ಜೀವನದಲ್ಲಿ ಸಾಧನೆ ಅಥವಾ ಯಶಸ್ಸು ಎನ್ನುವುದನ್ನು ಪಡೆಯಲು ಕಠಿಣ ಶ್ರಮ ಮತ್ತು ಸಮರ್ಪಣೆಯ ಭಾವಗಳು‌‌ ಅತಿ ಮುಖ್ಯ, ವಯಸ್ಸು ಅಥವಾ ಸಮಸ್ಯೆಗಳು ಇದರ ಎದುರು ತಲೆ ಬಾಗುತ್ತವೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಐದು ವರ್ಷದ ಮಗುವಿನ ತಾಯಿ ಅರ್ಚನಾ.
ಬಿಹಾರ ರಾಜಧಾನಿಯ ಕಂಕರ್‌ಬಾಗ್ ಪ್ರದೇಶದಲ್ಲಿ ಜನಿಸಿದ ಅರ್ಚನಾ, ಸರನ್ ಜಿಲ್ಲೆಯ ಸೋನೆಪುರ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಗೌರಿ ನಂದನ್ ಅವರ ಪುತ್ರಿ. ಬಾಲ್ಯದಲ್ಲಿ ತನ್ನ ತಂದೆ ಜವಾನನಾಗಿ ಕೆಲಸ ಮಾಡುವುದು ಅರ್ಚನಾ ಗೆ ಇಷ್ಟ ಆಗುತ್ತಿರಲಿಲ್ಲವಂತೆ. ಆಗಲೇ ಆಕೆ ಮನಸ್ಸಿನಲ್ಲಿ ಒಂದಲ್ಲಾ ಒಂದು ದಿನ ನಾನು ಜಡ್ಜ್ ಆಗಲೇಬೇಕೆಂದು ನಿರ್ಧಾರ ಮಾಡಿದ್ದರಂತೆ.

ಆದರೆ ತಂದೆಯ ಅಕಾಲ ಮರಣದ ನಂತರ ಶಿಕ್ಷಣ ಮುಂದುವರೆಸುವುದು ಅರ್ಚನಾ ಅವರಿಗೆ ಸುಲಭವಾಗಿ ಇರಲಿಲ್ಲ. ಆದರೆ ಅವರ ತಾಯಿ ಮಗಳ ಪ್ರತಿ ಹೆಜ್ಜೆಗೂ ಜೊತೆಯಾಗಿ ನಿಂತರು. ಸರ್ಕಾರಿ ಶಾಲೆಯಲ್ಲಿ ಹನ್ನೆರಡನೇ ತರಗತಿ ಮುಗಿಸಿ, ಪಾಟ್ನಾ ವಿಶ್ವವಿದ್ಯಾಲಯ ದಲ್ಲಿ ಪದವಿ ಪಡೆದು, ಶಾಲೆಯೊಂದರಲ್ಲಿ ಕಂಪ್ಯೂಟರ್ ಟೀಚರ್ ಆದರು. ಅನಂತರ ಮದುವೆ ನಡೆಯಿತು. ಮದುವೆ ನಂತರ ಇನ್ನು ತನ್ನ ಆಸೆ ಬಿಡಬೇಕೇನೋ ಎನಿಸುವಾಗಲೇ, ಪಾಟ್ನಾ ಮೆಡಿಕಲ್ ಕಾಲೇಜಿನಲ್ಲಿ ಕ್ಲರ್ಕ್ ಆಗಿರುವ ಅರ್ಚನಾ ಅವರ ಪತಿ ರಾಜೀವ್ ರಂಜನ್ ಪತ್ನಿಗೆ ತನ್ನ ಗುರಿ ತಲುಪಲು ಪ್ರೋತ್ಸಾಹ ನೀಡಿದರು.

ಹೀಗೆ ಕುಟುಂಬದ ಪ್ರೋತ್ಸಾಹದಿಂದ ಮುಂದೆ ನಡೆದ ಅರ್ಚನಾ ತಮ್ಮ ಎಲ್‌.ಎಲ್.ಬಿ‌ ಮುಗುಸಿ, ನಂತರ ಎಲ್.ಎಲ್.ಎಂ ಕೂಡಾ ಮುಗಿಸಿದರು. ದೆಹಲಿಯಲ್ಲಿ ಕೋಚಿಂಗ್ ಪಡೆದರು. ಹೀಗೆ ಎಲ್ಲಾ ಪ್ರಯತ್ನಗಳ ನಂತರ ತನ್ನ ಎರಡನೇ ಪ್ರಯತ್ನದಲ್ಲಿ ಬಿಹಾರ ನ್ಯಾಯಾಂಗ ಸೇವೆಯನ್ನು ಪೂರ್ಣಗೊಳಿಸಿರುವ ಅರ್ಚನಾ ಅವರು ಈಗ ನ್ಯಾಯಾಧೀಶರಾಗಲು ಸಜ್ಜಾಗಿದ್ದಾರೆ. ಆದರೆ ತನ್ನ ಈ ಸಾಧನೆಯನ್ನು ನೋಡಲು ತನ್ನ ಅಪ್ಪ ತನ್ನ ಜೊತೆಯಲ್ಲಿ ಇಲ್ಲ ಎಂಬ ನೋವು ಅರ್ಚನಾ ಅವರಿಗಿದೆ.‌ ಗುರಿ ತಲುಪುವ ಧ್ಯೇಯ ಇದ್ದರೆ ಸಾಧನೆಗೆ ಅಡ್ಡಿಗಳಿಲ್ಲ ಎಂಬುದಕ್ಕೆ ಅರ್ಚನಾ‌ ಮಾದರಿಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here