City Big News Desk.
ತೂಕವನ್ನು ನಿಯಂತ್ರಿಸಲು ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಕಾಫಿ ಕುಡಿಯುವುದನ್ನು ಅನೇಕರು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಬ್ಲಾಕ್ ಕಾಫಿ ಅಥವಾ ಬ್ಲಾಕ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ನೀವು ಮಾಡುವ ಈ ಸಣ್ಣ ತಪ್ಪಿನಿಂದ ಅನೇಕ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ಕಾಫಿ ದೇಹಕ್ಕೆ ಒಳ್ಳೆಯದು, ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಷ್ಟೇ ಹಾನಿಕಾರಕ.
ಕೆಲವರಿಗೆ ಬ್ಲಾಕ್ ಕಾಫಿ ಎಂದರೆ ತುಂಬಾ ಇಷ್ಟ. ಇದರಿಂದ ಯಾವುದೇ ರೀತಿಯ ಹಾನಿಯಿಲ್ಲ ಎಂದವರು ಭಾವಿಸಿದ್ದಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಕಾಫಿ ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ ಸಮಸ್ಯೆ ಕಾಡಬಹುದು. ಹಲವಾರು ತಿಂಗಳುಗಳ ಕಾಲ ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಕಾಫಿ ಕುಡಿಯುತ್ತ ಬಂದಲ್ಲಿ ಇದು ವಿಟಮಿನ್ ಬಿ 12 ಕೊರತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ ಕ್ಯಾಲ್ಸಿಯಂ ಕೊರತೆಯೂ ಉಂಟಾಗಬಹುದು.
ಆರೋಗ್ಯ ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಕೆಲವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಾರೆ. ಪರಿಣಾಮ ಇದು ಕ್ಯಾಲ್ಸಿಯಂ ಕೊರತೆಯನ್ನು ಉಂಟುಮಾಡಬಹುದು. ದಿನಕ್ಕೆ ಎಷ್ಟು ಕಾಫಿ ಕುಡಿಯಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು. ದಿನಕ್ಕೆ ಗರಿಷ್ಠ 2-3 ಕಪ್ ಕಾಫಿ ಕುಡಿಯಬಹುದು. ಇದಕ್ಕಿಂತ ಹೆಚ್ಚು ಕುಡಿದರೆ ಸಮಸ್ಯೆ ಖಚಿತ.
ಬ್ಲಾಕ್ ಕಾಫಿಯನ್ನು ಕುಡಿಯಲು ಬಯಸಿದರೆ ಅದಕ್ಕೆ ಸರಿಯಾದ ಸಮಯ ಯಾವುದು ಅನ್ನೋದನ್ನು ತಿಳಿದುಕೊಳ್ಳಿ. ಬೆಳಗಿನ ಉಪಾಹಾರ ಮುಗಿಸಿ 30 ನಿಮಿಷಗಳ ಬಳಿಕ ಬ್ಲಾಕ್ ಕಾಫಿ ಸೇವಿಸಿ. ಇಲ್ಲವಾದಲ್ಲಿ ರಾತ್ರಿಯ ಊಟವಾಗಿ 30 ನಿಮಿಷಗಳು ಅಥವಾ 1 ಗಂಟೆಯ ನಂತರ ಸೇವಿಸಬಹುದು. ಕಾಫಿ ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದನ್ನು ತಪ್ಪಿಸಿ. ಬ್ಲಾಕ್ ಕಾಫಿಯನ್ನು ಕುಡಿಯಲು ಸರಿಯಾದ ಸಮಯವೆಂದರೆ ಆಹಾರವನ್ನು ಸೇವಿಸಿದ 30 ನಿಮಿಷಗಳ ನಂತರ ಮಾತ್ರ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.