City Big News Desk.
ಕಲಬುರಗಿ: ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಎಂದರೆ ಬುರ್ಖಾವನ್ನು ಧರಿಸಿ ಹೊರಗಡೆ ಓಡಾಡುವುದು ಸರ್ವೇಸಾಮಾನ್ಯ.
ಆದರೆ ಕಲಬುರ್ಗಿ ನಗರದಲ್ಲಿ ಮುಸ್ಲಿಂ ಮಹಿಳೆ ಒಬ್ಬರು ಬುರ್ಖಾವನ್ನು ಧರಿಸದೆ ಬಸ್ ಹತ್ತಲು ಹೋದಾಗ ಬಸ್ ನಿರ್ವಾಹಕ ಆ ಮಹಿಳೆಗೆ ಬಸ್ ಹತ್ತಲು ಬಿಡುವುದಿಲ್ಲ.
ಬುರ್ಖಾ ಧರಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬಸ್ ಹತ್ತಲು ಬಿಡದ ಬಸ್ ಚಾಲಕ/ ನಿರ್ವಾಹಕ ನನ್ನ ಅಮಾನತುಗೊಳಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಇನ್ನು ಚಾಲಕ/ನಿರ್ವಾಹಕ ಹಿಜಬ್ಧಾರಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣ ಅಮಾನತುಗೊಳಿಸಲಾಗಿದೆ.
ಕಲಬುರಗಿ ಬಸ್ ಡಿಪೋ-3ರ ಚಾಲಕ ಮೆಹಬೂಬ್ ಪಟೇಲ್ ವಿರುದ್ಧ ಕಮಲಾಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಲ್ಲದೇ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೆ ಎಸ್ ಆರ್ ಟಿ ಸಿ ಕಲಬುರಗಿ ವಿಭಾಗದ ಡಿಸಿ, ಚಾಲಕನನ್ನ ಅಮಾನತುಗೊಳಿಸಲು ಆದೇಶ ಹೊರಡಿಸಿದ್ದಾರೆ.
ಎರಡು ದಿನಗಳ ಹಿಂದೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ಹಿಜಬ್ಧಾರಿ ವಿದ್ಯಾರ್ಥಿನಿಯರು ತಮ್ಮೂರಿಗೆ ಹೊರಟಿದ್ದರು.
ಈ ವೇಳೆ ಚಾಲಕ ನೀನು ಮುಸ್ಲಿಂ ಇದ್ದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ ಎಂದು ಹೇಳಿದ್ದ. ಆಗ ಶಿಕ್ಷಕರು ಮತ್ತು ಬಸ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು.
ವರದಿಗಾರ.ಕೋಲಾರ ರೆಡ್ಡಿ
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.