ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಆಗಲಿಲ್ಲ ಎಂದು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ಬೇಸರಪಟ್ಟಿದ್ದು ಹೌದು‌. ಕೆಲವು ರೈತರು ಹತಾಶೆಯಿಂದ ತಾವು ಬೆಳೆದ ಬೆಳೆಯನ್ನು ನೀರಿಗೆ ಸುರಿದು, ಟ್ರಾಕ್ಟರ್ ಹತ್ತಿಸಿ ಹೀಗೆ ಕಷ್ಟ ಪಟ್ಟು ಬೆಳೆದ ಬೆಳೆಯಿಂದ ನಷ್ಟವಾಯ್ತು ಎಂಬ ನೋವಿನಿಂದ ಹಾಳು ಮಾಡಿದ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅನೇಕರು ಅಯ್ಯೋ ಹೀಗೆ ಹಾಳು ಮಾಡುವ ಬದಲು ಹಸಿದವರಿಗೆ ಹಂಚಿ, ದಾನ ಮಾಡಿ, ನೇರವಾಗಿ ಮಾರಾಟ ಮಾಡಿ ಎಂದೆಲ್ಲಾ ಪ್ರತಿಕ್ರಿಯೆಗಳನ್ನು ನೀಡಿದ್ದರು.

ಆದರೆ ಇಲ್ಲೊಬ್ಬ ರೈತರು ಲಾಕ್ ಡೌನ್ ಹಿನ್ನೆಲೆಯಲ್ಲಿ ತಾನು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದ ಹಿನ್ನೆಲೆಯಲ್ಲಿ, ಅದು ವ್ಯರ್ಥ ಆಗಬಾರದು ಎಂದು ಅದನ್ನು ಜನರಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೊಡಾಲು ಗ್ರಾಮದ ರೈತ ತಿಮ್ಮನಗೌಡ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ ಬೆಳೆದ ಕರ್ಬೂಜ ಹಣ್ಣನ್ನು ಮಾರಾಟವಾಗದೇ ಜಮೀನಿನಲ್ಲೇ ಕೊಳೆಯಬಾರದು ಎನ್ನುವ ಉದ್ದೇಶದಿಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅವರು ಅದನ್ನು ಕರ್ಬೂಜ ಹಣ್ಣುಗಳನ್ನು ಹಂಚಿದ್ದಾರೆ.

ತಿಮ್ಮನಗೌಡ ಅವರು ಲಕ್ಷಾಂತರ ರೂ‌. ಸಾಲ ಮಾಡಿ ತಮ್ಮ ಜಮೀನಿನಲ್ಲಿ ಕರ್ಬೂಜ ಹಣ್ಣನ್ನು ಬೆಳೆದಿದ್ದರು.
ಅವರ ಜಮೀನಿನಲ್ಲಿ ಫಸಲು ಕೂಡಾ ಚೆನ್ನಾಗಿ ಬಂದಿದೆ. ಆದರೆ ಕೊರೊನಾ ತಂದಿಟ್ಟ ಆತಂಕದಿಂದ ಅತ್ತ ಮಾರುಕಟ್ಟೆ ಸಾಗಿಸಲು, ಇತ್ತ ಮಾರಾಟವಾಗಲೂ ಸಾಧ್ಯವಾಗದ ಅತಂತ್ರ ಪರಿಸ್ಥಿತಿಯಲ್ಲಿ ಹಣ್ಣು ಕೊಳೆತು ವ್ಯರ್ಥ ಆಗಬಾರದೆಂದು, ಅವರು ತಮ್ಮ ಎಂಟು ಎಕರೆಯಲ್ಲಿ ಬೆಳೆದ ಹಣ್ಣನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಂಚಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here