ಮನುಷ್ಯನಿಗೆ ಜೀವನದಲ್ಲಿ ಎಲ್ಲದಕ್ಕಿಂತ ಮುಖ್ಯವಾದುದು ಪ್ರಾಣ. ಅದಕ್ಕೆ ಬೆಲೆ ಕಟ್ಟುವುದು ಅಸಾಧ್ಯ. ತಂದೆ ತಾಯಿ ಜನ್ಮ ಕೊಟ್ಟು ದೇವರ ಸ್ಥಾನವನ್ನು ಪಡೆಯುತ್ತಾರೆ. ಕೆಲವೊಮ್ಮೆ ಅಪಾಯದಲ್ಲಿ ಸಿಕ್ಕು ಪ್ರಾಣಾಂತಕ ಸನ್ನಿವೇಶ ಎದುರಾದಾಗ ದೇವರ ರೂಪದಲ್ಲಿ ಕೆಲವರು ಬಂದು ಪ್ರಾಣವನ್ನು ಉಳಿಸಿ ನಮಗೆ ಮರು ಜನ್ಮ ನೀಡುತ್ತಾರೆ. ಅದಕ್ಕೆ ಪ್ರತ್ಯುಪಕಾರವಾಗಿ ಅಥವಾ ಆ ಸಹಾಯಕ್ಕಾಗಿ ನಾವು ಅವರಿಗೆ ಮರಳಿ ಏನು ನೀಡಿದರೂ ಅದೆಲ್ಲವೂ ನಮ್ಮ ಜೀವಕ್ಕಿಂತ, ಜೀವನಕ್ಕಿಂತ ಮೌಲ್ಯ ವಲ್ಲ. ಮರು ಜನ್ಮ ನೀಡಿದವರಿಗೆ ಜೀವನಪರ್ಯಂತ ಕೃತಜ್ಞತೆ ತೋರಿದರೆ ಸಾಕು.

ಅಸ್ಸಾಂ ನ ಮಿಸ್ಸಮರಿಯ ಹನ್ನೊಂದು ವರ್ಷದ ಬಾಲಕ ಉತ್ತಮ್ ತತಿ ಜುಲೈ 7 ರಂದು ಒಂದು ಮಾನವೀಯ ಕಾರ್ಯವನ್ನು ಮಾಡುವ ಮೂಲಕ ಸಾಧನೆ ಮೆರೆದಿರುವುದು ಮಾತ್ರವಲ್ಲದೆ ಎರಡು ಜೀವಗಳನ್ನು ಉಳಿಸಿದ್ದಾನೆ. ಅಸ್ಸಾಂನ ಸೋನಿತ್ ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನೆರಡು ಮಕ್ಕಳನ್ನು ಹಿಡಿದುಕೊಂಡು, ಸಣ್ಣ ನದಿಯೊಂದನ್ನು ದಾಟುವ ಪ್ರಯತ್ನ ಮಾಡುವ ಸಂದರ್ಭದಲ್ಲಿ, ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಆಗ ಮಹಿಳೆ ಹಾಗೂ ಆಕೆಯ ಮಕ್ಕಳು ನದಿ ದಾಟಲಾರದೆ ಪ್ರಾಣಾಂತಕ ಪರಿಸ್ಥಿತಿ ಎದುರಿಸಿದ್ದಾರೆ.

ಆಗ ಅಲ್ಲೇ ನದಿ ದಂಡೆಯಲ್ಲಿ ಕುಳಿತಿದ್ದ ಉತ್ತಮ್ ಕ್ಷಣ ಮಾತ್ರವೂ ತಡಮಾಡದೆ, ತಾನೊಬ್ಬ ಬಾಲಕ ಎನ್ನುವುದನ್ನು ಕೂಡಾ ಮರೆತು, ನೀರೊಳಗೆ ಧುಮುಕಿ ಈಜುತ್ತಾ ಹೋಗಿ ತಾಯಿ ಹಾಗೂ ಆಕೆಯ ಮಗುವೊಂದನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾನೆ.‌ ಆದರೆ ದುರಾದೃಷ್ಟವಶಾತ್ ಆಕೆಯ ಇನ್ನೊಂದು ಮಗು ಮುಳುಗಿ ಸಾವನ್ನಪ್ಪಿದೆ. ‌ಆದರೂ ಎರಡು ಜೀವಗಳನ್ನು ಸಕಾಲದಲ್ಲಿ , ದೈರ್ಯ ಮೆರೆದು ಬದುಕಿಸಿದ ಬಾಲಕನ ಸಾಧನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ಮಾಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here