ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಅಭಿನಯದ ಕುಸ್ತಿ ಚಿತ್ರದ ಟೀಸರ್ ರಿಲೀಸ್ ಆಗಿ ಸೌಂಡ್ ಮಾಡುತ್ತಿದ್ದಂತೇ ಟೀಸರ್ ಸೌಂಡ್ ಜೊತೆಗೆ ಕಾಂಟ್ರವರ್ಸಿ ಸಹ ಹೆಚ್ಚಾಗಿ ಸೌಂಡ್ ಮಾಡುತ್ತಿದೆ . ಸಿನಿಮಾದ ಹೆಸರು ಹೇಳಿಕೇಳಿ ಕುಸ್ತಿ ಹೀಗಿರುವಾಗ ಹೆಸರಿಗೆ ತಕ್ಕಂತೆ ಕುಸ್ತಿ ಟೀಸರ್ ನಲ್ಲಿ ಕುಸ್ತಿಗೆ ಸಂಬಂಧಿಸಿದ ಡೈಲಾಗ್ ಇದೆ.ಇನ್ನು ಇದೇ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಜಬರ್ದಸ್ತ್ ಡೈಲಾಗ್ ಡೆಲಿವರಿ ಗೆ ಸ್ಯಾಂಡಲ್ ವುಡ್ ಫಿದಾ ಆಗಿದೆ.

ಆದರೆ ಅತ್ತ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ದುನಿಯಾ ವಿಜಯ್ ಪುತ್ರನ ಈ ಟೀಸರ್ ನೋಡಿ ಮುನಿಸಿಕೊಂಡಿದ್ದಾರೆ.ಸುದೀಪ್ ಅಭಿಮಾನಿಗಳು ಕುಸ್ತಿ ಟೀಸರ್ ನೋಡಿ ಮುನಿಸಿಕೊಳ್ಳಲು ಕಾರಣ ಕುಸ್ತಿಯ ಟೀಸರ್ ನಲ್ಲಿ ಮರಿಚಿರತೆ ಸಾಮ್ರಾಟ್ ಹೇಳುವ ಡೈಲಾಗ್.ಅಷ್ಟಕ್ಕೂ ಸಾಮ್ರಾಟ್ ಹೇಳಿರುವ ಡೈಲಾಗ್ ಹೀಗಿದೆ. “ಲೋ ನಿನ್ನಂತ ಎಷ್ಟೋ ಪೈಲ್ವಾನ್ ಗಳಿಗೆ ಉಸ್ತಾದ್ ಕಣೋ ನಮ್ಮಪ್ಪ” ಈ ಒಂದು ಡೈಲಾಗ್ ಸುದೀಪ್ ಅಭಿಮಾನಿ ವಲಯವನ್ನು ರೊಚ್ಚಿಗೆಬ್ಬಿಸಿದೆ‌.ಆದರೆ ಈ ಡೈಲಾಗ್ ಉದ್ದೇಶ ಪೂರ್ವಕವಾದದ್ದಲ್ಲ ಇದು ಕುಸ್ತಿಗೆ ಸಂಬಂಧಿಸಿದ ಚಿತ್ರವಾದ್ದರಿಂದ ಪೈಲ್ವಾನ್ ಉಸ್ತಾದ್ ಅನ್ನುವ ಡೈಲಾಗ್ ಕಾಮನ್.ಈ ಡೈಲಾಗ್ ಕಾಂಟ್ರವರ್ಸಿ ಬಗ್ಗೆ ಸ್ವತಃ ಸುದೀಪ್ ಮಾತಾನಾಡಿದ್ದಾರೆ.ಸುದೀಪ್ ಹೇಳುವ ಪ್ರಕಾರ ಇದು ಸ್ವತಃ ಸುದೀಪ್ ಅವರವರೆಗೆ ತಲುಪಿದೆ.. ಹೀಗಾಗೆ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ, ಪೈಲ್ವಾನ್​ಗೆ ಪೈಲ್ವಾನ್​ ಅಷ್ಟೇ, ಆ ಡೈಲಾಗಿಗೂ ನನ್ನ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಈ ಅನಗತ್ಯ ಗಾಸಿಪ್​ಗಳನ್ನು ಇಲ್ಲಿಗೆ ನಿಲ್ಲಿಸಿ. ನನ್ನ ಸಹನಟ ದುನಿಯಾ ವಿಜಿಯ ಕುಸ್ತಿ ಟೀಸರ್​ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಹಾಗೆಯೇ, ವಿಜಿಯ ಕಟ್ಟುಮಸ್ತು ದೇಹಕ್ಕೆ ನಾನು ಯಾವ ರೀತಿಯಿಂದಲೂ ಸಮನಲ್ಲ‘ ಅಂತಾ ವಿವಾದಕ್ಕೆ ಫುಲ್ ಸ್ಟಪ್ ಇಟ್ಟಿದ್ದಾರೆ ಸುದೀಪ್.

ಇತ್ತ ದುನಿಯಾ ವಿಜಯ್ ಸಹ ತನ್ನ ಮಗನ ಕುಸ್ತಿ ಚಿತ್ರದಲ್ಲಿ ಯಾರ ಮೇಲೂ ನಾವು ಸಂಭಾಷಣೆ ಅಸ್ತ್ರ ಬಳಸಿಲ್ಲ ಇದೆಲ್ಲ ಸಿನಿಮಾದ ಡೈಲಾಗ್ ಮಾತ್ರ.ಪರಸ್ಪರ ನಿಂದಿಸುವುದನ್ನು ಅಭಿಮಾನಿಗಳ ಬಿಡಬೇಕು ಎಂದು ಮನವಿ ಮಾಡಿದ್ದಾರೆ.ಆದರೆ ಸುದೀಪ್ ಅಭಿನಾನಿಗಳು ಮಾತ್ರ ಇನ್ನೂ ಸಮಾಧಾನ ಆಗಿಲ್ಲ.ಏನೇ ಆದರೂ ಇಷ್ಟು ದಿನ ದೊಡ್ಡ ದೊಡ್ಡ ಸ್ಟಾರ್ ಗಳು ಕೌಂಟರ್ ಡೈಲಾಗ್ ಹೊಡೆಯೋದು ಸಹಜವಾಗಿತ್ತು.ಇದೀಗ ದುನಿಯಾ ವಿಜಯ್ ಪುತ್ರ ಕುಸ್ತಿಯಲ್ಲಿ ಹೊಡೆದಿರುವ ಕೌಂಟರ್ ಡೈಲಾಗ್ ಗೆ ಸ್ಯಾಂಡಲ್ ವುಡ್ ಅಭಿಮಾನಿಗಳು ಕುಸ್ತಿ ಗಾಗಿ ಕಾಯುವಂತೆ ಮಾಡಿದೆ‌.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here