1. ಸಚಿವ ಸುರೇಶ್ ಕುಮಾರ್ ಅವರು ಇಂದು ಬೆಳಿಗ್ಗೆ ಮಾಡಿದ ಕಾರ್ಯವೊಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಗಳು ಕೂಡಾ ಹರಿದು ಬರುತ್ತಿದೆ. ಇಷ್ಟಕ್ಕೂ ಸಚಿವರು ಅಂತಹ ಯಾವ ಕೆಲಸ ಮಾಡಿದರು ಎಂದರೆ, ಅವರು ಪೌರ ಕಾರ್ಮಿಕರ ಅನುಪಸ್ಥಿತಿಯಲ್ಲಿ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿ ರಸ್ತೆಯನ್ನು ಸ್ವಚ್ಛ ಮಾಡುವ ಕೆಲಸವನ್ನು ಮಾಡಿದ್ದಾರೆ. ಸಚಿವರು ತಮ್ಮ ಮನೆಯ ಮುಂದಿನ ರಸ್ತೆಯ ಕಸ ಗುಡಿಸುವ ಪೌರ ಕಾರ್ಮಿಕರಾದ ಲಿಂಗಮ್ಮ ಎನ್ನುವವರಿಗೆ ಕಾಲಿಗೆ ಪಟ್ಟಾಗಿತ್ತು. ಆದ್ದರಿಂದ ಆಕೆ ಕಸ ಗುಡಿಸುವುದು ಸಾಧ್ಯವಿಲ್ಲದೆ ಗೈರು ಹಾಜರಾಗಿದ್ದರು.

ಆದ್ದರಿಂದ ಇಂದು ಲಿಂಗಮ್ಮನವರು ಕೆಲಸಕ್ಕೆ ಬರುವುದು ಅಸಾಧ್ಯ ಎಂಬುದನ್ನು ತಿಳಿದ ಸಚಿವರು ತಮ್ಮ ರಸ್ತೆಯಲ್ಲಿ ಕಸ ಇರೋದನ್ನು ಗಮನಿಸಿ ಅದನ್ನು ಸ್ವಚ್ಛ ಮಾಡಲು ತಮ್ಮ ಪತ್ನಿ ಜೊತೆ ಸೇರಿ ಕಸವನ್ನು ಗುಡಿಸಿದ್ದಾರೆ. ಈ ವಿಷಯವನ್ನು ಸಚಿವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೂಡಾ ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ
ಇಂದು ಬೆಳಿಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ‌ ಮನೆಯ‌ ಮುಂದಿನ ಅರ್ಧ ರಸ್ತೆಯನ್ನು ನನ್ನ‌ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ‌ ಲಾಭವೂ ಆಯಿತು ಎಂದು ಬರೆದಿದ್ದಾರೆ.

ಅಲ್ಲದೆ ನಮ್ಮ‌ ರಸ್ತೆಯ ಪೌರಕಾರ್ಮಿಕಿ‌ ಲಿಂಗಮ್ಮ‌ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದದ್ದು.‌ ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ. ನಾವೆಲ್ಲರೂ ಆಗಾಗ ಈ ಕೆಲಸ‌ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ ಎಂದು ಬರೆಯುವ ಮೂಲಕ ಸಮಾಜಕ್ಕೆ ಸ್ವಚ್ಛತಾ ಕಾರ್ಯದ ಬಗೆಗೆ ಒಂದು ಸಂದೇಶವನ್ನು ಕೂಡಾ ರವಾನಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here