಿ ಸದ್ದು ಮಾಡುತ್ತಿವೆ. ಡೊನಾಲ್ಡ್ ಟ್ರಂಪ್ ಅವರು ಇದೇ ಫೆಬ್ರವರಿ 24 ರಂದು ಎರಡು ದಿನಗಳ ಭೇಟಿಯ ನಿಮಿತ್ತ ಭಾರತಕ್ಕೆ ಬರುತ್ತಿದ್ದು, ಅವರ ಜೊತೆ ಅವರ ಪತ್ನಿ ಮೆಲಾನಿಯಾ ಆಗಮಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಅವರ ಜೊತೆಗೆ ಅಂದರೆ ಟ್ರಂಪ್ ದಂಪತಿ ಜೊತೆಯಲ್ಲಿ ಅವರ ಮಗಳು ಇವಾಂಕ ಮತ್ತು ಅಳಿಯ ಜೆರಾಲ್ಡ್ ಕುಶ್ನರ್ ಕೂಡಾ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ಆಗಮನದ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದ್ ನಲ್ಲಿ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷರು ಹಾಗೂ ಅವರ ಪತ್ನಿಗೆ ಸ್ವಾಗತವನ್ನು ಕೋರುವ ಶುಭಾಶಯಗಳನ್ನು ಹೊಂದಿರುವ ಬೃಹತ್ ಪೋಸ್ಟರ್ ಗಳು ಟ್ರಂಪ್ ಸಾಗುವ ದಾರಿಯುದ್ದಕ್ಕೂ ರಾರಾಜಿಸುತ್ತಿದ್ದು, ಟ್ರಂಪ್ ಸಾಗುವ ರಸ್ತೆಯುದ್ದಕ್ಕೂ ಅಲಂಕಾರವನ್ನು ಮಾಡಿ ಸಿಂಗರಿಸಲಾಗುತ್ತಿದೆ. ಇನ್ನು ಅಮೆರಿಕ ಅಧ್ಯಕ್ಷರು ಕೂಡಾ ಭಾರತಕ್ಕೆ ಬರಲು ಬಹಳ ಉತ್ಸುಕತೆಯನ್ನು ತೋರಿದ್ದಾರೆ.

ಡೊನಾಲ್ಡ್‌ ಟ್ರಂಪ್ ಅವರು ನಾನು ಭಾರತಕ್ಕೆ ನೀಡುತ್ತಿರುವ ಭೇಟಿ ಬಹಳ ರೋಮಾಂಚಕಾರಿ ಆಗಿದೆ, ನಾನು ಪ್ರಧಾನಿ ಮೋದಿಯವರನ್ನು ಬಹಳ ಮೆಚ್ಚುವುದಾಗಿ, ವಿಮಾನ ನಿಲ್ದಾಣದಿಂದ ಉದ್ಘಾಟನೆ ನಡೆಯಲಿರುವ ಸ್ಟೇಡಿಯಂ ಗೆ ಸಾಗುವ ಹಾದಿಯಲ್ಲಿ ಒಟ್ಟು ಏಳು ಮಿಲಿಯನ್ ಜನರು ಸೇರಲಿದ್ದಾರೆಂದು ಮೋದಿಯವರು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಅವರು ತಮ್ಮ ಭೇಟಿಯ ಬಗ್ಗೆ ಟ್ವಿಟರ್ ನಲ್ಲಿ ಕೂಡಾ ಬರೆದುಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here