#ಕನ್ನಡಕ್ಕಾಗಿ_ಪ್ರಾಣಕೊಡಲಿದ್ದ_ರಾಜಕುಮಾರ_

#ಗೋಕಾಕ್ ಚಳುವಳಿ ತೀವ್ರತೆ ಹೆಚ್ಚುತ್ತಾ ಬರುತ್ತಿತ್ತು. ಪ್ರತೀಬಾರಿ ಸರ್ಕಾರ ಮಾತುಕತೆಗೆ ಕರೆದು ಒಂದೊಂದು ಸೂತ್ರ ಮುಂದಿಡುತ್ತಿತ್ತು. ಹೋರಾಟಗಾರರು ಒಪ್ಪಿಕೊಳ್ಳುತ್ತಿರಲಿಲ್ಲ. ಬಹುಶಃ ಇತಿಹಾಸದಲ್ಲಿ ಈ ರೀತಿ ಚಳುವಳಿ ಗಾರರನ್ನು ಹತ್ತಾರು ಬಾರಿ ಕರೆಸಿ ಹೊಸ ಹೊಸ ಸೂತ್ರಗಳನ್ನಿಟ್ಟು ಅದನ್ನವರು ತಿರಸ್ಕರಿಸಿ ಮತ್ತೆ ಹೋರಾಟಕ್ಕಿಳಿಯುವುದು ಎಲ್ಲೂ ನಡೆದಿಲ್ಲ ಅನ್ನಿಸುತ್ತದೆ ಎಲ್ಲರ ದೈರ್ಯ, ಬಲ,ಇದ್ದುದು ರಾಜ್‌ರ ಮೇಲೆ.

 

ಎಲ್ಲಾ ಕಡೆ ಹಬ್ಬಿದ ಚಳುವಳಿ ಇಡೀ ರಾಜ್ಯ ಹೋರಾಟದ ಆಡಂಬೋಲವಾಯಿತು.ಪ್ರತೀ ವಾರ ಸರ್ಪಭೂಷಣ ಮಠದಲ್ಲಿ ಸಾಹಿತಿ ಕಲಾವಿದರು ಕೂಡಿ ನಿರ್ಧಾರ ಮಾಡುವುದು ಅದರಂತೆ ರಾಜ್ ರಾಜ್ಯದಾದ್ಯಂತ ಪ್ರವಾಸ ಮಾಡುವುದು ನಡೆಯುತ್ತಿತ್ತು.ಇಡೀ ನಾಡಿನಲ್ಲಿ ಪ್ರವಾಸ ಹಮ್ಮಿಕೊಳ್ಳಲಾಯಿತು.ರಾತ್ರಿ ಎಷ್ಟೇ ಹೊತ್ತಾದರೂ ಜನ ಕಾದೇ ಇರುತ್ತಿದ್ದರು ಕಾರಣ ಪ್ರತಿ ಊರಿನಲ್ಲೂ ರಾಜ್‌ರ ,ಮಿಕ್ಕವರ ಭಾಷಣ ಮುಗಿದಮೇಲೆ ಅಣ್ಣಾವ್ರು ಹಾಡು ಹೇಳಬೇಕಿತ್ತು ತಮಗಾಗಿ ಅಷ್ಟು ಕಾದ ಜನರ ಒಂದು ಸಣ್ಣ ಆಸೆಯನ್ನು ನಿರಾಕರಿಸಲು ಮನ ಒಪ್ಪದ ರಾಜ್ ಜನರ ಆಸೆಯಂತೆ ಹಾಡು ಹೇಳಿ ಅವರು ಕಾದದಕ್ಕೂ ಸಾರ್ಥಕವಾಯಿತು ಎಂದು ಅಂದುಕೊಳ್ಳುವಂತೆ ಮಾಡಿ ಮುಂದೋಗಬೇಕಿತ್ತು.

