ಇದೇ ಫೆಬ್ರವರಿ 4 ನೇ ತಾರೀಖು ಬೆಂಗಳೂರು ಬಂದ್ ಆಗಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಫೆಬ್ರವರಿ ನಾಲ್ಕರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ.ಅವರು ಬೆಂಗಳೂರಿಗೆ ಆಗಮಿಸುವ ವೇಳೆ ಬಿಜೆಪಿ ನಾಯಕರು ಮಹದಾಯಿ ಬಗ್ಗೆ ಚರ್ಚಿಸುವ ಭರವಸೆ ನೀಡಿದರೆ ಮಾತ್ರ ಫೆಬ್ರವರಿ ನಾಲ್ಕರ ಬೆಂಗಳೂರು ಬಂದ್ ಅನ್ನು ಹಿಂಪಡೆಯುತ್ತೇವೆ
ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮೋದಿಯವರು ಬೆಂಗಳೂರಿಗೆ ಬರುವ ವೇಳೆ ಮಹದಾಯಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಲಿ.ಭರವಸೆ ನೀಡಿದರೆ ಕೂಡಲೇ ಬಂದ್ ಮಾಡುವ ನಿರ್ಧಾರವನ್ನು ಕೈ ಬಿಡುವುದಾಗಿ ತಿಳಿಸಿದ್ದಾರೆ.ಇನ್ನು ವಾಟಾಳ್ ನಾಗರಾಜ್ ಅವರ ಪತ್ರಿಕಾಗೋಷ್ಠಿ ಕುರಿತಂತೆ ಬಿಜೆಪಿಯ ಆರ್.ಅಶೋಕ್ ಮಾತನಾಡಿ ಇದೆಲ್ಲಾ ಕಾಂಗ್ರೆಸ್ ಕೈವಾಡ .ಪದೇ ಪದೇ ಬಂದ್ ಮಾಡಿಸುವ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here