ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳೆದಂತೆ ದೇಶದಲ್ಲಿ ಅನೇಕ ಸೌಲಭ್ಯ ಗಳು ದೊರೆಯುತ್ತಿವೆ‌. ವಿಜ್ಞಾನದ ಸೂಕ್ತ ಬಳಕೆಯಿಂದ ಅಸಾಧ್ಯ ಎನಿಸಿದ್ದು, ಸುಸಾಧ್ಯವಾಗುತ್ತಾ ಸಾಗಿದೆ ಎಂದು ಕೂಡಾ ಹೇಳಬಹುದಾಗಿದೆ. ಅದರಿಂದ ಅದೆಷ್ಟೋ ಸಮಸ್ಯೆಗಳಿಗೆ ಶೀಘ್ರ ಉತ್ತರ ಕೂಡಾ ದೊರೆತಿದೆ. ಈಗ ಅಂತಹುದೇ ಒಂದು ಬೆಳವಣಿಗೆಯಲ್ಲಿ ದೇಶದಲ್ಲಿಯೇ ಮೊದಲನೇ ಬಾರಿಗೆ 18 ನಿಮಿಷಗಳ 30 ಕಿಮೀ ದೂರವನ್ನು ಕ್ರಮಿಸಿ ರಕ್ತದ ಮಾದರಿಯನ್ನು ನೀಡಿದ ಘಟನೆ ವರದಿಯಾಗಿದೆ. ನಂದಗಾಂವ್ ಜಿಲ್ಲಾಸ್ಪತ್ರೆಯಿಂದ ರಕ್ತದ ಮಾದರಿಯನ್ನು ಟೆಹ್ರಿ ಯಲ್ಲಿರುವ ಆಸ್ಪತ್ರೆಗೆ ಮೊಟ್ಟ ಮೊದಲ ಬಾರಿಗೆ ಡ್ರೋನ್ ಮೂಲಕ ಕಳುಹಿಸಲಾಗಿದೆ. ಮೊದಲ ಪ್ರಯತ್ನವೇ ಯಶಸ್ಸು ಕೂಡಾ ಪಡೆದುಕೊಂಡಿದೆ.

ನಂದಗಾಂವ್ ನಿಂದ ಟೆಹ್ರಿ ಸುಮಾರು 30 ಕಿಮೀ ಗಳ ದೂರದಲ್ಲಿದೆ‌. ಈ ದೂರವನ್ನು ಡ್ರೋನ್ ಹದಿನೆಂಟೇ ನಿಮಿಷದಲ್ಲಿ ಕ್ರಮಿಸಲು ಯಶಸ್ವಿಯಾಗಿದೆ. ಡ್ರೋನ್ ಗಂಟೆಗೆ ನೂರು ಕಿಮೀ ವೇಗದಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಇದರಿಂದ ದೂರ ಪ್ರದೇಶದಲ್ಲಿ ಇರುವ ರೋಗಿಗಳಿಗೆ ಸಾಕಷ್ಟು ನೆರವು ದೊರಯಲಿದೆ ಎಂದು ಟೆಹ್ರಿ ಆಸ್ಪತ್ರೆಯ ವೈದ್ಯರು ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ. ಗುಡ್ಡು ಗಾಡು ಪ್ರದೇಶಗಳಾಗಿರುವುದರಿಂದ ರಸ್ತೆಯ ಮೂಲಕವಾದರೆ ನಂದಗಾಂವ್ ನಿಂದ ಟೆಹ್ರಿ ಗೆ ತಲುಪಲು ಸುಮಾರು 60 ರಿಂದ 80 ನಿಮಿಷಗಳು ಹಿಡಿಯುತ್ತವೆ.

ಐಐಟಿಯಿಂದ ಪದವಿ ಪಡೆದಿರುವ ಅಲ್ಲಿನ ಹಳೆಯ ವಿದ್ಯಾರ್ಥಿಯಾದ ನಿಖಿಲ್ ಉಪಾಧ್ಯಾಯ ಅವರ ಮಾಲೀಕತ್ವದ ಸಿಡಿ ಸ್ಪೇಸ್ ಎಂಬ ರೋಬೊಟಿಕ್ ಲಿಮಿಟೆಡ್ ಕಂಪನಿಯು ಈ ಉಪಯೋಗಕಾರಿ ಡ್ರೋನ್ ತಯಾರಿಸಿದ್ದು, ಇದು ಸುಮಾರು 500 ಗ್ರಾಂಗಳ ತೂಕವನ್ನು ಹೊರುವ ಸಾಮರ್ಥ್ಯ ಪಡೆದಿದೆ. ರಕ್ತ ಕೆಡಬಾರದಂದು ಡ್ರೋನ್ ನಲ್ಲಿ ಐಸ್ ಕಿಟ್ ಕೂಡಾ ಇಟ್ಟು ರಕ್ತದ ಮಾದರಿಯನ್ನು ರವಾನಿಸಲಾಗಿದೆ. ನಿಜಕ್ಕೂ ಇಂತಹ ಸಾಧನಗಳು ತುರ್ತು ಪರಿಸ್ಥಿತಿ ಯಲ್ಲಿ ಬಹಳ ಉಪಯುಕ್ತ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here