ಬಾರಿ ಲೋಕಸಭಾ ಚುನಾವಣೆಯ ಮತ ಜಾಗೃತಿಯನ್ನು ಮೂಡಿಸುವ ಕಾರ್ಯ ಕೂಡಾ ಬಹಳ ಜೋರಿನಿಂದ ನಡೆದಿತ್ತು. ರಾಜಕಾರಣಿಗಳು ಅಭ್ಯರ್ಥಿಗಳ ಪ್ರಚಾರ ಮಾಡಿದರೆ, ಸಮಾಜದಲ್ಲಿ ಗುರುತಿಸಲ್ಪಟ್ಟ ಕೆಲವು ಜನಪ್ರಿಯ ವ್ಯಕ್ತಿಗಳಿಂದ ಮತ ಜಾಗೃತಿಯ ಕಾರ್ಯಕ್ರಮವನ್ನು ಅಥವಾ ಅಭಿಯಾನವನ್ನು ಕೂಡಾ ಮಾಡಲಾಗಿತ್ತು. ಅದೇ ಅಭಿಯಾನದ ಭಾಗವಾಗಿ ಹಾವೇರಿ ಕ್ಷೇತ್ರದ ರಾಯಭಾರಿಯಾದವರಯ ಸರಿಗಮಪ ಖ್ಯಾತಿಯ ಜನಪದ ಗಾಯಕ, ಕುರಿಗಾಹಿ ಹನುಮಂತ ಲಮಾಣಿ ಇಂದು ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚಿಲ್ಲೂರುಬಡ್ನಿಯಲ್ಲಿ ಮತದಾನ ಮಾಡಿ ಹೊರಗೆ ಬಂದ ಅವರು , ಮಾದ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಮತದಾನ ಮಾಡಿ, ನಿಮ್ಮ ಹಕ್ಕು ಚಲಾವಣೆ ಮಾಡಿ, ನಿಮಗೆ ಬೇಕಾದಂತಹ ಸೂಕ್ತ ಜನಪ್ರತಿನಿಧಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಮತ್ತೊಮ್ಮೆ ಜನರಿಗೆ ಮತದಾನದ ಬಗ್ಗೆ , ಅದರ ಪ್ರಾಮುಖ್ಯತೆ ಬಗ್ಗೆ ಹೇಳಿದರು. ಅಲ್ಲದೆ ತಾವು ಮತ ಜಾಗೃತಿ ಮೂಡಿಸಿದ ಬಗ್ಗೆ, ಮತಗಾನ ಎಂದರೆ ಹಾಡಿನ ಮೂಲಕ ಜಾಗೃತಿ ಮೂಡಿಸಿದ ಒಂದು ಕಾರ್ಯಕ್ರಮದ ಬಗ್ಗೆ ಕೂಡಾ ಅವರು ಹೇಳಿದರು.

ಮತ ಜಾಗೃತಿ ಅಭಿಯಾನದ ರಾಯಭಾರಿಯಾಗಿದ್ದ ಹನುಮಂತಣ್ಣ, ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತಗಾನದಲ್ಲಿ ಮತವ ಹಾಕು ಮನುಜ ಹಾಡಿನ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ. ಅಲ್ಲದೆ ಮತಗಾನ ಕಾರ್ಯಕ್ರಮಕ್ಕೆ ಬಹಳಷ್ಟು ಸಂಖ್ಯೆಯಲ್ಲಿ ಜನ ಬಂದಿದ್ದನ್ನು ನೋಡಿ ಬಹಳ ಸಂತೋಷ ಆಯಿತು ಎಂದ ಅವರು, ಮನೆಯಲ್ಲಿ ಇಂದು ನಾನೇ ಮೊದಲು ಮತ ಹಾಕಿದ್ದು, ಉಳಿದವರು ಬರ್ತಾರೆ ಎಂದು ತಮ್ಮ ಮೊದಲ ಮತದಾನದ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here