ನಮ್ಮ ದೇಶದಲ್ಲಿರುವ ಅದೆಷ್ಟೋ ಜ್ವಲಂತ ಸಮಸ್ಯೆಗಳಲ್ಲಿ ಆಹಾರದ ಸಮಸ್ಯೆ ಕೂಡಾ ಒಂದು. ಇಂದಿಗೂ ದೇಶದಲ್ಲಿ ಅಸಂಖ್ಯಾತ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ನಮ್ಮಲಿರುವುದು ನಮ್ಮ ದುರಾದೃಷ್ಟ. ಇಂತಹ ಪರಿಸ್ಥಿತಿ ನೋಡಿ, ಮರುಕ ಪಟ್ಟ ಯುವಕ ಅದನ್ನು ನೋಡಿ ಸುಮ್ಮನಾಗಲಿಲ್ಲ. ಆತ ಒಂದು ದೃಢ ನಿರ್ಧಾರವನ್ನು ಮಾಡಿದ‌. ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಒಂದು ಮಾನವೀಯ ಕಾರ್ಯವನ್ನು ಮಾಡಲು ಆರಂಭಿಸಿಯೇ ಬಿಟ್ಟ. ಕಳೆದ ಸಾವಿರಕ್ಕಿಂತಲೂ ಹೆಚ್ಚು ದಿನಗಳಿಂದಲೂ ಈ ಯುವಕ ನಿರಂತರವಾಗಿ ಈ ಕಾರ್ಯ ಮಾಡುತ್ತಿದ್ದಾನೆ.

ಪ್ರತಿದಿನ ಬೆಳಿಗ್ಗೆ ನಗರದ ಮೂರು ಪ್ರಮುಖ ಆಸ್ಪತ್ರೆಗಳಾದ ನಿಲೌಫರ್, ಕೋಟಿ ಮತ್ತು ನಿಮ್ಸ್ ಆಸ್ಪತ್ರೆಗಳ ಹೊರಗೆ 26 ವರ್ಷದ ಮೊಹಮ್ಮದ್ ಸುಜತುಲ್ಲಾನಿಗಾಗಿ ಅದೆಷ್ಟೋ ಜನರು ಕಾಯುತ್ತಿರುತ್ತಾರೆ. ಆತನು ತನ್ನ ಬೈಕ್‌ನಲ್ಲಿ ಬರುತ್ತಿರುವುದನ್ನು ನೋಡಿದ ತಕ್ಷಣ, ಜನರೆಲ್ಲಾ ಸಾಲಾಗಿ ನಿಲ್ಲುತ್ತಾರೆ. ಆತ ತಂದು ಹಂಚುವ ರವೆ ಉಪ್ಪಿಟ್ಟು ಹಾಗೂ ಚಟ್ನಿಯ ತಿಂಡಿಯನ್ನು ಬಹಳ ಖುಷಿಯಿಂದ ಪಡೆಯುತ್ತಾರೆ. ಹಸಿದ ಹೊಟ್ಟೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂಬುದನ್ನು ಅರಿತು ಕೊಟ್ಟ ಆಹಾರವನ್ನು ಸಂತಸದಿಂದ ತಿನ್ನುವರು ಅವರೆಲ್ಲಾ.

ಸಜಾತುಲ್ಲಾ ಫಾರ್ಮಸಿಯಲ್ಲಿ ಪಿ‌.ಹೆಚ್.ಡಿ. ಮಾಡಲು ಸಜ್ಜಾಗುತ್ತಿದ್ದಾರೆ. ಅವರು ಹಸಿದವರಿಗೆ ನೆರವು ನೀಡಲು ನಿಂತಾಗ ಕೆಲವರು ತಮ್ಮ ಧರ್ಮದವರಿಗೆ ಮಾತ್ರ ಸಹಾಯ ಮಾಡು ಎಂದಾಗ, ಈ ಯುವಕ ಹಸಿವಿಗೆ ಧರ್ಮವಿಲ್ಲ ಎಂದು ಹೇಳಿದರಂತೆ. ತನ್ನ ಜೀವ ಇರುವವರಿಗೆ ತನ್ನ ಎನ್.ಜಿ.ಓ ಮೂಲಕ ಹಸಿದವರಿಗೆ ಒಂದು ಹೊತ್ತಿನ ಊಟವನ್ನು ಕೊಡುವ ಪ್ರಯತ್ನವನ್ನು ಕೈ ಬಿಡುವುದಿಲ್ಲ ಎನ್ನುವ ಅವರ ಕಣ್ಣಲ್ಲಿ ಮಾನವೀಯತೆ ಮಿನುಗುತ್ತದೆ. ತಮ್ಮ ಲೈಫ್, ಬಿಂದಾಸ್ ಮಾತು, ಎಂಜಾಯ್ಮೆಂಟ್ ಎಂದೆಲ್ಲಾ ಸುತ್ತುವ ಯುವ ಜನರ ನಡುವೆ ಸಜಾತುಲ್ಲಾ ತನ್ನ ಸುತ್ತಲಿರುವ ಹಸಿದ ಜನರ ಬಗ್ಗೆ ಯೋಚಿಸುವ ಅವರ ಮಾನವೀಯ ಗುಣದಿಂದಾಗಿ ಜನರ ಮೆಚ್ಚುಗೆ ಗಳಿಸಿದ್ದಾರೆ.written by E.Somashekar suddimane 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here