 

ಒಂದು ರಾತ್ರಿ ರಾಣಿಬೆನ್ನೂರು ಕಾರ್ಯಕ್ರಮ ಮುಗಿದು ಮುಂದಿನ ಊರಿಗೆ ಹೋಗಬೇಕಿತ್ತು ಆಗಲೇ ರಾತ್ರಿ ಹನ್ನೆರಡು ಗಂಟೆ ಮೀರಿತ್ತು ಆದರೆ ಮುಂದಿನ ಊರಿನಲ್ಲೆಲ್ಲಾ ಜನ ಮಧ್ಯಾಹ್ನದಿಂದ ಕಾಯುತ್ತಲೇ ಇರುವರು ಎಂದು ತಿಳಿದು ಆ ರಾತ್ರಿಯ ಕತ್ತಲಿನಲ್ಲೇ ಹೊರಟರು ಅಣ್ಣಾವ್ರು ಲಾರಿಯ ಮೇಲೆ ಕುಳಿತಿದ್ದವರು ನಾನು ಇಲ್ಲೇ ಇರುತ್ತೇನೆ ದಾರಿ ಉದ್ದಕ್ಕೂ ಜನರಿದ್ದಾರೆ ಅವರು ನಮಗಾಗಿ ಕಾದಿರುವಾಗ ಅವರಿಗೆ ನಮಸ್ಕಾರ ಮಾಡಲಾದರೂ ಇಲ್ಲೇ ಇರುತ್ತೇನೆ ಎಂದು ಕುಳಿತ್ತಿದ್ದರು.
ದಾರಿಯಲ್ಲಿ ಸಿಗುವ ಸಣ್ಣ ಪುಟ್ಟ ಹಳ್ಳಿಗಳಲ್ಲಿಯೂ ಜನ ಕಾಯುತ್ತಿದ್ದರು ಅಣ್ಣಾವ್ರು ನಮಸ್ಕರಿಸಿ ಮುಂದುವರಿಯುತ್ತಿದ್ದರು

 

ಒಂದು ಹಳ್ಳಿ ಬಿಟ್ಟು ಮುಂದೆ ಹೋದಾಗ ಬಹಳಾ ಕತ್ತಲೆ ಎಲ್ಲರೂ ತೂಗಡಿಸುತ್ತಿದ್ದಾರೆ ಬೆಳಗಿನಿಂದ ನಿರಂತರ ಪಯಣ ಭಾಷಣದಿಂದ ಯಾರಿಗೂ ಮೈಮೇಲೆ ಪ್ರಜ್ಞೆಯೇಯಿಲ್ಲ.
ಇದ್ದಕ್ಕಿದ್ದಂತೆ ಅಣ್ಣಾವ್ರನ್ನು ಯಾರೋ ಹಿಂದಿನಿಂದ ಜೋರಾಗಿ ಕೆಳಕ್ಕೆ ಅದುಮುತ್ತಾರೆ ಮೊದಲಬಾರಿ ಅಣ್ಣಾವ್ರಿಗೆ ಕೋಪ ಬರುತ್ತದೆ ಯಾರೂ ಎಂದೂ ಈ ರೀತಿ ಮಾಡದಂತಹ ಕೆಲಸ ಯಾರು ಮಾಡಿದರು ಎಂದು ತಲೆ ಮೇಲೆತ್ತಿ ನೋಡುತ್ತಾರೆ ಲಾರಿ ಇದ್ದಕ್ಕಿದ್ದಂತೆ ನಿಂತು ಕೋಲಾಹಲ ವಾಗುತ್ತದೆ ಏನಾಯಿತು ಎಂದು ಯಾರಿಗೂ ಆ ಕತ್ತಲಲ್ಲಿ ಗೊತ್ತಾಗೋಲ್ಲ. ಆಗ ಹಿಂದಿನಿಂದ ತಳ್ಳಿದವರು ಅಣ್ಣಾವ್ರ ಹತ್ತಿರ ಬಂದು ಕಾಲನ್ನು ಮುಟ್ಟಿ ಕ್ಷಮಿಸಿ ಅಣ್ಣ ಅಲ್ಲಿ ನೋಡಿ ಎಂದು ಹಿಂದೆ ತೋರಿಸುತ್ತಾರೆ ಕತ್ತಲಲ್ಲಿ ಏನೂ ಕಾಣೋಲ್ಲ ಅಣ್ಣಾವ್ರು ತಕ್ಷಣ ಕೋಪ ಬಿಟ್ಟು ಏನಾಯಿತಪ್ಪ ಎನ್ನುತ್ತಾರೆ ನಿದಾನವಾಗಿ ಗಮನಿಸಿದರೆ ಒಂದು ಹೈಟೆನ್ಷನ್ ಕಂಬಿ ಕೆಳಗೇ ನೇತಾಡುತ್ತಿರುತ್ತದೆ ಅವರು ತಳ್ಳಲಿಲ್ಲ ಎಂದರೆ ನೇರವಾಗಿ ಕುಳಿತಿದ್ದ ಅಣ್ಣಾವ್ರು ಸೀದ ವಿದ್ಯುತ್ ಕಂಬಿಗೆ ಸಿಗುತ್ತಿದ್ದರು ಲಕ್ಷಾಂತರ ವ್ಯಾಟ್ ವಿದ್ಯುತ್ ಹರಿವ ಕಂಬಿಗೆ ಅವರೂ ಜೋತೆಯಲ್ಲಿ ಇಡೀ ಲಾರಿಯ ಜನರೆಲ್ಲಾ ಒಂದೇ ಕ್ಷಣದಲ್ಲಿ ಬೂದಿಯಾಗಿಬಿಡುತ್ತಿದ್ದರು.

