ವಿವಾದಿತ ಜಮೀನೊಂದರಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಮತ್ತು ತೆಂಗಿನ ಮರಗಳನ್ನು ಅಮಾನವೀಯವಾಗಿ ಕತ್ತರಿಸಿ, ಅದನ್ನು ಬೆಳೆದ ರೈತನ ಕಷ್ಟದ ಮೇಲೆ ತನ್ನ ಅಟ್ಟಹಾಸವನ್ನು ಮೆರೆದಿದ್ದಾರೆ ಸ್ಥಳೀಯ ಅಧಿಕಾರಿಯೊಬ್ಬರು. ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಗುಬ್ಬಿ ಜಿಲ್ಲೆಯ ತಿಪ್ಪೂರು ಗ್ರಾಮದಲ್ಲಿ. ಈ ಗ್ರಾಮದಲ್ಲಿ ತುಮಕೂರು ಕಂದಾಯ ಅಧಿಕಾರಿಗಳು ಸುಮಾರು 100 ಅಡಿಕೆ ಮರ ಹಾಗೂ 50 ತೆಂಗಿನ ಮರಗಳನ್ನು ಕತ್ತರಿಸಿ ಹಾಕಿಸಿದ್ದಾರೆ. ಅಧಿಕಾರಿಗಳ ಈ ವರ್ತನೆಗೆ ಗ್ರಾಮದ ಜನರು ತೀವ್ರವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅಧಿಕಾರಿಗಳ ದುರ್ವರ್ತನೆಗೆ ಸಿಟ್ಟಾಗಿದ್ದಾರೆ.‌

ಗ್ರಾಮ ಲೆಕ್ಕಿಗ ಮುರಳಿ ಎನ್ನುವವರು ಗುಬ್ಬಿ ತಹಸೀಲ್ದಾರ್ ಮಮತಾ ಅವರು ನೀಡಿರುವ ಆದೇಶ ಇದೆ ಎನ್ನುವ ಕಾರಣ ನೀಡಿ ವಿವಾದಿತ ಜಮೀನಿನಲ್ಲಿ ಇದ್ದ ಎಲ್ಲಾ ಮರಗಳನ್ನು ಕಡಿಸಿ ಹಾಕಿದ್ದಾರೆ. ಆದರೆ ಗ್ರಾಮದ ಜನರು ತಹಸೀಲ್ದಾರ್ ಆದೇಶ ನೀಡಿಲ್ಲ ಎಂದಿದ್ದು, ಈ ಕ್ರಮವನ್ನು ಎದುರಿಸಿ ರೈತ ವಿರೋಧಿ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ಈ ಜಮೀನಿನ ವಿಚಾರಕ್ಕೆ ಬಂದರೆ ಈ ಜಮೀನು ಗ್ರಾಮದ ಉಡಸಲಮ್ಮ ದೇವಾಲಯಕ್ಕೆ ಸೇರಿದ್ದು, ಈ ಜಮೀನನ್ನು ಸಿದ್ಧಮ್ಮ ಮುನಿ ಕೆಂಪಯ್ಯ ಎಂಬುವವರಿಗೆ ದಶಕಗಳ ಹಿಂದೆಯೇ ಉಚಿತವಾಗಿ ನೀಡಲಾಗಿತ್ತು.

ಈ ಜಮೀನಿನಲ್ಲಿ ಮುನಿ ಕೆಂಪಯ್ಯ ತೆಂಗು ಮತ್ತು ಅಡಿಕೆ ಬೆಳೆಯುತ್ತಿದ್ದರು. ಅಲ್ಲದೆ ಜಮೀನಿನ ಮೇಲೆ ಸಂಪೂರ್ಣ ಸ್ವಾಧೀನ ಕೋರಿ ಜಿಲ್ಲಾಧಿಕಾರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು ಕೂಡಾ. ದೇವಾಲಯದ ಆರು ಜನ ಅರ್ಚಕರು ಕೂಡಾ ದೇವಾಲಯದ ಜಾಗಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಜೂನ್ 6 ಕ್ಕೆ ವಿಚಾರಣೆಯ ದಿನಾಂಕ ನಿಗಧಿ ಮಾಡಿತ್ತು. ವಿವಾದ ಕೋರ್ಟ್ ನಲ್ಲಿ ಇರುವಾಗಲೇ ಗ್ರಾಮ ಲೆಕ್ಕಿಗನು ಮರಗಳನ್ನು ಕಡಿದು ಹಾಕಿಸುವ ಮೂಲಕ ತನ್ನ ದರ್ಪವನ್ನು ಮೆರೆದಿದ್ದು, ಸರ್ಕಾರ ಇಲ್ಲಿನ ರೈತನ ಕಣ್ಣೀರಿಗೆ ಸ್ಪಂದಿಸುವುದೇ? ಎಂಬುದನ್ನು ಕಾದು ನೋಡಬೇಕಿದೆ.

*ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ತಾಲ್ಲೂಕು ದಂಡಾಧಿಕಾರಿಯಿಂದ ಮಹಿಳಾ ದಿನಾಚರಣೆ ದಿನವೇ ಮಹಿಳೆಯ ಮೇಲೆ ದೌರ್ಜನ್ಯ*ತುಮಕೂರು ಜಿಲ್ಲೆ…

Suddi Mane यांनी वर पोस्ट केले रविवार, ८ मार्च, २०२०

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here