ಅಭಿಮಾನದ ಹೆಸರಲ್ಲಿ ಕೆಲವು ಚಿತ್ರನಟರ ಸಂಘಟನೆಗಳು ಮಾಡುತ್ತಿರುವ ಹಣದ ಸುಲಿಗೆಗೆ ನಿಸ್ವಾರ್ಥ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಈ ಮೂಲಕ ಅಭಿಮಾನಿಗಳಿಗೆ ಅಭಿಮಾನಿಗಳೇ ಅಭಯ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಪ್ರಶಂಸೆಗೆ ಪಾತ್ರವಾಗಿದೆ. ಡಾ.ರಾಜ್ ಕುಟುಂಬದ ಅಭಿಮಾನಿಗಳು ಹಣ ಸುಲಿಗೆ ಮಾಡುವ ಯಾವುದೇ ನಟನ ಅಭಿಮಾನಿಯಾದರು ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಇದರ ಜೊತೆ ಅಭಿಮಾನದ ಹೆಸರಲ್ಲಿ ಹಣ ಕೀಳಲು ಮುಂದಾಗುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಮಿಟೂ ಮಾದರಿಯಲ್ಲೆ ಹೊಸ ಅಭಿಯಾನ ಆಗುವ ಸಾಧ್ಯತೆ ಇದೆ. ಅಭಿಮಾನಿಗಳು ನೀಡಿರುವ ಆ ಸಂದೇಶ ಏನು ನೀವೇ ಓದಿ.

 

 

ಅಭಿಮಾನಿಗಳು ಓದಲೇಬೇಕಾದ ವಿಷಯ ಪ್ರತಿಯೊಬ್ಬರೂ ಓದಿ ಎಲ್ಲರಿಗೂ ಹಂಚಿ

ಅಭಿಮಾನಿಗಳು ಮತ್ತು ಹಣ ಎಂಬ ಬೇಡಿಕೆ – ಒಡಂಬಿಡಿಕೆ

ಅಭಿಮಾನ ಮತ್ತು ಅಭಿಮಾನಿಗಳು ಎನ್ನುವ ಈ ವಿಷಯ ಅತೀ ಹೆಚ್ಚು ಹುಟ್ಟೋದು ಸಿನಿಮಾರಂಗ ಮತ್ತು ರಾಜಕೀಯ ಕ್ಷೇತ್ರದ ನಾಯಕರಿಗೆ. ಪ್ರತಿಯೊಬ್ಬ ಅಭಿಮಾನಿಗೂ ಒಂದಲ್ಲ ಒಂದು ರೀತಿಯಲ್ಲಿ ನಾವು ತುಂಬ ಇಷ್ಟ ಪಡುವ ತಮ್ಮ ಮೆಚ್ಚಿನ ನಾಯಕರನ್ನು ನೋಡುವ ಹಂಬಲ ಇದ್ದೆ ಇರುತ್ತೆ. ಅದರಲ್ಲೂ ಸಿನಿಮಾ ನಾಯಕರ ಅಭಿಮಾನಿಗಳಿಗೆ ಹಂಬಲಕ್ಕಿಂತ ಹುಚ್ಚು ಅಭಿಮಾನ ಇರುತ್ತೆ. ಎಷ್ಟೇ ಕಷ್ಟವಾದರೂ ಸರಿ ಜೀವನದಲ್ಲಿ ಒಂದು ಸರಿಯಾದರೂ ನಾವು ಪೂಜಿಸುವ, ಆರಾಧಿಸುವ ನಮ್ಮ ಹೀರೋವನ್ನು ಕಣ್ಣಾರೆ ನೋಡುವ, ಅವರನ್ನು ಒಂದು ಸಲವಾದರೂ ಮುಟ್ಟುವ, ಮಾತಾಡಿಸುವ, ಅವರ ಜೊತೆ ನಿಂತು ಒಂದು ಫೋಟೋ ತೆಗಿಸಿಕೊಳ್ಳುವ ಹುಚ್ಚು ಪ್ರೀತಿ ಅಭಿಮಾನ ಇದ್ದೇ ಇರುತ್ತೆ. ಎಷ್ಟೋ ಅಭಿಮಾನಿಗಳು‌‌ ದೂರದ ಊರಿನಿಂದ ನಡೆದುಕೊಂಡು, ಸೈಕಲ್ನಲ್ಲಿ‌ ಬಂದು ತಮ್ಮ ಹೀರೋವನ್ನು ನೋಡಿದ್ದು ಇದೆ.

