ಕೊರೊನಾ ಕಳೆದ ಮಾರ್ಚ್, ಏಪ್ರಿಲ್‌ ತಿಂಗಳಿನಲ್ಲಿ ಯೂರೋಪ್ ಖಂಡವು ಕೊರೊನಾದಿಂದ ಕಂಗೆಟ್ಟು ಹೋಗಿತ್ತು. ಆದರೆ ಇದೀಗ ಅಲ್ಲಿನ ಪರಿಸ್ಥಿತಿ ನಿರೀಕ್ಷೆಯ ಮಟ್ಟವನ್ನು ಮೀರಿ ಸುಧಾರಣೆಯನ್ನು ಕಾಣುತ್ತಿದ್ದು, ದಿನಕಳೆದಂತೆ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಿದ್ದು, ಕೊರೊನಾ ಪರಿಣಾಮ ಕಡಿಮೆಯಾಗುತ್ತಾ ಬಂದಿದೆ. ಯಾವುದೇ ದೇಶದಲ್ಲೇ ಆಗಲಿ ಕೊರೊನಾ ತನ್ನ ಉಚ್ಛ್ರಾಯ ಮಟ್ಟವನ್ನು ತಲುಪಿದ ಅನಂತರ ಅದರ ತೀವ್ರತೆಯು ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದ ವಾದಕ್ಕೆ ಈಗ ಇಂಬು ದೊರತಂತೆ ಇದೆ ಯೂರೋಪ್ ನಲ್ಲಿ.‌

ಯೂರೋಪಿನಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಇದೀಗ ಭಾರತದ ಪಾಲಿಗೆ ಕೂಡಾ ಒಂದು ಹೊಸ ಆಶಾಕಿರಣವಾಗಿ ಕಾಣತೊಡಗಿದೆ. ಕೆಲವೇ ತಿಂಗಳ ಹಿಂದೆ ಯೂರೋಪಿನ ರಾಷ್ಟ್ರಗಳಾದ ಇಟಲಿ, ಬ್ರಿಟನ್, ಸ್ಪೇನ್, ಪ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ದಿನವೊಂದಕ್ಕೆ ಸಾವಿರಾರು ಸೋಂಕಿನ ಪ್ರಕರಣಗಳು ದಾಖಲಾಗುವುದು ಸಾಮಾನ್ಯ ಎನಿಸಿತ್ತು. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ‌ ಹೊರತಾಗಿಯೂ ಈ ದೇಶಗಳು ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಕಂಗಾಲಾಗಿದ್ದವು. ಅಲ್ಲಿ ಸಾವಿನ ಪ್ರಮಾಣ ಏರಿಕೆಯಿಂದ ಶವಗಳ ವಿಲೇವಾರಿ ಕೂಡಾ ಸವಾಲಾಗಿ ಪರಿಣಮಿಸಿತ್ತು.

ಆದರೆ ಇದೀಗ ಯೂರೋಪ್ ನಲ್ಲಿ ದಿನವೊಂದಕ್ಕೆ 500 ಪ್ರಕರಣಗಳು ದಾಖಲಾಗುವ ಮಟ್ಟಕ್ಕೆ ಕುಸಿದಿದ್ದು, ಸಾವಿನ ಪ್ರಮಾಣ ಕೂಡಾ ಕುಗ್ಗಿದೆ. ಪ್ರಸ್ತುತ ಭಾರತ, ಅಮೆರಿಕಾ ಮತ್ತು ಬ್ರೆಜಿಲ್ ಗಳಲ್ಲಿ ಮಾತ್ರ ಕೊರೊನಾ ತೀವ್ರ ಅಟ್ಟಹಾಸವನ್ನು ಮೆರೆಯುತ್ತಿದೆ ಎನ್ನಲಾಗಿದೆ‌. ಅಲ್ಲದೇ ಕೊರೊನಾ ಮೂಲ ಚೀನಾದಲ್ಲಿ ಕೂಡಾ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ಅಲ್ಲಿ ಜನಜೀವನ ಕೂಡಾ ಸಾಮಾನ್ಯವಾಗಿದೆ.‌ ಸ್ಪೇಟ್,ಇಟಲಿ, ಫ್ರಾನ್ಸ್ ಮತ್ತು ರಷ್ಯಾಗಳಲ್ಲಿ ಕೂಡಾ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here