ಮದುವೆ ಎಂಬುದು ಹೊಸ ಜೀವನದ ಆರಂಭ. ಈ ಹೊಸ ಜೀವನದ ಆರಂಭವನ್ನು ಶಾಸ್ತ್ರ ಬದ್ಧವಾಗಿ, ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ. ಮದುವೆಯನ್ನು ಒಂದು ಮಧುರವಾದ ನೆನಪಾಗಿಡಲು ಹಲವರು ದುಬಾರಿಯಾಗಿ ಖರ್ಚು ಮಾಡಿ ಮದುವೆಯಾಗುತ್ತಾರೆ, ಇನ್ನೂ ಕೆಲವರು ಸರಳ ವಿವಾಹವಾಗಿ ಮಾದರಿಯಾಗುತ್ತಾರೆ. ಆದರೆ ಇಲ್ಲೊಂದು ವಿವಾಹ ಮಹೋತ್ಸವವು ಎಲ್ಲಾ ವಿವಾಹಗಳಿಗಿಂತ ಭಿನ್ನವಾಗಿ, ದೇಶದಲ್ಲೇ ಮೊದಲ ಬಾರಿಗೆ ಎನ್ನುವಂತೆ ನಡೆಯುತ್ತಿದ್ದು, ಸಮಾಜದಲ್ಲಿ ಒಂದು ಮಾದರಿ ವಿವಾಹ ಎನಿಸಿಕೊಳ್ಳಲಿದೆ ಎಂದರೂ ತಪ್ಪಾಗದು.

ಹಾಗಾದರೆ ಅಂತ ವಿಶೇಷ ಏನಿದೆ? ಈ ವಿವಾಹದಲ್ಲಿ ಎಂದು ಮನಸ್ಸಿನಲ್ಲಿ ಪ್ರಶ್ನೆಯೊಂದು ಮೂಡಿದ್ದರೆ ಈ ಸುದ್ದಿ ಓದಿದ ಮೇಲೆ ಅದಕ್ಕೆ ಉತ್ತರದ ಜೊತೆಗೆ, ಮೆಚ್ಚುಗೆಯ ನಗೆ ಕೂಡಾ ಮೂಡುವುದರಲ್ಲಿ ಅನುಮಾನವೇ ಇಲ್ಲ. ವರನಟ ಡಾ.ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಮಹೇಶ್ ರಾಜಣ್ಣ ಅವರ ದ್ವಿತೀಯ ಪುತ್ರಿಯ ಮದುವೆ ಇದೇ ನವೆಂಬರ್ 11 ರಂದು ನಡೆಯುತ್ತಿದ್ದು ಈ ಶುಭ ಸಂದರ್ಭದಲ್ಲಿ ಇಂದು ನವದಂಪತಿಗಳು ಹಾಗೂ ಡಾ.ರಾಜ್‍ಕುಮಾರ್ ಅವರ ಅಭಿಮಾನಿಗಳು ನೇತ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ನಾರಾಯಣ ನೇತ್ರಾಲಯದ ಡಾ.ಭುಜಂಗಯ್ಯ ಶೆಟ್ರು ಮತ್ತು ಡಾ.ವೀರೇಶ್ ಅವರ ನೇತೃತ್ವದಲ್ಲಿ ಈ ನೇತ್ರದಾನ ಕಾರ್ಯಕ್ರಮ ನಡೆದಿದ್ದು, ಇದು ನಿಜಕ್ಕೂ ಅರ್ಥಪೂರ್ಣವಾದ ವಿವಾಹ ಮಹೋತ್ಸವ ಆಗಿದೆ. ಅಭಿಮಾನಿಗಳ ಅಭಿಮಾನವನ್ನು ಹೀಗೂ ಒಂದು ಸಾಮಾಜಕ್ಕೆ ಅನುಕೂಲವಾಗುವಂತೆ, ಮಾದರಿಯಾಗುವಂತೆ ತೋರಿಸಬಹುದು ಎಂಬುದಕ್ಕೆ ಮಹೇಶ್ ರಾಜಣ್ಣ ಅವರ ಪುತ್ರಿಯ ವಿವಾಹ ಸಾಕ್ಷಿಯಾಗಿದ್ದು, ಡಾ.ರಾಜ್ ಅವರ ಅಭಿಮಾನಿಗಳು ಕೂಡಾ ಜೊತೆಯಾಗಿ ಇಂತಹುದೊಂದು ಅದ್ಭುತ ಕಾರ್ಯಕ್ರಮ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here