ಕನಸು ಒಂದು ಸುಂದರ ಅನುಭೂತಿ, ಕನಸು ಕಾಣದ ವ್ಯಕ್ತಿ ಈ ಜಗತ್ತಿನಲ್ಲಿ‌ ಇಲ್ಲವೆಂದೇ ನಾವು ಹೇಳಬಹುದು. ಕನಸುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿ ಹೋಗಿವೆ. ನಾವು ನಿದ್ರಿಸುವಾಗ ನಮಗೆ ಅನೇಕ ರೀತಿಯ ಕನಸುಗಳು ಬೀಳುತ್ತವೆ. ಆದರೆ ಅವುಗಳ ಅರ್ಥ ಹಾಗೂ ಸೂಚನೆ ಏನೆಂಬುದು ನಮಗೆ ತಿಳಿಯುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಕನಸುಗಳು ನಮ್ಮ ಭವಿಷ್ಯದ ಬಗ್ಗೆ ಸೂಚನೆಗಳನ್ನು ನೀಡುತ್ತವೆ ಎಂದು ಸೈಕಾಲಜಿಸ್ಟ್ ಗಳು ಹೇಳುವರು. ನಮ್ಮ ಸುಪ್ತ ಮನಸ್ಸಿನಲ್ಲಿ ಅಡಗಿರುವ ವಿಷಯಗಳು ಸ್ವಪ್ನದ ಮೂಲಕ ನಮಗೆ ಕೆಲವು ಸಂದೇಶಗಳು ಹಾಗೂ ಸೂಚನೆಗಳನ್ನು ನೀಡಲು ಸ್ವಪ್ನ ರೂಪದಲ್ಲಿ ಕಾಣುವವು ಎನ್ನಲಾಗಿದೆ.

 

ನಾವು ಇಂದು ಹೇಳಲು ಹೊರಟಿರುವುದು, ಯಾವ ರೀತಿಯ ಕನಸು ಎಂತಹ ಅರ್ಥ ನೀಡುತ್ತದೆ ಎಂದು. ಕನಸಿನಲ್ಲಿ ನದಿಯೇನಾದರೂ ಕಂಡರೆ ಅದನ್ನು ಶುಭ ಸೂಚಕವೆಂದೇ ನಂಬಲಾಗಿದೆ. ನದಿಯು ಮುಂದಕ್ಕೆ ಹೋಗುತ್ತಿರುವ ನಮ್ಮ ಜೀವನದ ಪ್ರತೀಕ. ಆದ್ದರಿಂದ ಇದು ಶುಭ ಸೂಚಕವಾಗಿರುತ್ತದೆ. ಇನ್ನು ಕನಸಿನಲ್ಲಿ ನದಿಯನ್ನು ದಾಟುವಂತೆ ಕಾಣಿಸಿದರೆ, ನಮ್ಮ ಜೀವನದಲ್ಲಿ ಯಾವುದೋ ಬದಲಾವಣೆಯು ಆಗಲಿದೆ ಎಂಬ ಸೂಚನೆಯನ್ನು ಅದು ನೀಡುತ್ತದೆ ಎನ್ನಲಾಗಿದೆ. ಕನಸ್ಸಿನಲ್ಲಿ ನಗುತ್ತಾ, ಆಡುವ ಮಕ್ಕಳು ಕಂಡರೂ ಕೂಡಾ ಶುಭ ಸೂಚಕವೆಂದೇ ನಂಬಲಾಗಿದೆ. ಇದರರ್ಥ ಭವಿಷ್ಯದಲ್ಲಿ ನಮಗೊಂದು ಶುಭ ಸೂಚನೆ ದೊರೆಯಲಿದೆಯೆಂಬುದಾಗಿರುತ್ತದೆ.

 

ಕನಸಿನಲ್ಲಿ ಮಳೆ ಸುರಿಯುತ್ತಿರುವುದನ್ನು‌ ಕಂಡರೆ ಇದನ್ನು ಶುಭ ಸೂಚಕ ಎನ್ನಲಾಗುವುದಿಲ್ಲ. ಇದರ ಅರ್ಥ ಮುಂದೆ ಬರಲಿರುವ ದಿನಗಳಲ್ಲಿ ನಾವು ಯಾವುದೋ ಸಮಸ್ಯೆಯನ್ನು ಎದುರಿಸಬೇಕಾಗುವುದು ಎಂದು ನಂಬಲಾಗಿದೆ. ಇದು ಬೇಸರದ ಮನಸ್ಸಿನ ಸ್ಥಿತಿಯನ್ನು ತೋರಿಸುತ್ತದೆ. ಇನ್ನು ಆಕಾಶದಲ್ಲಿ ಹಾರಿದಂತೆ ಕನಸು ಕಂಡರೂ ಕೂಡಾ ಯಾವುದೋ ತೊಂದರೆಗೆ ಸಿಲುಕಿಕೊಳ್ಳುವ ಸ್ಥಿತಿ ಎದುರಾಗಲಿದೆಯೆಂದು ಅರ್ಥೈಸಲಾಗಿದೆ. ಕನಸಿನಲ್ಲಿ ಹಣ ಕಂಡರೆ ಅದಕ್ಕೆ ಒಂದು ಅರ್ಥ ಹೇಳಲಾಗುವುದಿಲ್ಲ. ಏಕೆಂದರೆ ,ಕೆಲವೊಮ್ಮೆ ಇದು ನಮ್ಮ ಹಣ ಆಸ್ತಿಯ ಬಗ್ಗೆ ಇರುವ ಭಯವನ್ನು ,ಮುಂಬರಲಿರುವ ಸಮಸ್ಯೆಯನ್ನು ತಿಳಿಸುತ್ತದೆ.

