ಅದೊಂದಿತ್ತು ಕಾಲ ಎಲ್ಲಾ ಚಿತ್ರರಂಗದಲ್ಲಿ ಪೈಪೋಟಿಯಲ್ಲಿ ನಟಿಸುತ್ತಿದ್ದ ಇಬ್ಬಿಬ್ಬರು ನಾಯಕ ನಟರು.‌ಆ ಎಲ್ಲಾ ಚಿತ್ರರಂಗವನ್ನೂ ಮೀರಿ ಬೆಳೆಸಿತು ಅಣ್ಣಾವ್ರನ್ನು ಅವರ ಚಿತ್ರರಂಗದ ಅಭಿಮಾನ ದೇವರುಗಳು . ಇಡೀ ಭಾರತದ ಚಿತ್ರರಂಗದಲ್ಲೇ ಎಲ್ಲಾ ದಾಖಲೆಗಳಲ್ಲಿ ಮೊದಲಿಗರಾದರು ಅಣ್ಣಾವ್ರು ಅವರು ಅಭಿಮಾನಿಗಳನ್ನು ದೇವರೆಂದರೆ ಅಭಿಮಾನಿಗಳು ಅವರನ್ನೇ ದೇವರೆಂದು ಪೂಜಿಸಿದರು.

ಇದು ಇಡೀ ವಿಶ್ವದಲ್ಲೇ ಇನ್ಯಾವ ನಟರಿಗೂ ದೊರಕದ ಅಭಿಮಾನಿಗಳ ಆದರ ಪ್ರೀತಿ.ಅಣ್ಣಾವ್ರ ಸಿನಿಮಾಕ್ಕೆ ನಕ್ಷತ್ರಾಕಾರದ ಸ್ಟಾರ್ ಕಟ್ ಔಟ್ ಗಳನ್ನು ಕಟ್ಟಿ ಅದಕ್ಕೇ ಅಣ್ಣಾವ ಸಿಜಿಮಾಗಳಬಪೋಟೋಗಳನ್ನು ಅಂಟಿಸಿ ಮೆರವಣಿಗೆಯ ಮೂಲಕ ಸಿನಿಮಾ ಮಂದಿರದವರೆಗೂ ಬಾಜ ಭಜಂತ್ರಿಗಳೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು.

ಒಂದು ಬಡಾವಣೆಯವರಿಗಿಂತ ಮತ್ತೊಂದು ಬಡಾವಣೆಯವರು ನಾವೇನು‌ ಕಡಿಮೆನೇ ಅಂತ ಇವರು 25 star ತಯಾರಿಸಿದರೆ ಮತ್ತೊಬ್ಬರು 50 star ಮಗದೊಬ್ಬರು 101/- ಸಂಪೂರ್ಣವಾಗಿ ಸಿನಿಮಾ ಮಂದಿರದ ಸುತ್ತಲೂ ಸಿನಿಮಾ ಮಂದಿರವೇ ಕಾಣದ ಹಾಗೆ ಜೋಡಿಸುತ್ತಿದ್ದರು. ಅಂತಹ ಸಂಧರ್ಭದಲ್ಲಿ ತಾಯಿಗೆ ತಕ್ಕ ಮಗ ಸಿನಿಮಾ ಬಂತು.

ಅಂದು ನಡೆಯ ಬಾರದ ಘಟನೆಯೊಂದು ನಡೆದೇ ಹೋಯಿತು. ಆ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಮಾಡಿದ್ದ ಒಬ್ಬ ಯುವಕ ತಾನು ಹೇಗೆ ಆ ಸಿನಿಮಾದಲ್ಲಿ ಕಾಣುತ್ತೇನೆ ಎಂದು ಹೋಗಿ ಸಿನಿಮಾ ಟಿಕೇಟ್ ಕೊಳ್ಳುವ ನೂಕು ನುಗ್ಗಾಟದಲ್ಲಿ ಸಿಲುಕಿ ಸಾವನ್ನಪ್ಪಿದ್ದು. ಎಷ್ಟು ನೂಕು ನುಗ್ಗಾಟವಿತ್ತೆಂದರೆ ಪೋಲೀಸರು ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ ಮಾಡಿದರೂ ಜಗ್ಗದಷ್ಟು ಮೊಂಡರಾಗಿದ್ದರು ಅಭಿಮಾನಿಗಳು.

