ಇಂದು ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ನಿಧನರಾಗಿದ್ದಾರೆ. 44 ವರ್ಷ ವಯಸ್ಸಿಗೆ ಬದುಕಿನ ಯಾತ್ರೆ ಮುಗಿಸಿರುವ ಬುಲೆಟ್ ಪ್ರಕಾಶ್ ಅವರು 350 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಬಹು ಅಂಗ ವೈಫಲ್ಯದಿಂದ ಬುಲೆಟ್ ಪ್ರಕಾಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.ಬುಲೆಟ್ ಪ್ರಕಾಶ್ ಅಗಲಿಕೆಗೆ ಕನ್ನಡ ಚಿತ್ರರಂಗ ಸೇರಿ ವಿವಿಧ ವಲಯದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸ್ನೇಹಜೀವಿಯಾಗಿದ್ದ ಬುಲೆಟ್ ಪ್ರಕಾಶ್ ಅವರಿಗೆ ಚಿತ್ರರಂಗದಲ್ಲಿ ಪ್ರಮುಖ ಅತ್ಯಾಪ್ತ  ಸ್ನೇಹಿತರೆಂದರೆ ಅದು ದುನಿಯಾ ವಿಜಯ್.

ದುನಿಯಾ ವಿಜಯ್ ಅವರು ಇಂದು ಮಧ್ಯಾಹ್ನದಿಂದಲೇ ಫೋರ್ಟಿಸ್ ಆಸ್ಪತ್ರೆಯಲ್ಲಿ ಬೀಡು ಬಿಟ್ಟಿದ್ದಾರೆ. ಬುಲೆಟ್ ಪ್ರಕಾಶ್ ಅಗಲಿಕೆ ದುನಿಯಾ ವಿಜಯ್ ಅವರಿಗೆ ಅತೀವ ನೋವು ತಂದಿದೆ. ಆದರೂ ಸಹ ನೋವಿನಲ್ಲೂ ಎದೆಗುಂದದೆ ದುನಿಯಾ ವಿಜಯ್ ಅವರು ಬುಲೆಟ್ ಪ್ರಕಾಶ್ ಕುಟುಂಬದ ಜೊತೆ ನಿಂತಿದ್ದಾರೆ. ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಧೈರ್ಯ ತುಂಬುವ ಜೊತೆಗೆ ಬುಲೆಟ್ ಪ್ರಕಾಶ್ ಅಂತಿಮ ವಿಧಿ ವಿಧಾನದ ಬಗ್ಗೆ ಗಮನ ನೀಡುವ ಮೂಲಕ ಬುಲೆಟ್ ಪ್ರಕಾಶ್ ಕುಟುಂಬದ ಜೊತೆ  ದುನಿಯಾ ವಿಜಯ್ ನಿಂತಿದ್ದಾರೆ. ಅಂತಿಮ ವಿಧಿವಿಧಾನದ ಬಗ್ಗೆ ಸಚಿವ ಆರ್ ಅಶೋಕ್ ಜೊತೆ ಮಾತುಕತೆ ನಡೆಸಿದ ಬಳಿಕ ದುನಿಯಾ ವಿಜಯ್ ಅವರು ಬುಲೆಟ್ ಪ್ರಕಾಶ್ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಬುಲೆಟ್ ಪ್ರಕಾಶ್ ಅಂತಿಮ ವಿಧಿ ವಿಧಾನದ ಬಗ್ಗೆ ದುನಿಯಾ ವಿಜಯ್ ಈ ರೀತಿಯಲ್ಲಿ ಬರೆದಿದ್ದಾರೆ. “ಸದಾ ಜೊತೆಯಾಗಿದ್ದ ಆತ್ಮೀಯ ಒಮ್ಮೆಲೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ನನಗೆ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬುವ ನೋವನ್ನು ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ಬುಲೆಟ್ ಕುಟುಂಬಕ್ಕೆ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ. ಮತ್ತೆ ಹುಟ್ಟಿ ಬಾ ಗೆಳೆಯ.. ಹಾಗೇ ನಾಳೆ ಅಭಿಮಾನಿಗಳು ಯಾರೂ ಮನೆಯ ಹತ್ತಿರ ಬರಬೇಡಿ. ಕೊರೋನಾ ವೈರಸ್ ಲಾಕ್ ಡೌನ್ ಇರುವುದರಿಂದ ಇಂತಹ ಸಮಯದಲ್ಲಿ ಸರ್ಕಾರದ ಆದೇಶ ಪಾಲನೆ ನಮ್ಮೆಲ್ಲರ ಜವಾಬ್ದಾರಿ.! ತುಂಬಾ ಕಡಿಮೆ ಜನರಿಗೆ ಮಾತ್ರ ಬುಲೆಟ್ ಪ್ರಕಾಶ್ ಅಂತಿಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸರ್ಕಾರ ಅವಕಾಶ ನೀಡಿದೆ ದಯವಿಟ್ಟು ಸಹಕರಿಸಿ” ಎಂದು ದುನಿಯಾ ವಿಜಯ್ ಬರೆಯುವ ಮೂಲಕ ಗೆಳೆಯನ ಕುಟುಂಬಕ್ಕೆ ಆಸರೆ ಆಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here