 

ಅರ್ದ ಗಂಟೆ ಯಾರೂ ಮಾತೇ ಆಡೋಲ್ಲ ಯಾರಿಗೂ ಉಸಿರೆತ್ತಲೂ ತ್ರಾಸವಿಲ್ಲ ಕೊನೆಗೆ ಅಣ್ಣಾವ್ರೇ ಆಯ್ತು ಬಿಡಿ ಏನೋ ಗಂಡಾಂತರ ಬಂತು ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ನಾವೆಲ್ಲಾ ಪಾರಾದೆವು ಆ ಸ್ವಾಮಿಗೆ ನಮ್ಮನ್ನು ಬದುಕಿಸಬೇಕು ಎಂದು ಮನಸ್ಸಿರಬೇಕು ಆತನ ಇಚ್ಚೆ ಎನ್ನುತ್ತಾರೆ.
ನಂತರವೂ ಯಾರೂ ಮಾತನಾಡದಿದ್ದಾಗ ಯಾಕೆ ಎಲ್ಲಾ ಸುಮ್ಮನಾದಿರಿ ನಡೆಯಿರಿ ಮುಂದಿನ ಊರುಗಳಲ್ಲಿ ಎಷ್ಟು ಜನ ಕಾಯುತ್ತಿರುತ್ತಾರೋ ಎಲ್ಲಾ ನಮ್ಮ ಕೈಲೇನಿದೆ ಬಗವಂತನಿಚ್ಚೆ ಎಂದು ಪ್ರಯಾಣ ಮುಂದುವರಿಸುತ್ತಾರೆ.
(ಈಗಿನ ನಾಯಕರಿಗೆ ಸಣ್ಣದಾಗಿ ಒಂದೇಟು ಬಿದ್ದರೂ ಎಂತಹಾ ಕಾರ್ಯಕ್ರಮ ಇದ್ದರೂ ಅಲ್ಲಿಯೇ ನಿಲ್ಲಿಸಿ ಮನೆಗೋಗುತ್ತಾರೆ )
ಕೃಪೆ…ಶಂಕರ್ ನಂಜುಂಡಪ್ಪ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here