ಅದರಲ್ಲು ಅಣ್ಣಾವ್ರು ಬಾಕ್ಸರ್ ಕಟೌಟ್ ಅಭಿಮಾನಿಗಳನ್ನು ಹುಚ್ಚರನ್ನಾಗಿಸಿತ್ತು.ಆ ಸಿನಿಮಾ ನೋಡಲು. ರಾತ್ರಿ 12 ಗಂಟೆಗೇ ಹೋಗಿ ಟಿಕೇಟ್ ಪಡೆಯಲು ಮಲಗುತ್ತಿದ್ದರು. ಕ್ರಮೇಣ ಸರ್ವೇ ಬೊಂಬುಗಳನ್ನು ಕಟ್ಟಿ ನೂಕು ನುಗ್ಗಲು ನಿಯಂತ್ರಿಸಲು ಎಚ್ಚರಿಕೆ ವಹಿಸಿತ್ತಿದ್ದರಲ್ಲದೇ 3 ದಿನವಿದೆ ಸಿನಿಮಾ ಕ್ಕೆ ಅನ್ನುವಾಗಲೇ ಟಿಕೇಟ್ ವಿತರಣೆ ‌ಮಾಡುತ್ತಿದ್ದರು.

ಸಾಲು ಇಂದಿಗೂ ತಾವು ಆ ಸಿನಿಮಾ ನೋಡಿದಾಗ ಅವರನ್ನು ನೋಡಬಹುದು. ರಾಜ್ ಕುಮಾರ್ ರವರ ಹೆತ್ತ ತಾಯಿ ಸೌದೆ ಕತ್ತರಿಸುವಾಗ ಒಬ್ಬ ಬೈಕ್ ನಲ್ಲಿ ನಿಂತು ನೋಡಿ ಹೋಗುವ ಆ ಮನುಷ್ಯನೇ ಆ ದುರ್ಧೈವಿ.ಇನ್ನೂ ಅಣ್ಣಾವ್ರ ಹುಲಿಯ ಹಾಲಿನ ಮೇವು ಚಿತ್ರಕ್ಕೆ ಜನರ ನೂಕು ನುಗ್ಗಲು ತಡೆಯಲು ರೇಸ್ ಕೋರ್ಸ್ ನಲ್ಲಿ ಟಿಕೇಟ್ ಕೌಟಂರ್ ತೆರೆದು ಟಿಕೇಟನ್ನು ವಿತರಿಸಲಾಯಿತು ಭವಿಷ್ಯದಲ್ಲಿ ಯಾವೊಬ್ಬ ನಾಯಕರ ಸಿನಿಮಾಗೆ ಈ ರೀತಿಯ ಟಿಕೇಟ್ ವಿತರಣೆ ಮಾಡಿದ ಉದಾಹರಣೆಗಳಿಲ್ಲ.

ಅಷ್ಟೇ ಅಲ್ಲದೆ ಪ್ರಪಂಚದ ಯಾವೊಬ್ಬ ನಾಯಕರಿಗೂ ಇವರಿಗೆ ಇರುವಂತಹ ಅಭಿಮಾನಿಗಳಿಲ್ಲ ಅಂದರೂ ತಪ್ಪಿಲ್ಲ.ಅಣ್ಣೋವ್ರು ಮಂತ್ರಾಲಯ ಮಹಾತ್ಮೆ ಚಿತ್ರಕ್ಕಾಗಿ 3 ತಿಂಗಳು ಚಪ್ಪಲಿಯೂ ಸಹ ಹಾಕದೇ ಕಠಿಣವಾಗಿ ಆ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ಮಾಡಿದ್ದರು. ಅಂದು ಅಣ್ಣಾವ್ರು ಪಾದರಕ್ಷೆ ತೊಟ್ಟಿಲ್ಲ ನಾನು ಪಾದರಕ್ಷೆ ತೊಡುವುದಿಲ್ಲ ಎಂದು ಶಪಥ ಮಾಡಿದ್ದ ಅಭಿಮಾನಿಯೊಬ್ಬರು ಇಂದಿಗೂ ಪಾದರಕ್ಷೆ ತೊಟ್ಟಿಲ್ಲ. ಅವರಂತೆ ಶ್ವೇತ ವಸ್ತ್ರ ತೊಟ್ಟು ತಮ್ಮ ಕಾಯಕ ಮಾಡುತ್ತಿದ್ದಾರೆ

