ಕಳೆದ ತಿಂಗಳಲ್ಲಿ ಮಾರುತಿ ಗೌಡ ಮೇಲಿನ ಹಲ್ಲೆಯ ಆರೋಪದಲ್ಲಿ ಒಂಬತ್ತು ದಿನಗಳ ಜೈಲು ವಾಸ ಅನುಭವಿಸಿದ್ದ ಸ್ಯಾಂಡಲ್ ವುಡ್ ಕರಿಚಿರತೆ ದುನಿಯಾ ವಿಜಯ್ ನಂತರ ಬೇಲ್ ನಿಂದ ಹೊರಬಂದಿದ್ದರು. ಆ ಕೇಸ್ ನಿಂದ ಹೊರಬರುವ ಮೊದಲೇ ದುನಿಯಾ ವಿಜಯ್ ಅವರ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ‌. ಅಷ್ಟೇ ಅಲ್ಲ ಈ ಬಾರಿ‌ ದುನಿಯಾ ವಿಜಯ್ ಮೇಲೆ ಕಂಪ್ಲೆಂಟ್ ಕೊಟ್ಟು ಪೋಲೀಸ್ ಠಾಣೆಯ ಮೆಟ್ಟಿಲೇರಿರುವುದು ಸ್ವತಃ ದುನಿಯಾ ವಿಜಯ್ ಪುತ್ರಿ‌ ಮೋನಿಕಾ. ಹೌದು ದುನಿಯಾ ವಿಜಯ್ ಮೇಲೆ ದುನಿಯಾ ವಿಜಯ್ ಅವರ ಮೊದಲ ಪುತ್ರಿ ಮೋನಿಕಾ ಅವರು ಗಿರಿನಗರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ದುನಿಯಾ ವಿಜಯ್ ಮೇಲೆ ಮಾತ್ರವಲ್ಲದೆ ದುನಿಯಾ ವಿಜಯ್ ಅವರ ಎರಡನೇ ಒತ್ತಿ ಕೀರ್ತಿ ಗೌಡ ಹಾಗೂ ದುನಿಯಾ ವಿಜಯ್ ಅವರ ಸ್ನೆಹಿತರೂ ಸೇರಿ‌ ಒಟ್ಟು ಐದು ಜನರ ಮೇಲೆ ದುನಿಯಾ ವಿಜಯ್ ಅವರ ಪುತ್ರಿ ಪೋಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ‌.ಇದರಿಂದಾಗಿ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ವತಃ ಮಗಳೇ  ಈಗ ದುನಿಯಾ ವಿಜಯ್ ಮತ್ತು ವಿಜಯ್ ಪತ್ನಿ ಕೀರ್ತಿ ಗೌಡ ಅವರ ವಿರುದ್ಧ ಗಿರಿನಗರ ಪೋಲೀಸ್ ಠಾಣೆಯಲ್ಲಿ  ಕಂಪ್ಲೇಂಟ್ ಕೊಟ್ಟಿದ್ದಾರೆ.

ದುನಿಯ ವಿಜಯ ಮಗಳು ಮೋನಿಕಾ ನಿನ್ನೆ ಬಟ್ಟೆ ತರೋಕೆ ಅಂತ ಕೀರ್ತಿಗೌಡ ಅವ್ರ ಮನೆಗೆ ಹೋಗಿದ್ರಂತೆ. ಈ ವೇಳೆ ಕೀರ್ತಿಗೌಡ, ವಿಜಯ್ ಮತ್ತಿತರರು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.ನನಗೆ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ ಅಂತ ಮೋನಿಕಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೆಕ್ಷನ್ 147, 148ರ ಅಡಿ ಕೇಸ್ ದಾಖಲಾಗಿದೆ. ಈಗ ದುನಿಯಾ ವಿಜಯ್ ಅವರು ಈ‌ ಕಂಪ್ಲೆಂಟ್ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here