ಕನ್ನಡದ ಜನಪ್ರಿಯ ಕಾರ್ಯಕ್ರಮವೊಂದು ಸದ್ದಿಲ್ಲದೆ ತನ್ನ ಆಟ ನಿಲ್ಲಿಸಲು ಸಿದ್ದವಾಗಿದೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ‘ಫ್ಯಾಮಿಲಿ ಪವರ್’ ರಿಯಾಲಿಟಿ ಶೋ ಮುಕ್ತಾಯದ ಹಂತ ತಲುಪಿದೆ. ವೀಕ್ಷಕರಿಂದ ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ ನಿಂದ ಭಾರಿ ಮೆಚ್ಚುಗೆ ಗಳಿಸಿದ ರಿಯಾಲಿಟಿ ಶೋಗಳ ಪೈಕಿ ‘ಫ್ಯಾಮಿಲಿ ಪವರ್’ ಕೂಡ ಒಂದು. ಕ್ವಿಜ್, ಗೇಮ್ಸ್ ಬಾಂಡ್ ಹಾಗೂ ಲಕ್ಷ ಪ್ರಶ್ನೆ ರೌಂಡ್ ಗಳನ್ನು ಹೊಂದಿದ್ದ ‘ಫ್ಯಾಮಿಲಿ ಪವರ್’ ಕಾರ್ಯಕ್ರಮದ ಕೊನೆಯ ಸಂಚಿಕೆಯ (ಗ್ರ್ಯಾಂಡ್ ಫಿನಾಲೆ) ಚಿತ್ರೀಕರಣ ಇದೇ ವಾರಾಂತ್ಯ (ಶನಿವಾರ) ಸಂಜೆ 5 ಗಂಟೆಯಿಂದ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದು, ಆಸಕ್ತರು ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಭೇಟಿ ನೀಡಬಹುದು. ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ಆದ್ರೆ, ಮೊದಲು ಬಂದವರಿಗೆ ಆದ್ಯತೆ ಇರಲಿದೆ. ‘ಬಿಗ್ ಬಾಸ್’ ವಿನ್ನರ್ ಪ್ರಥಮ್, ರನ್ನರ್ ಅಪ್ ಕಿರಿಕ್ ಕೀರ್ತಿ, ನಿರಂಜನ್ ದೇಶಪಾಂಡೆ, ಸಮೀರಾಚಾರ್ಯ, ನಟಿ ಸುಜಾತಾ, ಗಾಯಕಿ ಇಂದು ನಾಗರಾಜ್ ಸೇರಿದಂತೆ ಕೆಲ ಸೆಲೆಬ್ರಿಟಿಗಳ ಕುಟುಂಬದವರೂ ಕೂಡ ‘ಫ್ಯಾಮಿಲಿ ಪವರ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ‘ಫ್ಯಾಮಿಲಿ ಪವರ್’ ರಿಯಾಲಿಟಿ ಶೋ ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಯಾವ ಶೋ ಪ್ರಸಾರ ಆಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ‘ಕನ್ನಡದ ಕೋಟ್ಯಾಧಿಪತಿ’ ಬಳಿಕ ಕಿರುತೆರೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತ್ಯಕ್ಷವಾಗಿದ್ದು ‘ಫ್ಯಾಮಿಲಿ ಪವರ್’ ಮೂಲಕವೇ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಮತ್ತು ಕಲರ್ಸ್ ಕನ್ನಡ ವಾಹಿನಿ ಬಡ ಮಕ್ಕಳು ಹಾಗೂ ಅನಾಥ ಮಕ್ಕಳು ಹಾಗು ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡಿ ಕಾರ್ಯಕ್ರಮದ ಅರ್ಥ ಹೆಚ್ಚಿಸಿತ್ತು. ಈಗ ಇದೇ ಶೋಗೆ ಶುಭಂ ಹಾಡುವ ಸಮಯ ಬಂದಿದೆ. ಇಷ್ಟೊಂದು ಜನಪ್ರಿಯತೆ ಪಡೆದ ಫ್ಯಾಮಿಲಿ ಪವರ್ ಕಾರ್ಯಕ್ರಮ ಇಷ್ಟು ಬೇಗ ದಿಢೀರಮೇ ಗ್ರ್ಯಾಂಡ್ ಫಿನಾಲೆ ಬರಲು ಏನು ಕಾರಣ ಎಂದು ಹುಡುಕಿದರೆ ಪುನೀತ್ ರಾಜ್‍ಕುಮಾರ್.! ಪುನೀತ್ ಸದ್ಯ ಸ್ಯಾಂಡಲ್ವುಡ್ ನಂ.೧ ಸೂಪರ್ ಸ್ಟಾರ್ ಬ್ಯಾಕ್ ಟು ಬ್ಯಾಕ್ ನಾಲ್ಕು ಸಿನಿಮಾ ಒಪ್ಪಿಕೊಂಡಿರೋ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸದ್ಯ ನಟಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಇತ್ತ ಫ್ಯಾಮಿಲಿ ಪವರ್ ಕಾರ್ಯಕ್ರಮಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಈ ಕಾರಣ ಪುನೀತ್ ಜನಪ್ರಿಯ ಶೋ ಒಂದನ್ನು ಬೇಗ ಮುಗಿಸಿ ಸಿನಿಮಾದತ್ತ ಗಮನ ಹರಿಸಿದ್ದಾರೆ ಎನ್ನಲಾಗಿದೆ.!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here