ರಾಜ್ಯ ರಾಜಕೀಯ ಹೈ ಡ್ರಾಮಾದ ಭಾಗವಾಗಿ ಕಾಂಗ್ರೆಸ್ ಶಾಸಕರನ್ನೆಲ್ಲಾ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿದ್ದು ನಮಗೆಲ್ಲಾ ತಿಳಿದಿದೆ. ರೆಸಾರ್ಟ್ ನಲ್ಲಿ ಈಗ ಶಾಸಕರ ಪರಿಸ್ಥಿತಿ ಅಕ್ಷರಶಃ ಗೃಹಬಂಧನದಂತೆ ಇದ್ದು, ಗೆದ್ದವರೆಲ್ಲಾ ಈಗ ಖೈದಿಗಳಂತೆ ಇದ್ದು, ಹೊರಬರಲು ಅವಕಾಶ ನೀಡಲಾಗುತ್ತಿಲ್ಲ.

ಹೀಗಿರಬೇಕಾದರೆ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಇದ್ದಕ್ಕಿದ್ದಂತೆ ರೆಸಾರ್ಟ್ ನಿಂದ ಹೊರಬಂದಿದ್ದಾರೆ. ಆದರೆ ಅವರು ಹೊರಬರುವ ಪ್ರಕ್ರಿಯೆಯು ಕೂಡಾ ಒಂದು ಡ್ರಾಮಾದ ರೀತಿಯಲ್ಲಿ ನಡೆಯುತ್ತಿದೆ.

ರಾಜಶೇಖರ್ ಪಾಟೀಲ್ ಹೊರಗೆ ಬರಲು ಪ್ರಯತ್ನಿಸಿದಾಗ ಅವರನ್ನು ಗೇಟ್ ಬಳಿಯೇ ತಡೆದ ಪೋಲೀಸರಿಗೂ, ಶಾಸಕರಿಗೂ ಸುಮಾರು ಹತ್ತು ನಿಮಿಷಗಳ ಮಾತಿನ ಚಕಮಕಿ ನಡೆದಿದೆ. ಶಾಸಕರು ತನ್ನ ಆರೋಗ್ಯ ಸರಿಯಿಲ್ಲ, ಆಸ್ಪತ್ರೆಗೆ ಹೋಗಲು ಹೊರಗೆ ಬಿಡಿ ಎಂದು ಕೇಳಿಕೊಂಡರು ಪೋಲೀಸರು ಅವರನ್ನು ಬಿಟ್ಟಿಲ್ಲ.

ಇದರಿಂದ ಶಾಸಕರು ಕೋಪಗೊಂಡರು. ‌
ನಂತರ ರೆಸಾರ್ಟ್ ಒಳಗಿಂದ ಕಾಂಗ್ರೆಸ್ ಶಾಸಕ ಡಿ.ಕೆ.ಸುರೇಶ್ ಫೋನ್ ಮಾಡಿ ಹೇಳಿದ ನಂತರ, ಹಾಗೂ ಪ್ರಿಯಾಂಕ‌ಖರ್ಗೆ ಅವರು ಹೊರಬಂದು ಪೋಲೀಸರಿಗೆ ಹೇಳಿದ ಮೇಲೆ ರಾಜಶೇಖರ ಪಾಟೀಲ್ ರನ್ನು ಹೊರಗೆ ಬಿಡಲಾಗಿದೆ.

ಒಟ್ಟಾರೆ ರೆಸಾರ್ಟ್ ನಿಂದ ಹೊರಬಂದ ರಾಜಶೇಖರ ಪಾಟೀಲರು ಮತ್ತೆ ಯಾವಾಗ ವಾಪಸಾಗುವರು, ಅಥವಾ ಬೇರೆ ಎಲ್ಲಾದರೂ ಹೋಗುವರೋ? ಎಂಬೆಲ್ಲಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ರಾಜಶೇಖರ ಪಾಟೀಲ್ ಹೊರಗೆ ಬಂದ ನಂತರ ರೆಸಾರ್ಟ್ ನ‌ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here