ದುಬೈನಲ್ಲಿ ಅಂದುಕೊಂಡಂತೇ ಬಹು ನಿರೀಕ್ಷೆಯ ದಿ ವಿಲನ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ ನಿರ್ದೇಶಕ ಪ್ರೇಮ್.ಕಳೆದ ವಾರ ಬೆಂಗಳೂರಿನಲ್ಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮಾಡಿದ್ದ ನಿರ್ದೇಶಕ ಪ್ರೇಮ್ ಅವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.ದುಬೈನಲ್ಲಿ ದಿ ವಿಲನ್ ಚಿತ್ರದ ಪ್ರೆಸ್ ಮೀಟ್ ಮಾಡುವುದಾಗಿ ಮೊದ ಮೊದಲಿನಿಂದಲೂ ನಿರ್ದೇಶಕ ಪ್ರೇಮ್ ಅವರು ಹೇಳಿದ್ದರು.

ನಿನ್ನೆ ರಾತ್ರಿ ದುಬೈನಲ್ಲಿ ನಡೆದ ಅದ್ದೂರಿಯಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಆಗಮಿಸಿ ದುಬೈ ಕನ್ನಡಿಗರ ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ದಿ ವಿಲನ್ ಚಿತ್ರದ ಹಾಡುಗಳಿಗೆ ನೃತ್ಯತಂಡದಿಂದ ಡಾನ್ಸ್ ಏರ್ಪಡಿಸಲಾಗಿತ್ತು. ಅರ್ಜುನ್ ಜನ್ಯಾ ಸಂಗೀತ ನೀಡಿರುವ ದಿ ವಿಲನ್ ಚಿತ್ರದ ಹಾಡುಗಳಿಗೆ ದುಬೈನಲ್ಲಿ ಕನ್ನಡಿಗರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಈ ಕಾರ್ಯಕ್ರಮದ ಆಕರ್ಷಣೆ ಕೇಂದ್ರ ಬಿಂದು ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಂಡ್ಯದ ಗಂಡು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.

ನಂತರ ಮಾತನಾಡಿ ಪ್ರೇಮ್ ಏನೇ ಮಾಡಿದರೂ ತುಂಬಾ ವಿಭಿನ್ನವಾಗಿರುತ್ತದೆ. ಶಿವಣ್ಣ ಸುದೀಪ್ ಇಬ್ಬರೂ ಸ್ಟಾರ್ ನಟರನ್ನು ಇಟ್ಟು ದಿ ವಿಲನ್ ಎಂದು ಹೆಸರಿಟ್ಟಿದ್ದಾನೆ.ನನಗು ದಿ ವಿಲನ್ ಚಿತ್ರದ ಬಗ್ಗೆ ಹೆಚ್ಚಾಗಿ ಕುತೂಹಲ ಇದೆ ಎಂದರು.ನಂತರ ಮಾತನಾಡಿದ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ದಿ ವಿಲನ್ ಚಿತ್ರದ ಟಿಕ್ ಟಿಕ್ ಟಿಕ್ ಹಾಡಿಗೆ ಡಾನ್ಸ್ ಮಾಡಿ ಮನರಂಜನೆ ನೀಡಿದ ಡಾ.ಶಿವರಾಜಕುಮಾರ್ ಅವರು ದುಬೈ ಕನ್ನಡಿಗರಿಗೆ ವಿಶೇಷ ಧನ್ಯವಾದ ಅರ್ಪಿಸಿದರು.ನಾನು ಈ ವರ್ಷ ಎರಡನೇ ಬಾರಿ ದುಬೈಗೆ ಆಗಮಿಸಿದ್ದೇನೆ .

ಟಗರು ಸಕ್ಸಸ್ ಗೆ ಇಲ್ಲಿ ಬಂದಿದ್ದೆವು ಈಗ ದಿ ವಿಲನ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಇದೇ ಮೊದಲ ಬಾರಿಗೆ ದುಬೈನಲ್ಲಿ ನಡೆಯುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು.ನಂತರ ಮಾತನಾಡಿ ಈ ಕಾರ್ಯಕ್ರಮಕ್ಕೆ ಈ ಚಿತ್ರದ ಮತ್ತೊಬ್ಬ ನಾಯಕರಾದ ಸುದೀಪ್ ಅವರು ಆಗಮಿಸಬೇಕಿತ್ತು ಆದರೆ ಅನಿವಾರ್ಯವಾಗಿ ಬಂದಿಲ್ಲ.ರೆಬೆಲ್ ಸ್ಟಾರ್ ಅಂಬರೀಶ್ ಅವರು ಬಂದಿರುವುದು ಇಡೀ ಕನ್ನಡ ಚಿತ್ರರಂಗ ಭಾಗವಹಿಸಿದಂತೆ ಅರ್ಥ ಎಂದು ಶಿವರಾಜಕುಮಾರ್ ಅವರು ಮಾತನಾಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here