ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ ಗಳು ಚಿಳಿಗಾಲದಲ್ಲಿ ಉಪ್ಪು ಮಿಶ್ರಿತ , ಕರಿದ ಮತ್ತು ಹುರಿದ ತಿಂಡಿಗಳಿಗೆ ಪರ್ಯಾಯ ಮಾತ್ರವೇ ಅಲ್ಲದೆ ಇವು ಮಾನವನ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು. ಚಳಿಗಾಲದ ಶೀತದಲ್ಲಿ ಡ್ರೈ ಫ್ರೂಟ್ಸ್ ನಿಮಗೆ ಅಗತ್ಯವಿರುವ ಪೋಷಕಾಂಶಗಳು, ಜೀವಸತ್ವಗಳು ಮತ್ತು ಶಾಖವನ್ನು ಒದಗಿಸುವುದು ಮಾತ್ರವೇ ಅಲ್ಲದೆ ಸಿಹಿ ತಿನ್ನಬೇಕೆಂಬ ಹಂಬಲವನ್ನು ಕೂಡಾ ಇದು ಪೂರೈಸುವ ಕೆಲಸವನ್ನು ಮಾಡುತ್ತದೆ. ಬಿಡುವಿಲ್ಲದೆ‌ ಕೆಲಸ ಮಾಡುವವರಿಗಂತೂ, ದಿನದಲ್ಲಿ ಶಕ್ತಿಯನ್ನು ಪಡೆಯಲು ಒಣ ಹಣ್ಣುಗಳು ತ್ವರಿತ ಮತ್ತು ರುಚಿಕರವಾದ ಮಾರ್ಗವೇ ಆಗಿದೆ. ಇಂತಹ ಒಣ ಹಣ್ಣುಗಳಲ್ಲಿ ಚಳಿಗಾಲಕ್ಕೆ ಅತ್ಯಂತ ಉಪಯುಕ್ತವಾದ ನಾಲ್ಕು ಡ್ರೈ ಫ್ರೂಟ್ಸ್ ಬಗ್ಗೆ ತಿಳಿಯೋಣ ಬನ್ನಿ.

1. ಬಾದಾಮಿ : ‘ಒಣ ಹಣ್ಣುಗಳ ರಾಜ’ ಎಂದೇ ಇದನ್ನು ಕರೆಯಲಾಗಿದೆ. ಬಾದಾಮಿ ದೇಹಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿದೆ. ಅವು ವಿಟಮಿನ್ ಇ, ಸತು ಮತ್ತು ಸೆಲೆನಿಯಂನ ಉತ್ತಮ ನೈಸರ್ಗಿಕ ಮೂಲವಾಗಿದೆ. ಬಾದಾಮಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು, ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಆ ಮೂಲಕ ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಕೂಡಾ ಸಹಾಯಕಾರಿಯಾಗಿದೆ. ಇದು ನಮ್ಮ ಆರೋಗ್ಯಕರ ಆಹಾರ ಯೋಜನೆಗೆ ಸೂಕ್ತವಾದ ಒಣ‌ ಹಣ್ಣು.

ಅಂಜೂರ: ಅಂಜೀರ್ ಎಂದು ಕೂಡಾ ಕರೆಯಲ್ಪಡುವ ಅಂಜೂರದಲ್ಲಿ ವಿಟಮಿನ್, ಖನಿಜ ಮತ್ತು ನಾರಿನಂಶವಿದೆ. ಅಂಜೂರವು ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೋಡಿಯಂ, ಕಬ್ಬಿಣ, ರಂಜಕ ಮತ್ತು ಕ್ಲೋರಿನ್‌ನ ಮೂಲವಾಗಿದೆ. ಅವುಗಳಲ್ಲಿ ಪೊಟ್ಯಾಸಿಯಮ್ ಕೂಡ ಸಮೃದ್ಧವಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಅಗತ್ಯವಿರುವ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕಾರಣ ಮಧುಮೇಹ ರೋಗಿಗಳಿಗೆ ಇದು ಅತ್ಯುತ್ತಮವಾಗಿವೆ. ಇದು ಮಲಬದ್ಧತೆ, ಅಜೀರ್ಣ, ಕೆಮ್ಮು, ಬ್ರಾಂಕೈಟಿಸ್ ಮತ್ತು ಆಸ್ತಮಾ ಸೇರಿದಂತೆ ವ್ಯಾಪಕವಾದ ರೋಗಗಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

ವಾಲ್ನಟ್ : ನಿಸ್ಸಂದೇಹವಾಗಿ ಇದು ಆರೋಗ್ಯಕರ ಎಂದೇ ಹೇಳಬಹುದು. ಚಳಿಗಾಲದಲ್ಲಿ ಈ ಒಣ ಹಣ್ಣು ಅತ್ಯಗತ್ಯವಾಗಿರುತ್ತದೆ. ವಾಲ್ನಟ್ ಒಮೆಗಾ -3 ಕೊಬ್ಬಿನಾಮ್ಲವನ್ನು ಹೊಂದಿದೆ, ಇದು ಕೂದಲಿಗೆ ಒಳ್ಳೆಯದು, ವಿಶೇಷವಾಗಿ ಹವಾಮಾನವು ಹೆಚ್ಚು ಡ್ರೈ ಆದಾಗ ಅವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮ ಮತ್ತು ಕೂದಲಿಗೆ ಕೂಡಾ ಇದು ಒಳ್ಳೆಯದು.

ಗೋಡಂಬಿ: ಗೋಡಂಬಿ ಬೀಜಗಳು ಕೊಲೆಸ್ಟ್ರಾಲ್ ಮಟ್ಟ, ರಕ್ತದಲ್ಲಿನ ಸಕ್ಕರೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಮೈಗ್ರೇನ್ ತಡೆಗಟ್ಟುತ್ತದೆ ಮತ್ತು ಮಿತವಾಗಿ ಸೇವಿಸಿದಾಗ ತೂಕ ಇಳಿಸಿಕೊಳ್ಳಲು ಸಹ ಸಹಾಯವನ್ನು ಮಾಡುತ್ತದೆ. ಚಳಿಗಾಲದಲ್ಲಿ ಬಿರುಕು ಬಿಟ್ಟ ಚರ್ಮ ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಗೋಡಂಬಿಯಿಂದ ತಯಾರಾದ ಎಣ್ಣೆ ಅದರ ಪೋಷಣೆಗೆ ಸಹಾಯ ಮಾಡುತ್ತದೆ. ಗೋಡಂಬಿ ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದ್ದು ಮತ್ತು ವಯಸ್ಸಾಗುವ ಲಕ್ಷಣಗಳನ್ನು ನಿಯಂತ್ರದಲ್ಲಿಡಲು ನೆರವಾಗುತ್ತದೆ. ಅದು ಈ ಚಳಿಗಾಲದಲ್ಲಿ ಮತ್ತು ಉಳಿದವುಗಳಲ್ಲಿ ಚರ್ಮ ಕಾಂತಿಯನ್ನು ಹೊಳೆಯುವಂತೆ ಇಡುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here