ದುನಿಯಾ ವಿಜಯ್ ಅವರ ಸಲಗ ಚಿತ್ರ ಆರಂಭವಾದ ದಿನದಿಂದಲೂ ಕೂಡಾ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಮೊದಲ ಬಾರಿಗೆ ವಿಜಯ್ ಅವರು ನಿರ್ದೇಶನ ಮಾಡುತ್ತಿರುವುದು ಈ ಚಿತ್ರದ ವಿಶೇಷವಾಗಿದೆ. ಇನ್ನು ದುನಿಯಾ ವಿಜಯ್ ಅವರು ಸಲಗ ಸಿನಿಮಾದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಚಿತ್ರದ ಬಗ್ಗೆ ಹೇಳುತ್ತಾ ಅಲ್ಲಿ ವಿಜಯ್ ಮಗ ಸಾಮ್ರಾಟ್ ನ ಹೆಸರು ಬಂದಾಗ ಅವರು ಅರ್ಥಪೂರ್ಣವಾದ ಮಾತುಗಳನ್ನು ಆಡಿದ್ದಾರೆ. ವಿಜಯ್ ಅವರು ಪ್ರತಿ ಅಪ್ಪನಿಗೂ ತನ್ನ ಮಕ್ಕಳೇ ಸರ್ವಸ್ವ, ಪ್ರತಿ ತಂದೆ ತನ್ನ ಮಕ್ಕಳು ಹೇಗಿರಬೇಕು, ಹೀಗಾಗಬೇಕು, ಸಾಧನೆ ಮಾಡಬೇಕು ಎನ್ನುವ ಕನಸನ್ನು ಇಟ್ಟುಕೊಂಡಿರುತ್ತಾನೆ ಎನ್ನುತ್ತಾ ಅಂತಹುದೇ ಒಂದು ಮಹತ್ವದ ಆಶಯದಿಂದ ಮಗನಿಗೆ ಸಾಮ್ರಾಟ್ ಹೆಸರನ್ನು ಇಟ್ಟಿರುವುದಾಗಿ ಅವರು ಹೇಳಿದ್ದಾರೆ.

ತಮ್ಮ ಮಗನು ಕೂಡಾ ಒಬ್ಬ ದೊಡ್ಡ ಐಪಿಎಸ್ ಅಧಿಕಾರಿಯೋ, ಒಬ್ಬ ದೊಡ್ಡ ವ್ಯಕ್ತಿಯಾಗಿಯೋ ಬೆಳೆಯಬೇಕು ಅನ್ನೋ ಆಸೆಯಿದೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನಾನು ಪ್ರಾಮಾಣಿಕ ಹಾಗೂ ನಿಷ್ಠಾವಂತ ಐಪಿಎಸ್ ಅಧಿಕಾರಿಗಳಾದ ಅಣ್ಣಾಮಲೈ, ರವಿ ಡಿ ಚೆನ್ನಣ್ಣನವರ್ ಮುಂತಾದ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ , ಅವರ ಜೊತೆ ಓಡಾಡಿದ್ದೇನೆ, ಆಗ ಅನಿಸಿದ್ದು ಒಂದೇ, ಅದೇನೆಂದರೆ ನಮ್ಮ ಮನೇಲಿ ಮಕ್ಕಳು ಯಾರಾದರೂ ಆತರ ಆಗಲಿ ಅನಿಸಿತ್ತು. ಅದಕ್ಕೆ ನಾನು ಮಗನಿಗೆ ಸಾಮ್ರಾಟ್ ಅಂತ ಹೆಸರಿಟ್ಟೆ ಎಂದು ಅವರು ಹೇಳಿದ್ದಾರೆ.

ವಿಜಯ್ ಅವರು ಸಲಗ ಸಿನಿಮಾ ಮಾಡುತ್ತಿರುವುದೇ ಪ್ರಾಮಾಣಿಕ ಐಪಿಎಸ್ , ಐಎಎಸ್ ಹಾಗೂ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಧೀಮಂತ ಅಧಿಕಾರಿಗಳಿಗಾಗಿ ಎಂದು ಸ್ವತಃ ವಿಜಯ್  ಅವರೇ ಹೇಳಿದ್ದಾರೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡ್ತಾ ಇರೋ ಎಲ್ಲಾ ಪೋಲಿಸ್ ಅಂದರೆ ರೈಟರ್, ದೆಫೇದಾರ್ ಇಂದ ಹಿಡಿದು ಎಲ್ಲಾ ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳಿಗೆ ಈ ಸಿನಿಮಾವನ್ನು ಅರ್ಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಬಹಳ ಕಷ್ಟಪಟ್ಟು ಇಷ್ಟಪಟ್ಟು ಸಲಗ ತಯಾರಾಗುತ್ತಿದ್ದು ದುನಿಯಾ ವಿಜಯ್ ಕನಸಿನ ಚಿತ್ರಕ್ಕೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸಾಥ್ ಕೊಟ್ಟು ನಿಂತಿದ್ದಾರೆ. ಇದೇ ವರ್ಷ ಸಲಗ ತೆರೆಕಂಡು ದೊಡ್ಡ ಮಟ್ಟದಲ್ಲೇ ಸದ್ದು ಮಾಡಲಿ ಎಂಬುದೇ ನಮ್ಮ ಆಶಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here