ಕೊರೊನಾ ನಂತರ ಅಮೆರಿಕಾ ಮತ್ತು ಚೀನಾದ ನಡುವೆ ಒಂದು ಶೀತಲ ಸಮರವೇ ನಡೆಯುತ್ತಿದೆ. ಅಮೆರಿಕ ಚೀನಾದ ವಿರುದ್ಧ ಕಿಡಿಕಾರುತ್ತಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾವನ್ನು ಕೊರೊನಾ ಸಮಸ್ಯೆಗೆ ನೇರ ಕಾರಣ ಎಂದು ಈಗಾಗಲೇ ದೂರಿದ್ದಾರೆ. ಅದೇ ಹಿನ್ನೆಲೆಯಲ್ಲಿ ಚೀನಾದ ವ್ಯವಹಾರಗಳ ಮೇಲೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ. ಈಗ ಅಮೆರಿಕ ಹೊಸದಂದು ಪ್ರಯೋಗಕ್ಕೆ ಮುಂದಾಗಿದ್ದು, ಚೀನಾದ ವಿದ್ಯಾರ್ಥಿಗಳ ಮತ್ತು ಸಂಶೋಧಕರ ವೀಸಾದ ನಿಯಮಗಳನ್ನು ಮತ್ತಷ್ಟು ಕಠಿಣ ಮಾಡಿದೆ ಅಮೆರಿಕಾ.

ಇನ್ನು ಮುಂದೆ ಚೀನಾ ಮೂಲದ ಯಾವುದೇ ವಿದ್ಯಾರ್ಥಿ ಅಥವಾ ಸಂಶೋಧಕ ಅಮೆರಿಕದಲ್ಲಿ ಅಧ್ಯಯನ ಮಾಡಲು ಅನುಮತಿ ಕೋರಿದರೆ ಕಠಿಣವಾದ ವೀಸಾ ನಿಯಮಗಳನ್ನು ಪಾಲಿಸಿ, ಎಲ್ಲದರಲ್ಲೂ ಪಾಸಾದರೆ ಮಾತ್ರ ಅಮೆರಿಕ ಪ್ರವೇಶ ಎನ್ನುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ ಅಮೆರಿಕಾ.
ಅದು ಮಾತ್ರವೇ ಅಲ್ಲದೇ ಅಮೆರಿಕಾ ಈಗಾಗಲೇ ಸಾವಿರಾರು ಜನ ಚೀನಾದ ವಿದ್ಯಾರ್ಥಿಗಳು ಮತ್ತು ಸಂಶೋಧಕರ ವೀಸಾವನ್ನು ರದ್ದು ಮಾಡಿದೆ. ಲಕ್ಷಗಳ ಸಂಖ್ಯೆಯಲ್ಲಿ ಚೀನೀ ವಿದ್ಯಾರ್ಥಿಗಳು ಅಮೆರಿಕಾಕ್ಕೆ ವಿಜ್ಞಾನ, ತಂತ್ರಜ್ಞಾನ ಇನ್ನಿತರೆ ವಿಷಯಗಳನ್ನು ಅಧ್ಯಯನ ಮಾಡಲು ಬರುತ್ತಾರೆ.

ಕಳೆದ ವರ್ಷ ಚೀನಿ ವಿದ್ಯಾರ್ಥಿಗಳಿಂದ ಅಮೆರಿಕಾ ಆರ್ಥಿಕತೆಗೆ 45 ಬಿಲಿಯನ್ ಡಾಲರ್ ಗಳ ಕೊಡುಗೆ ದಕ್ಕಿದೆ ಎನ್ನಲಾಗಿದೆ. ಆದರೆ ಕೊರೊನಾ ನಂತರ ಪರಿಸ್ಥಿತಿ ಬದಲಾಗಿದ್ದು, ಅಮೆರಿಕಾದಲ್ಲಿ ಚೀನೀ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಇದು ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ ಎಂಬುದು ಕೂಡಾ ನಿಜ. ಅದರ ಫಲವಾಗಿಯೇ ಸಾವಿರಾರು ಚೀನಿ ವಿದ್ಯಾರ್ಥಿಗಳು ಮತ್ತು ಸಂಶೋಧಕರ ವೀಸಾ ರದ್ದಾಗಿರುವುದು. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಅಮೆರಿಕಾದ ಬೌದ್ಧಿಕ ಜ್ಞಾನವನ್ನು ಹಾಗೂ ತಂತ್ರಜ್ಞಾನ ಕಳ್ಳತನ ಮಾಡುತ್ತಿದ್ದಾರೆ ಎಂದು ಕೂಡಾ ಆರೋಪ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here