ಆಟೋ ಚಾಲಕರೊಬ್ಬರು ಅವರ ಆಟೋ ಸಂಪೂರ್ಣವಾಗಿ ಕನ್ನಡದ ಮಹನೀಯರ ಜೊತೆ ಅಣ್ಣಾವ್ರ ವಿವಿಧ ಭಂಗಿಯ ಚಿತ್ರಗಳು ರಾರಾಜಿಸುತ್ತಿವೆ.
ಇನ್ನೂ ಎಂಥೆಂತ ಮಹಾನ್ ಅಭಿಮಾನಿಗಳಿದ್ದಾರೆ ಅಂದರೆ ಸಾವಿರಾರು ಜನರು ಅಣ್ಣಾವ್ರಂತೆ ಬಲಗೈಯಲ್ಲಿ ಮಾಡಿದ ದಾನ ಎಡಗೈ ಗೆ ತಿಳಿಯದ ಹಾಗೆ ಮಾಡುತ್ತಿದ್ದಾರೆ. ಅನೇಕ ಅನಾಥ ಮಕ್ಕಳು ವೃದ್ದರಿಗೆ ಸಹಾಯ ಮಾಡುತ್ತಿದ್ದಾರೆ.
ಅಂದಿನ ದಿನಗಳಲ್ಲಿ ಅಣ್ಣಾವ್ರ ಆದರ್ಶಗಳನ್ನು ಅವರ ಸಿನಿಮಾ ನೋಡಿ ಅದೆಷ್ಟೋ ಮಂದಿ ಪಾಲಿಸುತ್ತಿದ್ದರು. ಪಾಲಿಸುತ್ತಲೇ ಬಂದಿದ್ದಾರೆ

ಅಷ್ಟೇ ಅಲ್ಲ ನನ್ನ ಗಮನಕ್ಕೆ ಬಂದ ಹಾಗೆ ಇಂದಿನ ಯುವ ಜನಾಂಗವೂ ಸಹ ಅವರನ್ನು ಅವರ ತತ್ವಗಳನ್ನು ಪಾಲಿಸುತ್ತಿದ್ದಾರೆ. ಮೂಲತಃ ಮೈಸೂರಿನಲ್ಲಿರುವ ಒಬ್ಬ ಸಾಪ್ಟ್ ವೇರ್ ಇಂಜನಿಯರ್ ಕುಟುಂಬವೊಂದು ಅಪ್ಪಟ ಅಣ್ಣಾವ್ರ ಅಭಿಮಾನಿಯಾಗಿದೆ. ಆ ವಂಶದ ಕುಡಿಯೊಂದು ಶ್ರೀಕಾಂತ್ ಬೆಟ್ಟೇಗೌಡ ಅನ್ನುವ ಅಭಿಮಾನಿ ದೇವರೊಬ್ಬರು ಅಮೇರಿಕಾದಲ್ಲಿ ಸಾಪ್ಟ್ ವೇರ್ ಉದ್ಯೋಗಿಯಾಗಿದ್ದು ಅಣ್ಣಾವ್ರ ಆದರ್ಶ ತತ್ವವನ್ನು ಪಾಲಿಸುತ್ತಾ ಬಂದಿದ್ದಾರೆ.

ಅವರ ಕೆಲಸದ ಬಿಡುವಿನ ಸಮಯವನ್ನು ಅಣ್ಣಾವ್ರ ಹಳೆಯ ಸಿನಿಮಾ ನೋಡುವುದರಲ್ಲಿ ಕಳೆಯುತ್ತಾರೆ. ಅಲ್ಲಿನ ತಮ್ಮ ಸಹೋದ್ಯೋಗಿಗಳು ಸಹ ಇವರನ್ನು ನೋಡಿ ಈಗಲೂ ಹಳೆಯ ಕಪ್ಪು ಬಿಳುಪಿನ ಚಿತ್ರ ನೋಡುತ್ತೀರಾ ಅನ್ನುತ್ತಾರೆ. ಅದಕ್ಜೆ ಇವರ ಉತ್ತರ ನೀವು ನನ್ನೊಡನೆ ಒಂದು ಸ್ವಲ್ಪ ಸಮಯ ಕೂತರೆ ತಮಗೆ ಈ ಮಹಾನ್ ಚೇತನದ ಬಗ್ಗೆ ಅರಿವಾಗುವುದು ಅನ್ನುತ್ತಾರೆ. ಅಬ್ಬ ಏಳು ಸಮುದ್ರದಾಚೆಯೂ ಸಹ ಇಂತಹ ಅಭಿಮಾನಿಗಳು ಇರೋದು ಅಣ್ಣೋರಿಗೆ ಮಾತ್ರ.ಈಗ ನೀವೇ ಹೇಳಿ ನೋಡೋಣ ಅಣ್ಣವ್ರು ಅಭಿಮಾನಿಗಳನ್ನು ಕರೆದ ಅಭಿಮಾನಿ ದೇವರು ಅನ್ನೋದು ಹೆಚ್ಚೋ? ಅಣ್ಣಾವ್ರನ್ನೇ ದೇವರು ಎಂದ ಅಭಿಮಾನಿಗಳು ಹೆಚ್ಚೋ? ಬರೆಯುತ್ತಾ ಕೂತರೇ ಪದಗಳೇ ಸಾಲದು

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here