ಕಳೆದ ಒಂದು ವಾರದಿಂದಲೂ ಇಡಿ ವಿಚಾರಣೆಗೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪ್ರಕರಣಕ್ಕೊಂದು ಹೊಸ ಟ್ವಿಸ್ಟ್ ದೊರೆತಿದೆ. ಅದೇನೆಂದರೆ ದೆಹಲಿಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ್ದ 8.5 ಕೋಟಿ ರೂ. ಹಣ ನನ್ನದೇ ಎಂದು ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಸುನಿಲ್ ಶರ್ಮಾ. ಇಡಿ ವಿಚಾರಣೆಗೆ ಹಾಜರಾಗಿದ್ದ ಸುನೀಲ್ ಶರ್ಮಾ ಅವರು ಹಣ ನನ್ನದು ಎನ್ನುವುದರ ಜೊತೆಗೆ ಆ ಹಣಕ್ಕೆ ಈಗಾಗಲೇ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ ಎಂದು ಕೂಡಾ ಅವರು ಹೇಳಿದ್ದಾರೆ. ಇನ್ನು ಆಂಜನೇಯವರ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಡಿ.ಕೆ.ಶಿವಕುಮಾರ್ ಅವರ ಮುಂದೆ ನಾನು ಯಾವುದೇ ಹೇಳಿಕೆಯನ್ನು ನೀಡಲಾರೆ ಎಂದು ಹೇಳಿದ್ದಾರೆಂದು ಕೂಡಾ ತಿಳಿದು ಬಂದಿದೆ‌. ಅವರನ್ನು ಹೇಳಲಾಗುತ್ತಿದೆ ಎನ್ನಲಾಗಿರುವ ಕ್ರಾಸ್ ಪ್ರಶ್ನೆಗಳಿಗೆ ಗಾಬರಿಯಲ್ಲಿ ಏನೇನೋ‌ ಉತ್ತರ ಹೇಳುತ್ತಿದ್ದೇನೆಂದು, ಆದರೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಕೂಡಾ ಅವರು ಹೇಳಿದ್ದು, ಮುಖಾಮುಖಿಯಾಗಿಯೇ ಉತ್ತರ ನೀಡಬೇಕೆಂದು ಒತ್ತಡ ಹೇರುವುದು ಮಾಡಬಾರದು ಎಂದಿದ್ದಾರೆನ್ನಲಾಗಿದೆ‌. ತಾನು ಬಂದಿರುವುದು ವಿಚಾರಣೆಗೆ ಆದ ಕಾರಣ ಬಂಧನ ಮಾಡಲು ಸಾಧ್ಯವಿಲ್ಲ ಮತ್ತು ಅದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಬಂಧನ ಮಾಡಲ್ಲ ಎಂದು ನೀವೇ ಒಪ್ಪಿಕೊಂಡಿದ್ದೀರಿ ಎಂದಿದ್ದಾರೆನ್ನಲಾಗಿದೆ.

ಇಡಿ ಅಧಿಕಾರಿಗಳು ಡಿಕೆಶಿ ಅವರಿಗೆ ಶೇವಿಂಗ್ ಮಾಡಿಕೊಳ್ಳಲು ಕೂಡಾ ಅನುಮತಿ ನೀಡಿಲ್ಲ ಎನ್ನಲಾಗಿದೆ‌. ಅದಕ್ಕೆ ಅವಕಾಶ ನೀಡಬೇಕೆಂದು ಕೋರಿ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟಿಗೆ ಡಿಕೆಶಿ ಅರ್ಜಿಯನ್ನು ಕೂಡಾ ಸಲ್ಲಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ತಾನು ಉತ್ತರ ನೀಡಲು ತನಗೆ ಜೊತೆ ಪೆನ್ನು, ಪೇಪರ್ ಬೇಕಿದೆ ಎಂದು ಮನವಿ ಮಾಡಿದ್ದು, ಕೋರ್ಟ್ ಈ‌ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here