ಹಾಲಿವುಡ್‌ನ ಸೂಪರ್‌ಸ್ಟಾರ್‌ ಮತ್ತು WWE ಮಾಜಿ ಚಾಂಪಿಯನ್ ಆಗಿರುವ ‘ದಿ ರಾಕ್’ ಖ್ಯಾತಿಯ ಡ್ವೇನ್ ಜಾನ್ಸನ್‌ ಸಿನಿಮಾ ಜೊತೆಗೆ ಈಗ ಉದ್ಯಮ ಕ್ಷೇತ್ರಕ್ಕೂ ಕೂಡಾ ಪ್ರವೇಶ ಮಾಡಿದ್ದಾರೆ. ಅವರು ಅಮೆರಿಕಾ ಮೂಲದ ಒಂದು ಐಸ್‌ ಕ್ರೀಂ ಕಂಪನಿಯಾಗಿರುವ ಸಾಲ್ಟ್‌ ಮತ್ತು ಸ್ಟ್ರಾದಲ್ಲಿ ಬಂಡವಾಳವನ್ನು ಹೂಡಿದ್ದು ಈ ಮೂಲಕ ತಮ್ಮ ಹೊಸ ಬಿಜಿನೆಸ್ ನ ಶುಭಾರಂಭವನ್ನು ಮಾಡಿದ್ದಾರೆ. ರಾಕ್ ನಟಿಸಿರುವ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸಿನಿಮಾ ಜುಮಾಂಜಿ: ದಿ ನೆಕ್ಸ್ಟ್ ಲೆವಲ್ ಈಗಾಗಲೇ ಭರ್ಜರಿ ಯಶಸ್ಸನ್ನು ಪಡೆದಿದ್ದು ಆ ಖುಷಿಯಲ್ಲಿದ್ದಾರೆ ರಾಕ್. ಅದರೊಟ್ಟಿಗೆ ಈಗ ಹೊಸ ವ್ಯವಹಾರದ ಖುಷಿ ಕೂಡಾ ಸೇರಿದೆ.

ರಾಕ್ ಅವರ ಈ ಹೊಸ ಬ್ಯುಸಿನೆಸ್ ನಲ್ಲಿ ಅವರು ಒಬ್ಬರೇ ಇಲ್ಲ. ಅವರ ಜೊತೆಗೆ ಇನ್ನೊಬ್ಬರೂ ಕೂಡಾ ಅವರೊಟ್ಟಿಗೆ ಇದ್ದಾರೆ. ಅಮೆರಿಕಾದ ಪೋರ್ಟ್‌ಲ್ಯಾಂಡ್ ಮೂಲದ ಐಸ್‌ ಕ್ರೀಂ ಕಂಪನಿ ಸಾಲ್ಟ್‌ ಮತ್ತು ಸ್ಟ್ರಾದಲ್ಲಿ ಹೂಡಿಕೆ ಮಾಡಿರುವ ರಾಕ್‌ಗೆ ಬಿಜಿನೆಸ್ ಪಾರ್ಟನರ್ ಅವರ ಜೊತೆಯಲ್ಲಿ ಇರುವುದು ಅವರ ಮಾಜಿ ಪತ್ನಿ ಹಾಗೂ ಚಿತ್ರ ನಿರ್ಮಾಪಕಿಯೂ ಆಗಿರುವ ಡೇನಿ ಗ್ರೇಸಿಯಾ ಅವರು. ಡ್ವೇನ್ ಜಾನ್ಸನ್(ರಾಕ್) ಹಾಗೂ ಡೇನಿ ಗ್ರೇಸಿಯಾ ಇಬ್ಬರೂ 2007ರಲ್ಲಿ ವಿವಾಹವಾಗಿದ್ದರಾದರೂ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದ 2008ರಲ್ಲಿ ಡಿವೋರ್ಸ್ ಮೂಲಕ ಬೇರೆಯಾಗಿದ್ದರು.

ಡಿವೋರ್ಸ್ ನಿಂದ ಬೇರೆಯಾದರೂ ಕೂಡಾ ಅವರ ಮಧ್ಯೆ ಉತ್ತಮವಾದ ಸ್ನೇಹ ಬಾಂಧವ್ಯವಿದ್ದು, ಅದು ಈಗಲೂ ಮುಂದುವರೆದಿದೆ. ಅಲ್ಲದೆ ಇವರು 2011ರಲ್ಲಿ ಸ್ಥಾಪನೆಗೊಂಡ ಸಾಲ್ಟ್ ಮತ್ತು ಸ್ಟ್ರಾ ಕಂಪನಿಯ ಐಸ್‌ಕ್ರೀಂ ಅನ್ನು ಸಾಕಷ್ಟು ಮೆಚ್ಚಿದ್ದು, ಇತ್ತೀಚೆಗಷ್ಟೇ ಕಂಪನಿಯು ಹೊರಡಿಸಿರುವ ಪ್ರಕಟಣೆಯ ಅನ್ವಯ ಈ ಇಬ್ಬರೂ ಅಂದರೆ ಡ್ವೇನ್ ಜಾನ್ಸನ್ ಹಾಗೂ ಡೇನಿ ಗ್ರೇಸಿಯಾ ಈ ಐಸಿ ಕ್ರೀಂ ಉದ್ಯಮದಲ್ಲಿ ಹಣ ತೊಡಗಿಸಿದ್ದಾರೆ. ಅಲ್ಲದೆ ರಾಕ್
2019 ರಲ್ಲಿ ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಹಾಲಿವುಡ್‌ ನಟರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಕೂಡಾ ಡ್ವೇನ್ ಜಾನ್ಸನ್ ಅವರೇ ಆಗಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here