ಜಪಾನಿನ ಕಂಪನಿಯೊಂದು ಅಸಾಮಾನ್ಯ ಎನಿಸಿರುವ ಒಂದು ಹೊಸ ಸೇವೆಯನ್ನು ಒದಗಿಸಲು ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೋಗಳಿಗಾಗಿ ನಕಲಿ ಸ್ನೇಹಿತರನ್ನು ಪೂರೈಸುವ ಸೇವೆಯನ್ನು ಗ್ರಾಹಕರಿಗೆ ಬಾಡಿಗೆಗೆ ನೀಡುವ ಅವಕಾಶವೊಂದನ್ನು ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು ಆನ್‌ಲೈನ್‌ನಲ್ಲಿ ಹೆಚ್ಚು ಜನಪ್ರಿಯರಾಗಲು ಬಯಸುತ್ತಾರೆ. ಅಂತಹವರಿಗಾಗಿ ಅವರ ಫೋಟೋಗಳು ಜನಪ್ರಿಯವಾಗಲು ರಿಯಲ್ ಅಪೀಲ್ ಇಂತಹ ಒಂದು ಹೊಸ ಸೇವೆ ನೀಡಲು ಮುಂದಾಗಿದೆ.

ಸಮಾಚಾರ ವೆಬ್ಸೈಟ್ ಒಂದರ ಪ್ರಕಾರ ಗ್ರಾಹಕರು ಫೋಟೋ ಕ್ಯಾಟಲಾಗ್‌ನಿಂದ ಒಂದು ಅಥವಾ ಹೆಚ್ಚಿನ ನಕಲಿ ಸ್ನೇಹಿತರನ್ನು ಆಯ್ಕೆ ಮಾಡಬಹುದು ಮತ್ತು ಲಿಂಗ, ವಯಸ್ಸು ಮತ್ತು ಫ್ಯಾಷನ್ ಪ್ರಜ್ಞೆಯಂತಹ ಕೆಲವು ಗುಣಲಕ್ಷಣಗಳನ್ನು ಅಲ್ಲಿ ನಿರ್ದಿಷ್ಟವಾಗಿ ತಿಳಿಸಬಹುದು. ಅನಂತರ ತಮ್ಮ
ಮಾಜಿ ಪಾರ್ಟ್ನರ್ಸ್ ಅನ್ನು ಅಸೂಯೆ ಪಡಿಸಲು ಬಳಕೆದಾರರು ತಮಗೆ ಹೊಸ ಪ್ರೀತಿ ಸಿಕ್ಕಿದೆ ಎಂದು, ಹೊಸ ಪ್ರೇಮದ ಆಸಕ್ತಿಯಿದು ಎಂದು ಫೋಟೋಗಳ ಮೂಲಕ ತೋರಿಸಿಕೊಳ್ಳಲು ಕೂಡಾ ಕೆಲವರನ್ನು ಕೆಲವು ದಿನಗಳವರೆಗೆ ತಮ್ಮ ಜೊತೆಗೆ ಮಾತ್ರ ಫೋಟೋಗಳಲ್ಲಿ ಕಾಣಿಸಿಕೊಳ್ಳಲು ಮೊದಲೇ ಬುಕ್ಕಿಂಗ್ ಮಾಡಿಸುವ ಸೌಲಭ್ಯ ಕೂಡಾ ಇದೆ.

ರಿಯಲ್ ಅಪೀಲ್ ವೆಬ್‌ಸೈಟ್‌ನಲ್ಲಿನ ಕೆಲವು ಮಾದರಿ ಫೋಟೋಗಳನ್ನು ನೀಡಿದ್ದು, ಬಾಡಿಗೆ ಸ್ನೇಹಿತರು, ಬಾಡಿಗೆ ಸಂಗಾತಿಗಳು ಗ್ರಾಹಕರ ಜೊತೆ ಬಹಳ ಸಲಿಗೆಯಿಂದ ಇರುವಂತೆ, ಸಂತೋಷಪಟ್ಟಂತೆ ಫೋಟೋಗಳಿಗೆ ಪೋಸ್ ನೀಡುತ್ತಾ ವರ್ತಿಸುತ್ತಾರೆ.
ಬುಕಿಂಗ್ ಕನಿಷ್ಠ ಎರಡು ಗಂಟೆಗಳ ಕಾಲ ಇರಬೇಕು, ಪ್ರತಿ ನಕಲಿ ಸ್ನೇಹಿತನನ್ನು ನೇಮಿಸಿಕೊಳ್ಳಲು 8,000 ಯೆನ್ (£ 57) ವೆಚ್ಚವಾಗುತ್ತದೆ. ನಿಜಕ್ಕೂ ಇದೊಂದು ವಿಚಿತ್ರ ಸೇವೆ ಎನಿಸಿದರೂ ಕೂಡಾ ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟಿದೆ ಎಂದು ತಿಳಿಯುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here