ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಒಂದು ಆದೇಶವನ್ನು ನೀಡಿದೆ. ಅದೇನೆಂದರೆ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ಕುರಿತು ಮತದಾನ ಮುಕ್ತಾಯಗೊಳ್ಳುವ 48 ಗಂಟೆ ಮೊದಲೇ ಮಾಧ್ಯಮಗಳಲ್ಲಿ ಘೋಷಣೆ ಮಾಡಿಕೊಳ್ಳಬೇಕಾಗಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಈಗಾಗಲೇ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ಕುರಿತಾದ ವಿವರಗಳನ್ನು ಮೂರು ಮಾಧ್ಯಮಗಳಲ್ಲಿ ಘೋಷಣೆ ಮಾಡಬೇಕೆಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

 

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು ಈವರೆಗೆ ಬಹುತೇಕ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮುಂದೆ ಬಂದಿಲ್ಲ. ಆದ ಕಾರಣ ಮುಂದಿನ ಎರಡು ದಿನದಲ್ಲಿ ಅವರು ತಮ್ಮ ಕ್ರಿಮಿನಲ್ ಮೊಕದ್ದಮೆಗಳು ಬಗ್ಗೆ ಕಡ್ಡಾಯವಾಗಿ ಪ್ರಕಟಿಸಬೇಕು. ಯಾವ ಯಾವ ಅಭ್ಯರ್ಥಿಗಳ ವಿರುದ್ಧ ಮೊಕದ್ದಮೆಗಳು ಇವೆಯೋ ಅವರೆಲ್ಲ ಪ್ರಕರಣಗಳ ಬಗ್ಗೆ ಮೂರು ದಿನಪತ್ರಿಕೆ ಮತ್ತು ಮೂರು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಘೋಷಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗ ನಿರ್ದೇಶನವನ್ನು ನೀಡಿದೆ. ಅದು ಮತದಾನದ 48 ಗಂಟೆಯ ಮೊದಲು ಇದು ಪ್ರಕಟವಾಗಿರಬೇಕು. ಈ ಜವಾಬ್ದಾರಿ ಅಭ್ಯರ್ಥಿಗಳು ಹಾಗೂ ಅವರು ಪ್ರತಿನಿಧಿಸುವರಾಜಕೀಯ ಪಕ್ಷಗಳದ್ದಾಗಿರುತ್ತದೆ ಎಂದು ತಿಳಿಸಲಾಗಿದೆ.

ಒಂದು ವೇಳೆ ಚುನಾವಣಾ ಆಯೋಗ ನೀಡಿರುವ ಸೂಚನೆಯನ್ನು ಪಾಲಿಸದೆ ಹೋದಲ್ಲಿ ಅದನ್ನು ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸುವಲ್ಲಿ ವೈಫಲ್ಯ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ನಂತರ ಸಮರ್ಪಕವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದೆ. ಅಭ್ಯರ್ಥಿಗಳು ಬಾಕಿ ಉಳಿದಿರುವ ಪ್ರಕರಣಗಳು ಹಾಗೂ ಈಗಾಗಲೇ ಶಿಕ್ಷೆ ವಿಧಿಸಲ್ಪಟ್ಟಿರುವ ಪ್ರಕರಣಗಳ ವಿವರವನ್ನು ಸಹ ನೀಡಬೇಕಾಗಿದೆ. ಈ ಎಲ್ಲಾ ವಿವರಗಳನ್ನು ಅವರು ಚುನಾವಣಾ ಅಧಿಕಾರಿಯ ಮುಂದೆ ನೀಡಬೇಕೆಂದು ನಿರ್ದೇಶನವನ್ನು ಸಹಾ ನೀಡಲಾಗಿದೆ.

ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಪಾಲಿಸಿದಿರುವುದೇನಾದರೂ ಕಂಡು ಬಂದರೆ ಅಂತಹ ಅಭ್ಯರ್ಥಿಗಳ ನೋಂದಣಿಯನ್ನು ರದ್ದುಗೊಳಿಸುವ ಅಥವಾ ವಾಪಸ್‌ ಪಡೆಯುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ವಿವರಿಸಿದರು. ಮುದ್ರಣ ಮಾಧ್ಯಮಗಳಲ್ಲೇನಾದರೂ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಜಾಹೀರಾತುಗಳನ್ನು ನೀಡುವುದಾದರೆ ಮತದಾನ ದಿನದ 48 ಗಂಟೆಗಳ ಮೊದಲು ನೀಡಬೇಕು. ನಂತರದಲ್ಲಿ ಜಾಹೀರಾತು ನೀಡಬೇಕಾದರೆ ಅದಕ್ಕೆ ಚುನಾವಣಾ ಆಯೋಗದಿಂದ ರಾಜಕೀಯ ಜಾಹೀರಾತುಗಳ ಪೂರ್ವ ಪ್ರಮಾಣಪತ್ರ ಪಡೆದುಕೊಳ್ಳಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here