ಕನ್ನಡ ಚಿತ್ರರಂಗದ ಹೆಸರಾಂತ ನಟರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಸಾಕಷ್ಟು ಮಾಸ್ ಅಭಿಮಾನಿಗಳ ವರ್ಗ ಹೊಂದಿರುವ ಸ್ಯಾಂಡಲ್ ವುಡ್ ಕರಿಚಿರತೆ ಈಗ ಜೈಲುಪಾಲಾಗಿದ್ದಾರೆ. ಸದಾ ಗೆಳೆಯರೊಂದಿಗೆ ಇರುವ ದುನಿಯಾ ವಿಜಯ್ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ಗೆಳೆಯರ ವಿಷಯದಲ್ಲೇ. ತಾನು ಬೆಳೆಯುವುದರ ಜೊತೆಗೆ ತನ್ನ ಗೆಳೆಯರನ್ನೂ ಸಹ ಬೆಳೆಸುವ ಪ್ರಯತ್ನ ಮಾಡಿದ್ದ ದುನಿಯಾ ವಿಜಯ್ ಈಗ ಇಬ್ಬರು ಗೆಳೆಯರ ನಡುವಿನ ವೈರತ್ವಕ್ಕೆ ತಲೆ ಕೊಟ್ಟಿದ್ದಾರೆ. ಪಾನಿಪುರಿ ಕಿಟ್ಟಿ ದುನಿಯಾ ವಿಜಯ್ ಅವರಿಗೆ ಒಂದು ಕಾಲದ ಗೆಳೆಯ ಮತ್ತು ಈಗ ಇರುವ ಪ್ರಸಾದ್ ಕೂಡ ಪಾನಿಪುರಿ ಕಿಟ್ಟಿ ಅವರ ಗೆಳೆಯ‌.

ಅವರಿಬ್ಬರ ನಡುವಿನ ವೈಮನಸ್ಯ ಈಗ ವೈರತ್ವಕ್ಕೆ ತಿರುಗಿದೆ. ದುನಿಯಾ ವಿಜಯ್ ಅವರಿಗೆ ಈಗ ಇರುವ ಗೆಳೆಯರ ಬಳಗ ಸರಿ ಇಲ್ಲ ಎಂಬ ಮಾತನ್ನು ಸ್ವತಃ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ತಿಳಿಸಿದ್ದಾರೆ‌. ನಾಗರತ್ನ ಹೇಳುವ ಪ್ರಕಾರ ದುನಿಯಾ ವಿಜಯ್ ಅವರ ಈಗಿನ ಸ್ಥಿತಿಗೆ ದುನಿಯಾ ವಿಜಯ್ ಜೊತೆ ಇರುವ ಗೆಳೆಯರೇ ಕಾರಣ. ಇನ್ನು ದುನಿಯಾ ವಿಜಯ್ ಅವರು ಜೈಲಿಗೆ ಹೋಗಿರುವ ವಿಷಯ ತಿಳಿದ ಕೂಡಲೇ ದುನಿಯಾ ವಿಜಯ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜಾಪುರ ಮತ್ತು ಗದಗ ಗುಲ್ಬರ್ಗ ದಲ್ಲಿ ದುನಿಯಾ ವಿಜಯ್ ಬೇಗ ಗುಣಮುಖರಾಗಲೆಂದು ದುನಿಯಾ ವಿಜಯ್ ವಿಶೇಷ ಪೂಜೆ ಸಲ್ಲಿಸಿದ್ದಾರೆ‌. ಅಷ್ಟೇ ಅಲ್ಲದೇ ದುನಿಯಾ ವಿಜಯ್ ಈ ಹಿಂದೆ ಅದೆಷ್ಟೋ ಜನಸಾಮಾನ್ಯರಿಗೆ ನೆರವು ನೀಡಿದ್ದಾರೆ. ಈಗ ದುನಿಯಾ ವಿಜಯ್ ಅವರಿಗೆ ಸಮಯ ಸಂದರ್ಭ ಸರಿ ಇಲ್ಲದಿರಬಹುದು.ಆದರೆ ನಾವೆಲ್ಲ ದುನಿಯಾ ವಿಜಯ್ ಜೊತೆ ಸದಾ ಕಾಲ ನಿಲ್ಲುತ್ತೇವೆ ಎನ್ನುತ್ತಿದ್ದಾರೆ.ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಅವರು‌ ಸಹ ದುನಿಯಾ ವಿಜಯ್ ಅವರ ಬೆಂಬಲಕ್ಕೆ ನಿಂತಿದ್ದಾರೆ.ರವಿ ಶ್ರೀವತ್ಸ  ಅವರು ದುನಿಯಾ ವಿಜಯ್ ಅವರಿಗೆ ಅಂದು ಸಹ ನಿನ್ನ ಜೊತೆ ನಾನಿದ್ದೆ ಈಗಲೂ ಸಹ ನಿನ್ನ ಜೊತೆ ನಾನಿರುತ್ತೇನೆ ಸಮಯ ಸಂದರ್ಭಗಳು ಕೆಲವು ಬಾರಿ ಈ ಪರಿಸ್ಥಿತಿ ತಂದೊಡ್ಡುತ್ತವೆ ಎಂದು ದುನಿಯಾ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here