ಭಾರತೀಯ ಅರಣ್ಯಾಧಿಕಾರಿ ಪ್ರವೀಣ್​ ಕಸ್ವಾನ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಒಂದು ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋ ಈಗಾಗಲೇ ಸಾಕಷ್ಟು ಜನರ ಗಮನವನ್ನು ಸೆಳೆದಿದ್ದು ಅನೇಕರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ‌ ಮತ್ತು ಈಗಾಗಲೇ ಈ ವಿಡಿಯೋವನ್ನು 31,000 ಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಇಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದಾದರೆ, ಹಳ್ಳದಲ್ಲಿ ಬಿದ್ದ ಮರಿಯಾನೆಯೊಂದನ್ನು ರಕ್ಷಿಸಲು ಜನರು ಸಹಾಯ ಮಾಡಿ ಮಾನವೀಯತೆಯನ್ನು ಮೆರೆದಿರುವ ವಿಡಿಯೋ ಇದಾಗಿದೆ‌. ಈ ಘಟನೆ ನಡೆದಿರುವುದು ಎಲ್ಲಿ ಎಂಬುದರ ಬಗ್ಗೆ ವಿವರ ಇಲ್ಲ.

ಆದರೆ ಪ್ರವೀಣ್ ಪಾಸ್ವಾನ್ ಅವರು ಮಾನವೀಯತೆ ಮೆರೆದಿರುವ ಈ ವಿಡಿಯೋ ಒಂದೊಳ್ಳೆ ಸಂದೇಶ ನೀಡುತ್ತದೆ ಎನ್ನುವ ಉದ್ದೇಶದಿಂದ,‌ ತಮಗೆ ವಾಟ್ಸಾಪ್ ನಲ್ಲಿ ಬಂದ ವಿಡಿಯೋ ವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮರಿಯಾನೆ ಒಂದು ಹಳ್ಳದಲ್ಲಿ ಬಿದ್ದು ತೊಂದರೆಗೆ ಸಿಲುಕಿಕೊಂಡಾಗ ಅದನ್ನು ರಕ್ಷಿಸಿಕೊಳ್ಳಲು ಆನೆಗಳು ಪ್ರಯತ್ನಿಸಿವೆ. ಆದರೆ ಅದು ಸಾಧ್ಯವಾಗದೇ ಇದ್ದಾಗ, ಮನುಷ್ಯರು ಬಂದು ಕಾಪಾಡಲಿ ಎಂದು ಆ ಸ್ಥಳದಿಂದ ಹೋಗಿವೆ.

ಅನಂತರ ಸ್ಥಳೀಯರು ಆನೆ ಮರಿ ಹಳ್ಳದಿಂದ ಹೊರ ಬರಲು ನೆರವು ನೀಡಿದ್ದಾರೆ. ಆನೆ ಮರಿ ಹೊರಗೆ ಬಂದ ಮೇಲೆ ಮರಿ ಸುರಕ್ಷಿತವಾಗಿ ಬಂದು ಹಿಂಡು ಸೇರಿದಾಗ, ಆ ಆನೆಯ ತಾಯಿ ಹತ್ತಿರದಲ್ಲೇ ನೀರಿನಲ್ಲಿ ನಿಂತಿದ್ದ ಅದು ಮರಿ ಬಂದಿದ್ದನ್ನು ನೋಡಿ ಸಂತಸ ಪಟ್ಟಿದೆ. ಮರಿ ರಕ್ಷಣೆ ಮಾಡಿದವರ ಕಡೆ ತಿರುಗಿ ನೋಡಿ ಸಂತೋಷದಿಂದ ಎರಡ್ಮೂರು ಬಾರಿ ಘೀಳಿಟ್ಟು ನಂತರ ಕಾಡಿನ ಕಡೆ ನಡೆದಿದೆ.‌ ನಿಜಕ್ಕೂ ಇದೊಂದು ಅಪರೂಪದ ಮಾನವೀಯತೆ ಹಾಗೂ ಪ್ರಾಣಿಗಳು ಮನುಷ್ಯನಿಗೆ ಕೃತಜ್ಞತೆ ಸಲ್ಲಿಸಿದ ವಿಡಿಯೋ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here