ಕನ್ನಡ ಚಿತ್ರರಂಗದ ಪ್ರಸಿದ್ಧ ಚಲನಚಿತ್ರಗಳ ಪೈಕಿ‌ಕನ್ನಡದ ವರನಟ ಡಾ.ರಾಜಕುಮಾರ್ ಅಭಿನಯದ ಸಾಕ್ಷಾತ್ಕಾರ ಪ್ರಮುಖ ಸಿನಿಮಾ ಎನ್ನಬಹುದು.ಇಂತಹ ಅದ್ಭುತ ಚಿತ್ರ ನಿರ್ದೇಶನ ಮಾಡಿದ್ದು ಪುಟ್ಟಣ್ಣ ಕಣಗಾಲ್ ಅವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾಗೆ ತಮ್ಮ‌ ಅತ್ಯದ್ಭುತ ಪಾತ್ರದಿಂದ ಜೀವ ತುಂಬಿದ್ದವರು ಕನ್ನಡದ ವರನಟ ಡಾ.ರಾಜಕುಮಾರ್ ಅವರು. ಅದು 1974 ರ ದಶಕ ಮೈಸೂರಿನ ದಾಸ್ ಪ್ರಕಾಶ್ ಹೋಟೆಲ್ ನ ಕೊಠಡಿಯಲ್ಲಿ ಸಾಹಿತ್ಯ ಬ್ರಹ್ಮ ಕಣಗಾಲ್ ಪ್ರಭಾಕರ ಶಾಸ್ತ್ರಿ ಗಳು ಚಿತ್ರವೊಂದಕ್ಕೆ ಸಾಹಿತ್ಯ – ಕಥೆ ಬರೆಯುತ್ತಿದ್ದರು.ಅದೇ ಸಮಯದಲ್ಲಿ ಮೈಸೂರಿನಲ್ಲಿ ತಮ್ಮ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದ ಡಾ.ರಾಜ್ ಕುಮಾರ್ ಅವರಿಗೆ ಚಿತ್ರೀಕರಣ ತಂಡದವರಿಂದ ಮೈಸೂರಿನಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಇರುವ ವಿಷಯ ತಿಳಿಯುತ್ತದೆ.

ಚಿತ್ರೀಕರಣದ ಮಧ್ಯೆ ಬಿಡುವು ಮಾಡಿಕೊಂಡ ರಾಜ್ ನೇರವಾಗಿ ಶಾಸ್ತ್ರಿಗಳು ಉಳಿದುಕೊಂಡಿದ್ದ ರೂಂಗೆ ಹೋಗಿ ಶಾಸ್ತ್ರಿಗಳ ಮುಂದೆ ಕೈಕಟ್ಟಿಕೊಂಡು ನಿಂತು ಅತ್ಯಂತ ವಿನಯದಿಂದ ಕೇಳ್ತಾರೆ “ಗುರುಗಳೇ ತುಂಬಾ ದಿನಗಳಿಂದ ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕಿತ್ತು ತಮಗೆ ತೊಂದರೆ ಆಗದೇ ಇದ್ದರೆ ಹತ್ತು ನಿಮಿಷ ನಿಮ್ಮೊಡನೆ ಮಾತನಾಡಬಹುದೇ?  ರಾಜ್ ಕುಮಾರ್ ಅವರ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದ ಶಾಸ್ತ್ರಿಗಳು” ಕೇಳು ಮುತ್ತುರಾಜ ಏನದು ಆ ಪ್ರಶ್ನೆ? ” ಎನ್ನುತ್ತಾರೆ

ರಾಜ್ ಕುಮಾರ್ ಕೇಳುತ್ತಾರೆ ಪುಟ್ಟಣ್ಣ ಕಣಗಾಲ್ ಅವರ ಮಹೋನ್ನತ ಚಿತ್ರ “ಸಾಕ್ಷಾತ್ಕಾರ” ದಲ್ಲಿ ಅಭಿನಯಿಸಿ ಮೂರು ವರ್ಷಗಳು ಕಳೆದಿದೆ ( ಸಾಕ್ಷಾತ್ಕಾರ ತೆರೆ ಕಂಡಿದ್ದು 1971 ರಲ್ಲಿ ) ಆದರೆ ಇದುವರೆಗೂ ನನಗೆ ಈ ಪದದ ಅರ್ಥ ಏನು ಗೊತ್ತಿಲ್ಲ ಈ ಚಿತ್ರಕ್ಕೆ ಈ ಹೆಸರು ಇಟ್ಟಿದ್ದು ನೀವು ಸಾಹಿತ್ಯವೂ ನಿಮ್ಮದೇ ದಯವಿಟ್ಟು “ಸಾಕ್ಷಾತ್ಕಾರ” ಪದದ ಅರ್ಥ ಏನು ತಿಳಿಸಿಕೊಟ್ಟರೆ ಮಹದುಪಕಾರವಾಗುತ್ತದೆ! ”
ಶಾಸ್ತ್ರಿಗಳು ನಗುತ್ತ ಉತ್ತರಿಸುತ್ತಾರೆ…

ಮುತ್ತುರಾಜ ಯಾವ ವ್ಯಕ್ತಿಗೆ ಎಲ್ಲರನ್ನೂ ಸೆಳೆಯಬಲ್ಲ ವ್ಯಕ್ತಿತ್ವ ಇರುತ್ತದೋ ,ಯಾವ ವ್ಯಕ್ತಿ ಎಷ್ಟೇ ತಿಳಿದಿದ್ದರೂ ಏನೂ ಗೊತ್ತಿಲ್ಲದವನೆಂಬ ಭಾವದಿಂದ ಬದುಕುತ್ತಾನೋ, ಯಾವ ವ್ಯಕ್ತಿ ಹಿರಿಯರನ್ನು ಗೌರವಿಸುತ್ತಾನೋ, ಯಾವ ವ್ಯಕ್ತಿಗೆ ಇನ್ನೂ ಕಲಿಯಬೇಕು ಎಂಬ ತುಡಿತ ಸದಾ ಇರುತ್ತದೆಯೋ, ಯಾವ ವ್ಯಕ್ತಿ ಎಲ್ಲರನ್ನೂ ಗೌರವಿಸುತ್ತಾನೋ, ಯಾವ ವ್ಯಕ್ತಿ ದ್ವೇಷದಲ್ಲೂ ಪ್ರೀತಿಯನ್ನು ಕಾಣುತ್ತಾನೋ ಅಂಥಾ ವ್ಯಕ್ತಿಗೆ ಬದುಕಿನ “ಸಾಕ್ಷಾತ್ಕಾರ”ಆಗುತ್ತದೆ ಈ ಎಲ್ಲಾ ಗುಣಗಳು ನಿನ್ನಲ್ಲಿ ಇರುವುದರಿಂದ ಸಾಕ್ಷಾತ್ಕಾರ ಎಂದರೆ ನೀನೇ ಮುತ್ತುರಾಜ ಎನ್ನುತ್ತಾರೆ!
ಶಾಸ್ತ್ರಿಗಳ ಕಾಲುಗಳಿಗೆ ನಮಿಸಿದ ರಾಜ್ ಕಣ್ಣುಗಳಲ್ಲಿ ಧನ್ಯತೆಯ ಭಾವದ ಕಣ್ಣೀರು ಹೊರಹೊಮ್ಮುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here