ಅಣ್ಣಾ ನೀವು ಮಾಡಿದ್ದೇ ಸರಿ ,ಅಣ್ಣಾ ನೀನು ಸೂಪರ್ ,ಹೀಗೆ ಹೇಳಿ‌ ಹೇಳಿ ಎಲ್ಲರೂ ಇಂದು ವಿಜಯ್ ಅವರನ್ನು ಆರೋಪಿಯಾಗಿ ಇಂದು ಈ ಸ್ಥಿತಿಗೆ ಬಂದು ನಿಂತಿದ್ದಾರೆ.ಅವರ ಇತ್ತೀಚಿನ ಗೆಳೆಯರು ಸರಿ ಇಲ್ಲ , ಆ ಕೀರ್ತಿ ಗೌಡ ಕೂಡ ಸರಿ ಇಲ್ಲ ಇವರೆಲ್ಲರ ಸಹವಾಸ ಇಂದು ದುನಿಯಾ ವಿಜಯ್ ದಾರಿ ತಪ್ಪಲು ಪ್ರಮುಖ ಕಾರಣ ಎಂದು ದುನಿಯಾ ವಿಜಯ್ ಮೊದಲ ಪತ್ನಿ‌ ನಾಗರತ್ನ ತಿಳಿಸಿದ್ದಾರೆ‌. ಪಾನಿಪುರಿ ಕಿಟ್ಟಿ  ವಿಜಯ್ ಜೊತೆ ತುಂಬಾ ಚೆನ್ನಾಗೆ ಇದ್ದರು. ಪಾನಿಪುರಿ ಕಿಟ್ಟಿ ಅವರ ಮನೆಯಿಂದ ಊಟ ತಂದು ವಿಜಯ್ ಗೆ ಕೊಡುತ್ತಿದ್ದರು. ನನ್ನ ಗಂಡನ ಜೊತೆ ತುಂಬಾ ಚೆನ್ನಾಗಿದ್ದರು. ನಮ್ಮ ಮನೆಗೂ ಬಂದು ಹೋಗುತ್ತಿದ್ದರು. ಯಾಕೆ ಗಲಾಟೆ ಆಯಿತು ಅನ್ನೋದು ಗೊತ್ತಿಲ್ಲ’ ಎಂದಿದ್ದಾರೆ ನಾಗರತ್ನ.

ವಿಜಯ್ ಗೆ ಬುದ್ಧಿ ಹೇಳೋರು ಯಾರು ಇಲ್ಲ. ಕಳೆದ ಎರಡು ವರ್ಷದಿಂದ ಜೈಲು, ಪೊಲೀಸ್ ಠಾಣೆಗೆ ಹೋಗುತ್ತಲೇ ಇದ್ದಾರೆ. ನಾನು ಬುದ್ಧಿ ಹೇಳೋಕೆ ಹೋದೆ, ನನ್ನನ್ನ ದೂರ ಮಾಡಿದರು.ನನ್ನಿಂದ ದೂರ ಉಳಿದಿದ್ದಾರೆ ‌.ದೂರ ಉಳಿದ ನಂತರ ದುನಿಯಾ ವಿಜಯ್ ವರ್ತನೆ ಬದಲಾಗಿದೆ. ಈಗ ದುಡ್ಡಿಗಾಗಿ ಬಂದ ಎರಡನೇ ಹೆಂಡತಿ ಜೊತೆ ಇದ್ದಾರೆ. ಅವರೂ ಸ್ವಲ್ಪ ದಿನ ಇದ್ದು, ಆಮೇಲೆ ಹೋಗುತ್ತಾಳೆ. ಅವರೆಲ್ಲ ದುಡ್ಡಿಗೆ ಬರೋರು. ಈಗ ಇವರು ಜೈಲಿಗೆ ಹೋಗಿದ್ದಾರೆ. ನನ್ನ ಮಕ್ಕಳ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯ್ ತಂದೆ ಅವರೇ ನನ್ನ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನನಗೆ ಆಸ್ತಿ ಕೊಟ್ಟಿದೇವೆ ಅಂತೆಲ್ಲ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರೇ ಹಾದಿ ತಪ್ಪಿಸುತ್ತಿದ್ದಾರೆ. ನಿನ್ನೆ ವಿಜಯ್ ಗಲಾಟೆ ವಿಚಾರ ಟಿವಿಯಲ್ಲಿ ನೋಡುತ್ತಿದೆ.ಆಗ ಮಗಾ ಸಾಮ್ರಾಟ್ ಕೂಡಾ ವಿಜಿ ಜೊತೆ ಇದ್ದ. ಅದಕ್ಕೆ ಗಾಬರಿಯಾಗಿ ಕೀರ್ತಿ ಗೌಡ ಮನೆಗೆ ಹೋಗಿ, ಮಗನ ಆರೋಗ್ಯ ವಿಚಾರಿಸಲು ಪ್ರಯತ್ನಿಸಿದೆ. ಯಾಕೆ ನನ್ನ ಮಗನನ್ನ ಅಷ್ಟೋತ್ತಿಗೆ ಕಳುಹಿಸಿದಿರಿ ಎಂದು ಕೇಳಿದೆ. ನಂತರ ಮಾತಿಗೆ ಮಾತು ಬೆಳೆದು ಗಲಾಟೆ ಆಯಿತು, ಹೊಡೆದಾಟ ಆಯಿತು. ಆಗಲೂ ನನ್ನ ಅತ್ತೆ-ಮಾವ ಕೀರ್ತಿಗೆ ಬೆಂಬಲಿಸಿದರು. ಆಮೆಲೆ ಪೊಲೀಸ್ ಠಾಣೆಗೆ ದೂರು ನೀಡಿದೆ’ ಎಂದು ನಾಗರತ್ನ ವಿವರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here