ದುನಿಯಾ ವಿಜಯ್ ಅವರ ಪುತ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ.ಇದೇ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶ ಮಾಡುತ್ತಿರುವ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ಕುಸ್ತಿ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸುವ ಬಗ್ಗೆ ಮತ್ತು ಕುಸ್ತಿ ಸಿನಿಮಾಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿರುವ ಬಗ್ಗೆ ಸಹ ಓದಿದ್ದೀರ.

ಈಗ ಹೊಸ ವಿಷಯ ಏನಪ್ಪಾ ಅಂದ್ರೆ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಅಭಿನಯದ ಮೊದಲ ಸಿನಿಮಾ ಕುಸ್ತಿ ಚಿತ್ರದ ಸ್ಪೆಷಲ್ ಟೀಸರ್ ಇಂದು ರಿಲೀಸ್ ಆಗಿದೆ.ಇಂದು ಸಾಮ್ರಾಟ್ ಅವರ ಜನ್ಮದಿನ ಇರುವುದರಿಂದ ಟೀಸರ್ ಮೂಲಕ ದುನಿಯಾ ವಿಜಯ್ ಅವರು ಮಗನಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ‌.ಕುಸ್ತಿ ಸಿನಿಮಾದ ಟೀಸರ್ ತುಂಬಾ ಇಂಟ್ರಸ್ಟಿಂಗ್ ಆಗಿದ್ದು ಸಾಮ್ರಾಟ್ ಅಪ್ಪನನ್ನು ಮೀರಿಸುವ ಹಾಗೆ ಕುಸ್ತಿ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಖಡಕ್ ಆಗಿ ಡೈಲಾಗ್ ಸಹ ಹೇಳಿರುವ ಸಾಮ್ರಾಟ್ ಕನ್ನಡ ಚಿತ್ರರಂಗಕ್ಕೆ ಮುಂದಿನ ಸ್ಟಾರ್ ಆಗುವ ಎಲ್ಲ ಸೂಚನೆಗಳು ಟೀಸರ್ ಮೂಲಕವೇ ಸಿಕ್ಕಿದೆ. ಸಾಕಷ್ಟು ಪರಿಶ್ರಮ ಮತ್ತು ಶ್ರದ್ಧೆಯಿಂದ ಸಾಮ್ರಾಟ್ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಕುಸ್ತಿ ಸಿನಿಮಾದ ಟೀಸರ್ ನಲ್ಲಿ ಕಾಣಿಸುತ್ತಿದ್ದು ಟೀಸರ್ ಮೂಲಕವೇ ಕುಸ್ತಿ ಸಿನಿಮಾದ ಮೇಲೆ ನಿರೀಕ್ಷೆ ಸಹ ಹೆಚ್ಚಾಗಿದೆ.

ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿರುವ ಕುಸ್ತಿ ಸಿನಿಮಾದ ಮೇಲೆ ಸದ್ಯ ಸ್ಯಾಂಡಲ್ ವುಡ್ ಕಣ್ಣು ಬಿದ್ದಿದೆ.ದುನಿಯಾ ವಿಜಯ್ ಮತ್ತು ಸಾಮ್ರಾಟ್ ಜೊತೆ ಕುಸ್ತಿ ಸಿನಿಮಾದಲ್ಲಿ ಒಂದು ಕಾಲದ ಜನಪ್ರಿಯ ನಟಿ ವಿಜಯಲಕ್ಷ್ಮಿ ಸಹ ನಟಿಸುತ್ತಿರುವುದು ಕುಸ್ತಿ ಚಿತ್ರದ ಮತ್ತೊಂದು ವಿಶೇಷವಾಗಿದೆ‌.ಒಟ್ಟಿನಲ್ಲಿ ಟೀಸರ್ ಮೂಲಕವೇ ಕುಸ್ತಿ ಸಿನಿಮಾ ಮತ್ತು ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಈಗ ಸದ್ದು ಮಾಡುತ್ತಿದ್ದಾರೆ.ಕುಸ್ತಿ ಸಿನಿಮಾದ ಟೀಸರ್ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here