ನೆನ್ನೆ ತಡರಾತ್ರಿ ದುನಿಯಾ ವಿಜಯ್ ಅವರು ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗನಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಹೈ ಗ್ರೌಂಡ್ ಪೋಲೀಸ್ ಠಾಣೆಯಲ್ಲಿ ಬಂಧಿಯಾಗಿದ್ದಾರೆ. ನೆನ್ನೆ ಸಂಜೆ ವಸಂತನಗರದ ಅಂಬೇಡ್ಕರ್ ಭವನದಲ್ಲಿ 32 ನೇ ಅಮೇಚರ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ಮಿಸ್ಟರ್ ಬೆಂಗಳೂರು 2018 ಕಾರ್ಯಕ್ರಮ ನಡೆದಿತ್ತು.ಅಲ್ಲಿ ದುನಿಯಾ ವಿಜಯ್ ಅವರ ಆಪ್ತ ಗೆಳೆಯ ಹಾಗೂ ಈಗಿನ ಜಿಮ್ ಕೋಚ್ ಪ್ರಸಾದ್ ತಂಡ ಭಾಗವಹಿತ್ತು.ಅಲ್ಲಿಯೇ ದುನಿಯಾ ವಿಜಯ್ ಅವರ ಮೊದಲಿನ ಕೋಚ್ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿ ಗೌಡ ಅವರ ತಂಡ ಭಾಗವಹಿಸಿತ್ತು.

ಈ ಸಮಯದಲ್ಲಿ ದುನಿಯಾ ವಿಜಯ್ ಅವರು ಸರ್ಫ್ರೈಸ್ ಗೆಸ್ಟ್ ಆಗಿ ಬಂದಿದ್ದರು. ಈ ವೇಳೆ ದುನಿಯಾ ವಿಜಯ್ ಜೊತೆ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸಹ ಸ್ಟೇಜ್ ಹತ್ತಿದ್ದಾರೆ‌.ಈ ಸಮಯದಲ್ಲಿ ಅಲ್ಲಿದ್ದ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿ ಗೌಡ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಗೆ ಹೇ ಚಿಲ್ಟು ಇಳಿಯೋ ಕೆಳಗೆ ಎಂದು ಕಾಲೆಳೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದುನಿಯಾ ವಿಜಯ್ ಜೊತೆಗಿದ್ದ ಸಹಚರರು ಮಾರುತಿ ಗೌಡ ಜೊತೆ ಜಗಳ ತೆಗೆದಿದ್ದಾರೆ‌   ಸ್ಪರ್ಧೆ ಮುಗಿದ ಬಳಿಕ ದುನಿಯಾ ವಿಜಯ್ ಅವರ ಸಹಚರರು ಮಾರುತಿ ಗೌಡ ಅವರ ಬಳಿ ಪಾನಿಪುರಿ ಕಿಟ್ಟಿ ಬಗ್ಗೆ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಒಬ್ಬರ ಮೇಲೆ ಒಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಈ ಸಮಯದಲ್ಲಿ ಮಾರುತಿ ಗೌಡ ಅವರನ್ನು ದುನಿಯಾ ವಿಜಯ್ ಮತ್ತು ಅವರ ಸ್ನೇಹಿತರು ಕಾರಿನಲ್ಲಿ ಕರೆದೊಯ್ದಿದ್ದಾರೆ.ಈ ವಿಷಯ ಆ ಕ್ಷಣದಲ್ಲೇ ಪಾನಿಪುರಿ ಕಿಟ್ಟಿ ಅವರಿಗೆ ಗೊತ್ತಾಗಿದ್ದು ಕೂಡಲೇ ಪೋಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಆಗ ಹೈಗ್ರೌಂಡ್ಸ್ ಪೋಲೀಸ್ ಠಾಣೆಯ ಅಧಿಕಾರಿಗಳು ದುನಿಯಾ ವಿಜಯ್ ಗೆ ಕರೆ ಮಾಡಿ ಕೂಡಲೇ ಪೋಲೀಸ್ ಠಾಣೆಗೆ ಬರುವಂತೆ ಆದೇಶ ನೀಡಿದ್ದಾರೆ.ಪೋಲೀಸ್ ಠಾಣೆಗೆ ದೂರು ದಾಖಲಾಗುತ್ತಿದ್ದಂತೇ ವಿಜಯ್ ಅವರು ಮಾರುತಿಗೌಡ ಅವರನ್ನು ಕರೆದುಕೊಂಡು ಪೋಲೀಸ್ ಠಾಣೆಗೆ ಬಂದಿದ್ದಾರೆ.ದುನಿಯಾ ವಿಜಯ್ ಪೋಲೀಸ್ ಠಾಣೆಗೆ ಬರುತ್ತಿದ್ದಂತೇ ಪಾನಿಪುರಿ ಕಿಟ್ಟಿ ಅವರ ಸ್ನೇಹಿತರು ದುನಿಯಾ ವಿಜಯ್ ಅವರ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ‌. ದುನಿಯಾ ವಿಜಯ್ ಪಾನಿಪುರಿ ಕಿಟ್ಟಿ ಬಳಿ ಬರುತ್ತಿದ್ದಂತೇ ಸಿಟ್ಟಿಗೆದ್ದ ಪಾನಿಪುರಿ ಕಿಟ್ಟಿ ದುನಿಯಾ ವಿಜಯ್ ಅವರಿಗೆ ಡಿಚ್ಚಿ‌ ಸಹ ಹೊಡೆದಿದ್ದಾರೆ.