ಇನ್ನೂ ವಿದೇಶದಿಂದ ಬಂದು ನೋಡಿದ ಉದಾಹರಣೆಗಳು ಇವೆ. ಇಂಥ ಮುಗ್ಧತೆಯಿಂದ ಕೂಡಿದ ಹುಚ್ಚು ಅಭಿಮಾನವನ್ನು ಕೆಲವರು ಅಭಿಮಾನದ ಹೆಸರಲ್ಲಿ ಹಾಗೂ ಅಭಿಮಾನಿ ಸಂಘಗಳ‌ ಹೆಸರಿನಲ್ಲಿ‌ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಈಗ ಕಂಡುಬರುತ್ತಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇರುವ ನಾಯಕ ನಟರ ಅಭಿಮಾನಿ ಸಂಘಗಳಲ್ಲಿ‌ ಕೆಲವರು “ನಾವು ಹೀರೋವನ್ನು ತೋರಿಸುತ್ತೇವೆ, ಅವರ ಸಿನಿಮಾ ಕಾರ್ಯಕ್ರಮಗಳಿಗೆ ( ಸಿನಿಮಾ ಮೂಹುರ್ತ, ಟೀಜರ್, ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮಗಳು) ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಹಣ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ”. ಇದು ಯಾವುದೋ ಒಬ್ಬ ನಟನ ಸಂಘದ ಕತೆಯಲ್ಲ ಪ್ರತಿಯೊಬ್ಬ ನಟರ ಕೆಲವು ಸಂಘಗಳ ಕಥೆ..! ಈ ಮೂಲಕ ಅಭಿಮಾನಿಗಳಿಗೆ ಹೇಳ ಬಯಸುವುದೇನೆಂದರೆ ನಿಮ್ಮ‌ಅಚ್ಚುಮೆಚ್ವಿನ ನಟರನ್ನು ನೋಡಲು ಯಾವುದೇ ರೀತಿಯಲ್ಲೂ ಹಣಕೊಟ್ಟು ಬರುವ ಅವಶ್ಯಕತೆ ಇಲ್ಲ.

ನೀವು ಹಣ ಕೊಟ್ಟು ಸಿನಿಮಾ ನೋಡಿದ ಮೇಲೆಯೇ ಕಲಾವಿದರು ನಾಯಕರಾಗಿದ್ದು ಸ್ಟಾರ್ ಗಳಾಗಿದ್ದು. ಅವರನ್ನು ಕಣ್ಣಾರೆ ನೋಡಲು ಮತ್ತೆ ಹಣ ಕೊಟ್ಟು ಬರುವ ಅನಿವಾರ್ಯತೆ ಇರುವುದಿಲ್ಲ. ನೀವು ನೇರವಾಗಿಯೇ ನಟರನ್ನು ಭೇಟೆಯಾಗಬಹುದು, ಕಾರ್ಯಕ್ರಮಗಳಿಗೆ ಬರಬಹುದು. ಯಾವುದೇ ನಟರು ತನ್ನನ್ನು ನೋಡಲು ಬರುವ ಅಭಿಮಾನಿಗಳ ಹತ್ತಿರ ಹಣ ತೆಗೆದುಕೊಳ್ಳುವುದಿಲ್ಲ. ಸಂಘಗಳ ಹೆಸರಿನಲ್ಲಿ ಹಣ ಕೇಳಿದರೆ ಕೊಡಲು ಹೋಗಬೇಡಿ. ಒಂದು ವೇಳೆ ಆ ರೀತಿ ಹಣ ಕೇಳಿದರೆ ಆ ವ್ಯಕ್ತಿಯ ಹೆಸರು ಫೋಟೋ ಮತ್ತು ಸಂಘದ ಹೆಸರನ್ನು ಸೋಶಿಯಲ್ ಮಿಡಿಯಾ ಮೂಲಕ ಎಲ್ಲರಿಗೂ ತಿಳಿಸಿ. ಕಷ್ಟವಾದರೆ ಪರ್ಸನಲ್ ಆಗೇ ಸಂದೇಶ ಕಳಿಸಿ ನಿಮ್ಮ ಅಭಿಮಾನದ ದೇವರನ್ನು ನೋಡಲು ಇನ್ನೊಬ್ಬರ ಅಪ್ಪಣೆಯು ಬೇಕಿಲ್ಲ ಹಣವು ಬೇಕಿಲ್ಲ ಅಭಿಮಾನ ಒಂದೇ ಸಾಕು.

ಜೈ ಕರ್ನಾಟಕ – ಜೈ ಕನ್ನಡ ಸಿನಿಮಾ

ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ Fans too ಎಂಬ ಅಭಿಯಾನ ಶುರು ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here