ಕನ್ನಡ ಚಿತ್ರರಂಗದ ಜನಪ್ರಿಯ ಯುವ ನಟ ಆಕ್ಸನ್ ಪ್ರಿನ್ಸ್ ಧೃವಾ ಸರ್ಜಾ ಇಂದು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿ ಇರುವ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡರು.50 ಗೋವುಗಳಿಗೆ ಪೂಜೆ ಮತ್ತು ಹಲವಾರು ಪುರೋಹಿತರಿಂದ ಪೂಜೆ ಶಾಸ್ತ್ರ ಬದ್ದವಾಗಿ ಪ್ರೇರಣಾ ಅವರಿಗೆ ಧೃವಾಸರ್ಜಾ ಅವರು ಉಂಗುರ ತೊಡಿಸಿದರು.ವಿಶೇಷ ಎಂದರೆ ಈ ಅದ್ದೂರಿ ಕಾರ್ಯಕ್ರಮದ ಜವಾಬ್ದಾರಿಯನ್ನು ಧೃವಾಸರ್ಜಾ ಅವರ ಮಾವ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ಧ ನಟ ಅರ್ಜುನ್ ಸರ್ಜಾ ಅವರು ವಹಿಸಿಕಕೊಂಡಿದ್ದರು.ನಿಶ್ಚಿತಾರ್ಥದಲ್ಲಿ ರೇಷ್ಮೆ ಪಂಚೆ- ಪೈಜಾಮದಲ್ಲಿ ಧ್ರುವಾ ಮಿಂಚಿದ್ದಾರೆ.

ಇನ್ನು ಮೆರೂನ್ ಬಣ್ಣದ ಸೀರೆಯಲ್ಲಿ ಪ್ರೇರಣಾ ಕಾಣಿಸಿಕೊಂಡಿದ್ದಾರೆ. ಧ್ರುವಾ ಅವರೇ ₹1 ಲಕ್ಷ ಬೆಲೆಯ ಈ ಸೀರೆಯನ್ನು ಆಯ್ಕೆ ಮಾಡಿದ್ದಾರೆ. ಪವಿತ್ರಾ ರೆಡ್ಡಿ ಉಡುಪು ವಿನ್ಯಾಸ ಮಾಡಿದ್ದಾರೆ. ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ 2000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 300 ಮಂದಿ ಬಾಣಸಿಗರಿಂದ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ. ಮೈಸೂರು ಶೈಲಿಯಲ್ಲಿ ಊಟದ ಮೆನು ಇದೆ.ಬಾಲ್ಯದ ಗೆಳತಿ ಪ್ರೇರಣಾ ಜೊತೆ ಆ್ಯಕ್ಸನ್ ಪ್ರಿನ್ಸ್​ ಧ್ರುವಾಸರ್ಜಾ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಿಕೊಂಡರು. ಗಣ್ಯರ ಸಮ್ಮುಖದಲ್ಲಿ ಬೆಂಗಳೂರಿನ ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ನಿಶ್ಚಿತಾರ್ಥ ನಡೆಯಿತು.

ಏಪ್ರಿಲ್ ಕೊನೆಯ ವಾರದಲ್ಲಿ ಮದುವೆ ನಿಶ್ಚಯವಾಗಿದೆ.ಹದಿನಾರು ವರ್ಷದಿಂದ ಪ್ರೀತಿಸುತ್ತಿದ್ದ ಧೃವ ಸರ್ಜಾ ಬಾಲ್ಯದ ಗೆಳತಿಯನ್ನು ವರಿಸಲಿದ್ದಾರೆ. ಧೃವ ಸರ್ಜಾ ಆಂಜನೇಯನ ಭಕ್ತನಾಗಿದ್ದು, ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ್ದರು. ಅದರಂತೆಯೇ ಇಂದು ಆಂಜನೇಯ ದೇವಸ್ಥಾನದಲ್ಲಿ ಕುಟುಂಬ ಮತ್ತು ಬಂಧು-ಮಿತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here