ಎಲ್ಲಾ ಕಡೆ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಾ ಹೋದಂತೆ ಜನರಲ್ಲಿ ಇದು ಆತಂಕವನ್ನು ಹುಟ್ಟು ಹಾಕಿದೆ. ಏರುತ್ತಿರುವ ಪ್ರಕರಣಗಳಿಂದ ಎಲ್ಲಿ ಹೇಗೆ ಕೊರೊನಾ ಹರಡುತ್ತದೆ ಎಂದು ಹೇಳುವುದು ಕಠಿಣ ಎನಿಸಿದೆ‌. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಕೂಡಾ ಇದೀಗ ಕರೊನಾ ಭೀತಿ ಶುರುವಾಗಿದೆ ಎನ್ನಲಾಗಿದೆ. ರೇವಣ್ಣನವರಿಗೆ ಕೊರೊನಾ ಭೀತಿ ಉಂಟಾಗಲು ಕಾರಣವಾಗಿದ್ದಾದರೂ ಏನು ಎನ್ನುವುದಾದರೆ, ರೇವಣ್ಣನವರ ಬೆಂಗಾವಲು ವಾಹನದ ನಾಲ್ವರು ಪೊಲೀಸರಿಗೆ ಈಗಾಗಲೇ ಕರೊನಾ ಸೋಂಕು ದೃಢಪಟ್ಟಿದ್ದು ಇದು ರೇವಣ್ಣನವರಲ್ಲಿ ಆತಂಕವನ್ನು ಉಂಟು ಮಾಡಿದೆ ಎನ್ನಲಾಗಿದೆ.

ರೇವಣ್ಙನವರು ಇತ್ತೀಚಿಗೆ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರಲ್ಲೂ ಕೂಡಾ ಈ ವಿಷಯವು ಆತಂಕವನ್ನು ತಂದೊಡ್ಡಿದೆ ಎನ್ನಲಾಗಿದೆ‌. ರೇವಣ್ಣನವರ ಎಸ್ಕಾರ್ಟ್ ವಾಹನದಲ್ಲಿ ಕಾರ್ಯ‌ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒಬ್ಬ ಸಿಬ್ಬಂದಿ ಇದ್ದು, ನಾಲ್ವರಲ್ಲೂ ಕೂಡಾ ಕೊರೊನಾ ಸೋಂಕು ದೃಢಪಟ್ಟಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಇರುವ ಹೆಚ್.ಡಿ ರೇವಣ್ಣ ಅವರಿಗೆ ಕೂಡಾ ಈ ವಿಷಯದಿಂದಾಗಿ ಕೊರೊನಾ ವೈರಸ್‌ ಭೀತಿಯನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ.

ಕಳೆದ ಕೆಲವು ದಿನಗಳಿಂದ ಕರ್ತವ್ಯ ನಿರತರಾಗಿರು ಪೊಲೀಸರಲ್ಲಿ ಸಹಾ ಕರೊನಾ ಸೋಂಕು ಕಂಡು ಬರುತ್ತಿರುವ ಕಾರಣದಿಂದಾಗಿ ರೇವಣ್ಣನವರ ಬೆಂಗಾವಲು ಪಡೆಯಲ್ಲಿರುವ ಒಂಬತ್ತು ಮಂದಿ ಸಿಬ್ಬಂದಿಗೆ ಕೂಡಾ ಸೋಂಕಿನ ಪರೀಕ್ಷೆಯನ್ನು ಮಾಡಿಸಲಾಗಿತ್ತು. ಹೀಗೆ ಪರೀಕ್ಷೆಗೆ ಒಳಗಾದವರಲ್ಲಿ ಇಬ್ಬರು ರೇವಣ್ಣ ಅವರ ಆಪ್ತ ಸಹಾಯಕರಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾಲ್ವರು ಪೊಲೀಸರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ರೇವಣ್ಣ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here