ಕನಸಿನಲ್ಲಿ ಹಾವೊಂದು ನಿಧಿಯನ್ನು ಕಾವಲು ಕಾಯುವುದನ್ನು ಕಂಡರೆ , ನಮಗೆ ಭಾರೀ ಮೊತ್ತದಲ್ಲಿ ಧನ ಲಾಭ ಆಗುವುದೆಂದು ಅರ್ಥ. ನಮ್ಮ ಪ್ರೀತಿ, ಪಾತ್ರರ ಮರಣದ ನಂತರ ಹಾವು ಕನಸಿನಲ್ಲಿ ಕಾಣಿಸಿದರೆ, ಸತ್ತವರ ಆತ್ಮಕ್ಕೆ ಶಾಂತಿ ದೊರೆತಂತೆ ಎಂದು ಭಾವಿಸಲಾಗಿದೆ. ಕನಸಿನಲ್ಲಿ ನಾವು ಸತ್ತಂತೆ ಅಥವಾ ಇನ್ಯಾರೋ ಹತ್ತಿರದವರು ಸತ್ತಂತೆ ಕನಸು ಕಂಡರೆ ಜೀವನದಲ್ಲಿ ಯಾವುದೋ ಅಪಾಯ ಅಥವಾ ತೊಂದರೆಯನ್ನು ಎದುರಿಸಬೇಕಾಗಿವುದು. ಹಾವಿನ ಬಿಲವೇನಾದರೂ ಕನಸ್ಸಿನಲ್ಲಿ ಕಂಡರೆ, ಎತ್ತರದಿಂದ ಕೆಳಗೆ ಬಿದ್ದಂತೆ ಕನಸು ಕಂಡರೆ, ಜೀವನದಲ್ಲಿ , ನಿಮ್ಮ ಮನಸ್ಸಿನಲ್ಲೇ ಯಾವುದೇ ಯೋಚನೆ ಇದೆ ಎಂದರ್ಥ. ಕನಸಿನಲ್ಲಿ ಕೆರೆ ಅಥವಾ ಸರೋವರ ಕಾಣಿಸಿಸರೆ, ನಮ್ಮ ಮನಸ್ಸು ಶಾಂತವಾಗಿರುತ್ತದೆ ಎಂಸು ಅರ್ಥ.

ಕನಸು ಕೇವಲ ಕನಸ್ಸಲ್ಲ ಅದು ಭವಿಷ್ಯದ ‌ಬಗ್ಗೆ ಅಥವಾ ಯಾವುದೋ ನಡೆಯಲಿರುವ ಘಟನೆಗೆ ಮುನ್ಸೂಚನೆ ಎಂದು ನಂಬುವವಿರಿಗೆ ಇದು ರೋಚಕ ಮಾಹಿತಿಯಾದರೆ, ನಂಬದವರಿಗೆ ಇದೊಂದು ಚರ್ಚೆಯ ವಿಷಯವಂತೂ ಹೌದು. ನಾವು ಕಾಣುವ ಕನಸ್ಸುಗಳು, ನಮ್ಮ ಭವಿಷ್ಯದ ಕನ್ನಡಿಗಳು ಎಂದಿ ತಿಳಿದರೆ ಎಲ್ಲರ ಗಮನ ಇನ್ನು ಮೇಲೆ ತಮ್ಮ ಕನಸಿನ ಕಡೆಗೆ ಹಾರುತ್ತದೆ ಎಂಬುದರಲ್ಲಿ ಅನಿಮಾನವಿಲ್ಲ. ಬನ್ನಿ ಇನ್ನು ಮುಂದೆ ನಮಗೆ ಕಾಣುವ ಕನಸುಗಳ ಬಗ್ಗೆ ಇನ್ನಾದರೂ ತಿಳಿಯುವ ಕೆಲಸ ಮಾಡೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here