ಮಹಾಮಹಿಮನಾದ ಪರಮ ಶಿವನ ಅನೇಕ ದೇವಾಲಯಗಳು ನಮ್ಮ ದೇಶದಲ್ಲಿದೆ. ಅದರಲ್ಲೂ ಕೆಲವು ಶಿವಾಲಯಗಳು ತಮ್ಮದೇ ಆದ ವೈಶಿಷ್ಟ್ಯದಿಂದ ಹೆಸರುಗಳಿಸಿವೆ. ಅಂತಹ ಮಂದಿರಗಳಲ್ಲಿ ಒಂದು ವಿಶೇಷ ಹಾಗೂ ಅದ್ಬುತವಾದ ಶಿವ ಮಂದಿರ ಹಿಮಾಚಲ ಪ್ರದೇಶದ ಕುಲುವಿನಲ್ಲಿದೆ. ಈ ಶಿವಾಲಯವು ಬಿಜ್ಲಿ ಶಿವ ಮಂದಿರ ಎಂದು ಸುಪ್ರಸಿದ್ಧ. ಬಿಜ್ಲಿ ಎಂದರೆ ಮಿಂಚು ಎಂಬ ಅರ್ಥವನ್ನು ನೀಡುತ್ತದೆ. ಕುಲುವಿನ ಬ್ಯಾಸ್ ಮತ್ತು ಪಾರ್ವತಿ ನದಿಯ ಸಂಗಮದ ಬಳಿ ಒಂದು ಎತ್ತರವಾದ ಪರ್ವತದ ಮೇಲೆ ಈ ಮಹಿಮಾನ್ವಿತ ಮಂದಿರವಿದೆ. ಇನ್ನು ಈ ಆಲಯದ ಶಿವಲಿಂಗದ ಜೊತೆ ಒಂದು ಅದ್ಭುತವೇ ಬೆಸೆದು‌ಕೊಂಡಿದೆ.

ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಈ ಆಲಯದ ಶಿವಲಿಂಗದ ಮೇಲೆ ಪ್ರಬಲ ಮಿಂಚು ಬೀಳುತ್ತದೆ. ಆಗ ಈ ಶಿವಲಿಂಗ ಖಂಡಿಸಲ್ಲಡುತ್ತದೆ. ಖಂಡಿಸಲ್ಪಟ್ಟ ಶಿವಲಿಂಗದ ಚೂರುಗಳನ್ನು ಅರ್ಚಕರು ಸಂಗ್ರಹಿಸಿ, ಅದಕ್ಕೆ ಬೆಣ್ಣೆಯಿಂದ ಅದನ್ನು ಅಂಟಿಸಿ, ಮತ್ತೆ ಶಿವಲಿಂಗದ ರೂಪ ನೀಡುತ್ತಾರೆ. ಹೀಗೆ ಕೆಲವು ತಿಂಗಳು ಕಳೆದಂತೆ ಖಂಡಿಸಲ್ಪಟ್ಟ ಶಿವಲಿಂಗ ಯಾವುದೋ ಮಾಯೆ ಎಂಬಂತೆ ತನ್ನ ಮೂಲ ಸ್ವರೂಪವನ್ನು ಪಡೆಯುತ್ತದೆ.
ಇಲ್ಲಿನ ಸ್ಥಳ ಪುರಾಣದ ಪ್ರಕಾರ ಕುಲಾಂತ ಎಂಬ ಸರ್ಪ ರೂಪದ ದೈತ್ಯನನ್ನು ಮಹಾಶಿವನು ತನ್ನ ತ್ರಿಶೂಲದಿಂದ ಸಂಹರಿಸಿದ ಮೇಲೆ, ಆ ಸರ್ಪವೇ ಪರ್ವತವಾಯಿತು ಎನ್ನಲಾಗಿದೆ.

ಶಿವನು ಈ ಪ್ರದೇಶದ ರಕ್ಷಣೆಗಾಗಿ, ಇಲ್ಲಿನ ಜನರ ಸಂರಕ್ಷಣೆಗಾಗಿ ಇಂದ್ರ ದೇವ ನಿಗೆ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಮೇಲೆ ಮಿಂಚು ಬೀಳಲಿ ಎಂದು ಹೇಳಿದನಂತೆ. ಇಂದಿಗೂ ಜನ ಮಹಾಶಿವನೇ ಆ ಪ್ರದೇಶದ ರಕ್ಷಕನೆಂದು ನಂಬಿದ್ದಾರೆ. ಶಿವನ ಈ ಮಹಿಮಾನ್ವಿತ ಮಂದಿರ ಸಮುದ್ರ ಮಟ್ಟದಿಂದ ಸುಮಾರು 2450 ಮೀಟರ್ ಎತ್ತರದಲ್ಲಿದ್ದು, ಒಂದು ಪ್ರಶಾಂತವಾದ ಸ್ಥಳದಲ್ಲಿ ಇದ್ದು, ಭಕ್ತಿಯಿಂದ ಬರುವ ಭಕ್ತರ ಪಾಲಿಗೆ ಒಂದು ದಿವ್ಯ ಮಂಗಳ ಶಿವ ಸಾನಿಧ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here