ಕನ್ನಡ ಚಿತ್ರರಂಗದ ಸ್ಟಾರ್ ನಾಯಕ ನಟರಲ್ಲಿ ಒಬ್ಬರಾದ ದುನಿಯಾ ವಿಜಯ್ ಅವರು ಆಗಾಗ ಹಲವಾರು ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸನ್ನು ಗೆಲ್ಲುತ್ತಲೇ  ಇರುತ್ತಾರೆ. ಹಲವಾರು ಜನರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿರುವ ದುನಿಯಾ ವಿಜಯ್ ಅವರಲ್ಲಿ ಒಂದು  ಮಗುವಿನಂಥ ಮನಸ್ಸಿದೆ ಎಂಬುದಕ್ಕೆ ಹಲವಾರು ಘಟನೆಗಳು ಸಾಕ್ಷಿ ಇವೆ. ಇದೀಗ ದುನಿಯಾ ವಿಜಯ್ ಅವರು ಮತ್ತೊಂದು ವಿಚಾರದಲ್ಲಿ ಮಾನವೀಯತೆ ಮೆರೆದಿದ್ದಾರೆ. ದುನಿಯಾ ವಿಜಯ್ ಅವರ ಮನೆಯ ಮುಂದೆ ಕಳೆದ ಎರಡು ಮೂರು ದಿನಗಳಿಂದ ಒಬ್ಬರು ಹೆಂಗಸು ಹೋಡಾಡುತ್ತಿರುವುದನ್ನು ಗಮನಿಸಿರುವ ದುನಿಯಾ ವಿಜಯ್ ಅವರು ಮಾನಸಿಕ ಅಸ್ವಸ್ಥೆ ಕಳೆದ ಎರಡು ದಿನಗಳಿಂದ ಮನೆಯ ಮುಂದೆ  ಇದ್ದಾರೆ.

ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಮಾಡಿ ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರಕ್ಕೆ ಕೋರಿಕೆ ಮಾಡಿಕೊಂಡಿದ್ದಾರೆ. ದುನಿಯಾ ವಿಜಯ್ ಅವರು ಬರೆದಿರುವ ಸಾಲುಗಳು ಈ ರೀತಿಯಾಗಿವೆ..”ಪ್ರಸ್ತುತ ದಿನಗಳಲ್ಲಿ ಆರೋಗ್ಯ, ಐಶ್ವರ್ಯ ಎಲ್ಲ ಇರುವವರೇ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಯಾಕೆಂದರೆ ವೈರಸ್ ಅಂತಸ್ತು ನೋಡಿ ಬರುವಂಥದ್ದಲ್ಲವಲ್ಲ. ಅಂಥದ್ದರಲ್ಲಿ ಸರಿಯಾಗಿ ಬಟ್ಟೆಗೂ ಗತಿಯಿರದ ಮಹಿಳೆಯೋರ್ವಳು ಹೊರಗಡೆ ಸುತ್ತಾಡುತ್ತಿದ್ದರೆ ಹೇಗಿರುತ್ತದೆ? ಅಂಥ ಅವಸ್ಥೆಯಲ್ಲಿ ಯಾರೋ‌ ಅಪರಿಚಿತ ತಾಯಿಯೋರ್ವಳು ನಮ್ಮನೆಯ ಪಕ್ಕದ ಟ್ಯಾಂಕ್ ‌ಮುಂದೆ ಸುಳಿದಾಡುತ್ತಿರುವುದನ್ನು ಕಂಡೆ. ಹಗಲಿನಲ್ಲಿ ಮಾತ್ರವಲ್ಲ, ರಾತ್ರಿ ಕೂಡ ಅಲ್ಲೇ

ಅಡ್ಡಾಡುತ್ತಿರುತ್ತಾರೆ ಎಂದು ಅನಿಸಿಕೆ. ಕಳೆದ ಎರಡು ಮೂರು ದಿನಗಳಿಂದ ಅಲ್ಲೇ ಇರುವ ಆಕೆ ಒಬ್ಬೊಬ್ಬಳೇ ಮಾತನಾಡುತ್ತಿರುವುದು ಕಂಡರೆ ಮಾನಸಿಕ ಅಸ್ವಸ್ಥತೆ ಕೂಡ ಇರುವಂತಿದೆ. ಮೊದಲೇ ಮಾರಕ ಕಾಯಿಲೆ ಹರಡುವ ಸಂಭವ ಇರುವ ಈ ಸಂದರ್ಭದಲ್ಲಿ ಅವರನ್ನು ಹಾಗೆಯೇ ಬಿಟ್ಟು ಬಿಡುವುದು ತಪ್ಪಾದೀತು. ನನ್ನ ಈ ಮನವಿಯನ್ನು ಕಂಡ ಸಂಬಂಧ ಪಟ್ಟ ಇಲಾಖೆಯವರು ತಕ್ಷಣ ಸ್ಥಳಕ್ಕೆ ಆಗಮಿಸಿ ಅವರ ಚಿಕಿತ್ಸೆ ಅಥವಾ ಆಶ್ರಯಕ್ಕೆ ಅವಕಾಶ ಮಾಡಿಕೊಡಬಹುದು ಎಂದು ನಿರೀಕ್ಷಿಸುತ್ತೇನೆ”ಎಂದು ದುನಿಯಾ ವಿಜಯ್ ಅವರು ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ.

 

ಪ್ರಸ್ತುತ ದಿನಗಳಲ್ಲಿ ಆರೋಗ್ಯ, ಐಶ್ವರ್ಯ ಎಲ್ಲ ಇರುವವರೇ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಯಾಕೆಂದರೆ ವೈರಸ್ ಅಂತಸ್ತು ನೋಡಿ…

Duniya Vijay यांनी वर पोस्ट केले शनिवार, ४ एप्रिल, २०२०

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here