ನಂತರ ದುನಿಯಾ ಮತ್ತು ಅವರ ಸ್ನೇಹಿತರನ್ನು ಠಾಣೆಗೆ ದಾಖಲಿಸಿ ಕೇಸ್ ದಾಖಲಿಸಲಾಗಿದೆ.ಪಾನಿಪುರಿ ಕಿಟ್ಟಿ ಮತ್ತು ದುನಿಯಾ ವಿಜಯ್ ಸುಮಾರು ಇಪ್ಪತ್ತು ವರ್ಷಗಳ ಸ್ನೇಹಿತರಾಗಿದ್ದರು. ಇಬ್ಬರೂ ಹೆಸರು ಮೊದಲಿನ ಗೆಳೆಯರು.ಇವರಿಬ್ಬರ ಗೆಳೆತನ ಈಗ ಮುರಿದು ಬಿದ್ದಿದೆ. ದೋಸ್ತಿಗಳು ದುಶ್ಮನ್ ಗಳಾಗಿದ್ದಾರೆ‌. ಇವರ ದೋಸ್ತಿ ಮುರಿದು ಬೀಳಲು ಪ್ರಮುಖ ಕಾರಣ ಪ್ರಸಾದ್ ಎನ್ನುವ ವ್ಯಕ್ತಿ. ಇಷ್ಟಕ್ಕೂ ಈ ಪ್ರಸಾದ್ ಯಾರು ಅಂತೀರ. ಪ್ರಸಾದ್ ಮತ್ತು ಪಾನಿಪುರಿ ಕಿಟ್ಟಿ ಇಬ್ಬರೂ ಒಂದು ಕಾಲದ ಗೆಳೆಯರು.

ಪಾನಿಪುರಿ ಕಿಟ್ಟಿ ಅವರಿಗೂ ಪ್ರಸಾದ್ ಜಿಮ್ ಟ್ರೈನರ್ ಆಗಿದ್ದರು ಎನ್ನುವ ಮಾತುಗಳಿವೆ.ಪ್ರಸಾದ್ ಬರುತ್ತಾ ಬರುತ್ತಾ ದುನಿಯಾ ವಿಜಯ್ ಅವರಿಗೆ ಹತ್ತಿರವಾಗುತ್ತಾರೆ. ಮಾಸ್ತಿಗುಡಿ ಚಿತ್ರದ ನಂತರ ದುನಿಯಾ ವಿಜಯ್ ಅವರಿಗೆ ಪ್ರಸಾದ್ ಅವರೇ ಪರ್ಸನಲ್ ಜಿಮ್ ಟ್ರೈನರ್ ಆಗುತ್ತಾರೆ. ಪ್ರಸಾದ್ ದುನಿಯಾ ವಿಜಯ್ ಅವರಿಗೆ ಹತ್ತಿರವಾಗುತ್ತಿದ್ದಂತೆ ಪಾನಿಪುರಿ ಕಿಟ್ಟಿ ದುನಿಯಾ ವಿಜಯ್ ಅವರಿಂದ ದೂರ ಉಳಿಯುತ್ತಾರೆ.ಆ ನಂತರ ದುನಿಯಾ ವಿಜಯ್ ಅವರಿಗೂ ಪಾನಿಪುರಿ ಕಿಟ್ಟಿ ಅವರಿಗೂ ಇದ್ದ ಸ್ನೇಹ ಮಾಯವಾಗಿ ವೈರತ್ವ ಬೆಳೆದಿದೆ ಎನ್ನುವ ಮಾತುಗಳಿವೆ.ಈ ವೈರತ್ವವೇ ಈಗಿನ ದುನಿಯಾ ವಿಜಯ್ ಪರಿಸ್ಥಿತಿಗೆ ಕಾರಣವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here