ಜೈಲಿನಿಂದ ಹೊರಬಂದ ದುನಿಯಾ ವಿಜಯ್ ಅವರು ಹೇಳಿ ಕಾರಿನಲ್ಲಿ ಪತ್ನಿ ಕೀರ್ತಿಗೌಡ ಜತೆ ಗಾಳಿ ಆಂಜನೇಯಸ್ವಾಮಿ ದೇಗುಲ ಮತ್ತು ದುರ್ಗಾಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಹೊಸಕೆರೆಹಳ್ಳಿಯಲ್ಲಿರುವ ನಿವಾಸಕ್ಕೆ ಆಗಮಿಸಿದರು.ದುನಿಯಾ ವಿಜಯ್ ಆಗಮನದ ಬಗ್ಗೆ ತಿಳಿದಿದ್ದ ಅಭಿಮಾನಿಗಳು ಸಂಭ್ರಮಾಚರಣೆಗೆ ಮೊದಲೇ ಸಿದ್ಧತೆ ನಡೆಸಿದ್ದರು. ಸಾವಿರಾರು ಸಂಖ್ಯೆಯ ಅಭಿಮಾನಿಗಳು ದುನಿಯಾ ವಿಜಯ್ ಅವರನ್ನು ನೋಡಲು ಮುಗಿಬಿದ್ದರು. ಜಾಮೀನು ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮನೆ ಮುಂದೆ ಹೆಚ್ಚಿನ ಜನಸಂದಣಿ ಮತ್ತು ನೂಕುನುಗ್ಗಲಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.ನೆರದಿದ್ದ ಅಭಿಮಾನಿಗಳಿಗೆ ದುನಿಯಾವ ವಿಜಯ್ ಕೃತಜ್ಞತೆ ಸಲ್ಲಿಸಿದರು. ನಂತರ ಮನೆಯ ಬಳಿ‌ ಬಂದ ವಿಜಯ್ ಅವರಿಗೆ ಪ್ರೀತಿಯ ತಂದೆ ತಾಯಿಯಿಂದ ಸ್ವಾಗತ ಸಿಕ್ಕಿತು.ದುನಿಯಾ ವಿಜಯತ ಅವರ ಅಮ್ಮ ವಿಜಯ್ ಅವರಿಗೆ ಆರತಿ ಎತ್ತಿ ಬರಮಾಡಿಕೊಂಡರು.ಈ ವೇಳೆ ಅಮ್ಮ ಮಗ ಭಾವುಕರಾದರು. ನಂತರ ಮಾಧ್ಯಮಗಳ ಜೊತೆ
ಮಾತನಾಡಿ, ನನ್ನ, ಕಿಟ್ಟಿ ನಡುವೆ ಯಾವುದೇ ವೈಮನಸ್ಸು ಇಲ್ಲ.

ಮಾರುತಿ ಗೌಡ ನನ್ನ ಮಗ ಸಾಮ್ರಾಟ್ ತಲೆಗೆ ಹೊಡೆದ, ಎಲ್ಲರೂ ಮಾರುತಿ ಗೌಡನಿಗೆ ಹೊಡೆಯುತ್ತಿದ್ದರು. ಆ ವೇಳೆ ನಾನೇ ಬಿಡಿಸಿದೆ. ಆದರೆ, 25 ಹೊಲಿಗೆ ಹಾಕುವ ಥರ ಹೊಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.ರೇಂಜ್ ರೋವರ್ ಕಾರಿನಲ್ಲಿ ಜಾಕ್ ರಾಡ್ ಇರುವುದಿಲ್ಲ. ಅಪಹರಣ ಮಾಡಿದ್ದರೆ ಎಲ್ಲಾದರೂ ಓಡಿ ಹೋಗುತ್ತಾರೆ. ಆದರೆ, ನಾನು ಪೊಲೀಸ್ ಠಾಣೆಗೆ ಹೋದೆ. ಈ ವೇಳೆ ಕಿಟ್ಟಿ ನನಗೆ ಡಿಚ್ಚಿ ಹೊಡೆದ ಎಂದು ತಿಳಿಸಿದರು.ನನಗೆ ಜಾಮೀನು ನೀಡಿದ ಮ್ಯಾಜಿಸ್ಟ್ರೇಟ್​ ಪಾದಕ್ಕೆ ನನ್ನ ನಮಸ್ಕಾರ. ಅವರು ನನಗೆ ಮರುಜೀವ ಕೊಟ್ಟ ದೇವರು.

ನಾನೇನೂ ತಪ್ಪು ಮಾಡಿಲ್ಲ. ನನಗೆ ಯಾವುದೇ ದ್ವೇಷ ಇಲ್ಲ. ನಾನು ರೌಡಿ ಶೀಟರ್​ ಅಲ್ಲ. ನಾನು ಯಾರ ತಂಟೆಗೂ ಹೋದವನಲ್ಲ. ಕಾಲ ಬಂದಾಗ ನಾನು ಉತ್ತರ ಕೊಡುತ್ತೇನೆ. ಕಾಣದ ಕೈಗಳು ಒಂದಲ್ಲಾ ಒಂದು ದಿನ ಹೊರಗೆ ಬರಲೇಬೇಕು. ಯಾರು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತು. ಪಾನಿಪುರಿ ಕಿಟ್ಟಿ ನನಗೆ ಚೆನ್ನಾಗಿ ಗೊತ್ತು. ಇದರಲ್ಲಿ ಆತನದ್ದೂ ತಪ್ಪೇನಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ಇದೇ ಪತ್ನಿ ವೇಳೆ ಕೀರ್ತಿ ಗೌಡ ಅವರ ಬಗ್ಗೆ ಮಾತಾಡಿದ ದುನಿಯಾ ವಿಜಯ್ ಅವರು ಕೀರ್ತಿ ಮದುವೆಗೆ ಸಾಕ್ಷಿ
ನಾನು ಕೀರ್ತಿಯನ್ನು ಮಾನಸಿಕವಾಗಿ ಮದುವೆಯಾಗಿದ್ದೇವೆ. ಪ್ರೀತಿ ಎಂಬುವುದು ಹೃದಯದಲ್ಲಿ ಹುಟ್ಟುತ್ತೆ. ಅದು ಪ್ರಾಮಾಣಿಕ ಪ್ರೀತಿ. ನಾನು ಮತ್ತು ಕೀರ್ತಿ ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದರು. ತಮ್ಮ ಮಕ್ಕಳ ಕುರಿತು ಮಾತನಾಡಿದ ವಿಜಿ, ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಅವರಿಗೆ ಇನ್ನೂ ಚಿಕ್ಕ ವಯಸ್ಸು. ನಮ್ಮ ಜಗಳದಲ್ಲಿ ಮಕ್ಕಳ ತರಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here